ಬದಿಯಡ್ಕ: ಪ್ರತಿಷ್ಠಿತ ಕ್ಯಾಂಪೆÇ್ಕ ಸಂಸ್ಥೆ ವತಿಯಿಂದ ಆರೋಗ್ಯ ಇಲಾಖೆ ಮೂಲಕ ಬಡ ಕೋವಿಡ್ ರೋಗಿಗಳಿಗೆ ಚಿಕಿತ್ಸಾವೇಳೆ ಒದಗಿಸಲು ಸುಮಾರು 2 ಲಕ್ಷ ರೂಪಾಯಿ ಮೌಲ್ಯದ ಪಲ್ಸ್ ಓಕ್ಸಿ ಮೀಟರುಗಳನ್ನು ಕಾಸರಗೋಡು ಜಿಲ್ಲಾಧಿಕಾರಿ ಡಾ. ಸಜಿತ್ ಬಾಬು ಅವರಿಗೆ ಕ್ಯಾಂಪೆÇ್ಕ ಉಪಾಧ್ಯಕ್ಷ ಶಂ. ನಾ. ಖಂಡಿಗೆ ಹಸ್ತಾಂತರಿಸಿದರು.
ಮನೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಡ ಕೋವಿಡ್ ರೋಗಿಗಳಿಗೆ ವಿತರಿಸಲು ಆರೋಗ್ಯ ಇಲಾಖೆಗೆ ಜಿಲ್ಲಾಧಿಕಾರಿಯವರು ನಿರ್ದೇಶನವನ್ನಿತ್ತರು. ಕ್ಯಾಂಪೆÇ್ಕ ನಿರ್ದೇಶಕರಾದ ಸತೀಶ್ಚಂದ್ರ ಭಂಡಾರಿ ಕೋಳಾರು, ಪದ್ಮರಾಜ್ ಪಟ್ಟಾಜೆ ಮತ್ತು ಬದಿಯಡ್ಕ ರೀಜನಲ್ ಮೆನೇಜರ್ (ಪ್ರಭಾರಿ) ಪ್ರದೀಪ್ ಕುಮಾರ್ ಜೊತೆಗಿದ್ದರು.


