HEALTH TIPS

ಹೊಸಂಗಡಿಯಲ್ಲಿ 40ನೇ ವರ್ಷದ "ಮಂಜೇಶ್ವರ ಸಾರ್ವಜನಿಕ ಶ್ರೀ ಗಣೇಶೋತ್ಸವ" ಭಕ್ತಿ ಸಂಹಿತೆಯಿಂದ ಆಚರಣೆ-ಕೋವಿಡ್ ಹಿನ್ನೆಲೆಯಲ್ಲಿ ಜಿಲ್ಲೆಯ ಏಕೈಕ ಗಣೇಶೋತ್ಸವ ಸಂಪನ್ನ!

  

     ಮಂಜೇಶ್ವರ: ಜಿಲ್ಲೆಯ ಪ್ರಸಿದ್ಧ ಸಾರ್ವಜನಿಕ ಗಣೇಶೋತ್ಸವ ಆಚರಣೆಗಳಲ್ಲಿ ಒಂದಾದ  "ಮಂಜೇಶ್ವರ ಗಣೇಶೋತ್ಸವ" ಎಂದೇ ಖ್ಯಾತಿ ಪಡೆದಿರುವ ಗಣೇಶೋತ್ಸವ ಕೋವಿಡ್ ನಿಗ್ರಹದ ನೀತಿ ಸಂಹಿತೆಯೊಂದಿಗೆ ಭಕ್ತಾಧಿಗಳ ಭಕ್ತಿ ಪಾರಮ್ಯತೆಯಿಂದ ನಡೆಯಿತು. 

     ಈ ಭಾರಿ 40ನೇ ವರ್ಷದ ಮಂಜೇಶ್ವರ ಗಣೇಶೋತ್ಸವ ಹೊಸಂಗಡಿ ಶ್ರೀ ಅಯ್ಯಪ್ಪ ಕ್ಷೇತ್ರದಲ್ಲಿ  ಸರಳ ರೀತಿಯಲ್ಲಿ ಆಚರಿಸಲ್ಪಟ್ಟಿತು. 

ಇದರಂಗವಾಗಿ  ಬೆಳಿಗ್ಗೆ ತಂತ್ರಿಗಳಾದ ವೇದಮೂರ್ತಿ ನಡಿಬೈಲು ಶ್ರೀ ಶಂಕರ ನಾರಾಯಣ ಭಟ್ ಅವರ ಪೌರೋಹಿತ್ಯದಲ್ಲಿ ಸಾಮೂಹಿಕ ಪ್ರಾರ್ಥನೆ, ಗಣಪತಿ ಹೋಮ ಬಳಿಕ ಗೌರಿ ಪೂಜೆ,ಗಣಪತಿ ದೇವರ ಪ್ರತಿಷ್ಠೆ ಜರಗಿತು. 

     40ನೇ ವರ್ಷದ ಗಣೇಶೋತ್ಸವದ ಧ್ವಜಾ

ರೋಹಣವನ್ನು ಮಂಜೇಶ್ವರ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಯುವ ನ್ಯಾಯವಾದಿ ನವೀನ್ ರಾಜ್ ಕೆ.ಜೆ.ಅವರು ನೇರೆವೇರಿಸಿದರು. ಬಳಿಕ ಸಂಪ್ರದಾಯಿಕವಾಗಿ ನಡೆದ ದೀಪೆÇೀಜ್ವಲನ ಕಾರ್ಯವನ್ನು ಧಾರ್ಮಿಕ ಮುಂದಾಳು,ಕೊಡುಗೈ ದಾನಿ ಮೋಹನ್ ಶೆಟ್ಟಿ ತೂಮಿನಾಡು ನೇರೆವೇರಿಸಿದರು. ಶ್ರೀ ಗಣೇಶ ಚತುರ್ಥಿಯ ಅಂಗವಾಗಿ  108 ಕಾಯಿಯ ಮಹಾಗಣಯಾಗ, ಮಧ್ಯಾಹ್ನದ ಮಹಾಪೂಜೆ ಜರಗಿದ್ದು. ಸರ್ಕಾರದ ನೀತಿ ಸಂಹಿತೆ ಪಾಲಿಸಿಕೊಂಡು  ಗಣೇಶ ಮೂರ್ತಿ ಜಲಸ್ತಂಭನದ ಸಂಪ್ರದಾಯಿಕವಾದ ಶೋಭಯಾತ್ರೆ ಇಲ್ಲಿನ ವಿಶೇಷತೆಯಾಗಿದೆ. 

ಕ್ಷೇತ್ರದಲ್ಲಿ ಸಾಮಾಜಿಕ ಅಂತರ ಪಾಲಿಸಿ ವಿಶೇಷ ಆರತಿ ಹಾಗೂ ಪ್ರಾರ್ಥನೆಗೆ ವ್ಯವಸ್ಥೆ ಮಾಡಲಾಗಿದ್ದು ಮಾಸ್ಕ್ ಧರಿಸಿ,ಸಾನಿಟೈಸರ್ ಮೊದಲಾದ ಸರಕಾರದ ಮಾರ್ಗ ಸೂಚಿಯೊಂದಿಗೆ ಆಸ್ತಿಕ ಜನತೆ ಗಣಪತಿ ದೇವರ ದರ್ಶನ ಭಾಗ್ಯ ಪಡೆದು ಕೃತಾರ್ಥರಾದರು.

        ಶೋಭಾಯಮಾನವಾದ ಶೋಭಾಯಾತ್ರೆಯಲ್ಲಿ ಸಾಗಿ ಕಣ್ವತೀರ್ಥದ ಶ್ರೀರಾಮ ಸಮುದ್ರದಲ್ಲಿ ಗಂಗಾ ಸಮರ್ಪಣೆಗೊಂಡ ಹೊಸಂಗಡಿಯ 40ನೇ ವರ್ಷದ ಗಣಪ:

        ಕೋವಿಡ್19 ಸರಕಾರದ ನಿಬಂಧನೆಗೆ ವಿಧೇಯವಾಗಿ ಮಂಜೇಶ್ವರದಲ್ಲಿ ನಡೆಸಿದ 40ನೇ ವರ್ಷದ ಸಾರ್ವಜನಿಕ   ಗಣೇಶೋತ್ಸವವು ಆಸ್ತಿಕ ವರ್ಗದ ಸಂಪ್ರದಾಯಿಕ ಭಕ್ತಿ ಪರವಶತೆಗೆ ಸಾಕ್ಷಿಯಾಯಿತು

        ಹೊಸಂಗಡಿಯ ಶ್ರೀಅಯ್ಯಪ್ಪ ಕ್ಷೇತ್ರದಲ್ಲಿ ಪೂಜೆಗೊಂಡ ಗಣೇಶ ವಿಗ್ರಹವನ್ನು ಸಂಜೆ ನಡೆದ ಶೋಭ ಯಾತ್ರೆಯ  ಮೂಲಕ ಕೊಂಡೊಯ್ದು ಕಣ್ವತೀರ್ಥದ ಶ್ರೀರಾಮ ಕಡಲ ಕಿನಾರೆಯಲ್ಲಿ ಜಲಸ್ತಂಭನಗೊಳಿಸಲಾಯಿತು.ಶೋಭ ಯಾತ್ರೆಯು ನಿಗದಿತ ಸಮಯಕ್ಕೆ ಕಡಲ ಕಿನಾರೆಯಲ್ಲಿ ಮೊಗವೀರ ಸಮಾಜ ಬಾಂಧವರ ಸಹಕಾರದಲ್ಲಿ ಜಲಸ್ತಂಭನಗೊಳಿಸಲಾಯಿತು.   ಮೆರವಣಿಗೆಯು ಅಯ್ಯಪ್ಪ ಕ್ಷೇತ್ರದಿಂದ ಹೊರಟು ನಿಯಮಾನುಸಾರ ಸಾಗಿ ಹೊಸಂಗಡಿ ಪೇಟೆಯಲ್ಲಾಗಿ ಮಂಜೇಶ್ವರ ಒಳ ಪೇಟೆಯಲ್ಲಾಗಿ ಸಾಗಿ ರಾಷ್ಟ್ರೀಯ ಹೆದ್ದಾರಿ ಮೂಲಕ ಉದ್ಯಾವರದಿಂದ ತೂಮಿನಾಡು ಸಮೀಪದ ಕಣ್ವತೀರ್ಥಕ್ಕೆ ತಲುಪಿತ್ತು. ಈ ಸಂದರ್ಭದಲ್ಲಿ ರಸ್ತೆಯ ಇಕ್ಕೆಲದ ತಮ್ಮ ತಮ್ಮ ಮನೆ ಮುಂಭಾಗದಲ್ಲಿ ಜನ ಭಕ್ತಿಯಿಂದ ಗಣಪನಿಗೆ ನಮಿಸಿದರು.

ಈ ಬಾರಿಯ ಸಾರ್ವಜನಿಕ ಗಣೇಶೋತ್ಸವದ ಶೋಭಾಯಾತ್ರೆಯನ್ನು ಸರ್ಕಾರದ ಮಾರ್ಗ ಸೂಚಿಯಂತೆ ಕಾಸರಗೋಡು ಜಿಲ್ಲೆಯಲ್ಲಿಯೇ ಮಂಜೇಶ್ವರದಲ್ಲಿ ಮಾತ್ರ ನಡೆಸಲಾಗಿದ್ದು, 40ವರ್ಷದ ಗಣೇಶೋತ್ಸವ ಅತ್ಯಂತ  ಯಶಸ್ವಿಯಾಗಲು ಸಹಕರಿಸಿದ ಸರ್ವರಿಗೂ ಸಮಿತಿ ಅಧ್ಯಕ್ಷ ನ್ಯಾಯವಾದಿ ನವೀನ್ ರಾಜ್  ಕೆ.ಜೆ.ಮಂಜೇಶ್ವರ,ಪ್ರಧಾನ ಕಾರ್ಯದರ್ಶಿ ಅವಿನಾಶ್ ಹೆಗ್ಡೆ,ಕೋಶಾಧಿಕಾರಿ ಸುದೀನ್ ವರ್ಕಾಡಿ ಜಂಟಿಯಾಗಿ ಕೃತಜ್ಞತೆ ಸಮರ್ಪಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries