HEALTH TIPS

ಗಾಡ್ ಮದರ್ ಓಫ್ ಕಾರ್ಡಿಯೋಲಜಿ ಇನ್ನಿಲ್ಲ- ಖ್ಯಾತ ಹೃದ್ರೋಗ ತಜ್ಞೆ ಡಾ.ಪದ್ಮಾವತಿ ಕೋವಿಡ್ ಸೋಂಕಿನಿಂದ ನಿಧನ

      ನವದೆಹಲಿ: ಕೋವೀಡ್ -19 ಕಾರಣದಿಂದಾಗಿ ಖ್ಯಾತ ಮಹಿಳಾ ಹೃದ್ರೋಗ ತಜ್ಞೆ ಡಾ ಎಸ್ ಪದ್ಮಾವತಿ ನಿಧನರಾಗಿದ್ದಾರೆ. ಅವರಿಗೆ 103 ವರ್ಷ ವಯಸ್ಸಾಗಿತ್ತು. 

       ಅವರು ಕಳೆದ 11 ದಿನಗಳಿಂದ ರಾಷ್ಟ್ರೀಯ ಹೃದಯ ಸಂಸ್ಥೆ(ಎನ್‌ಎಚ್‌ಐ) ಚಿಕಿತ್ಸೆ ಪಡೆಯುತ್ತಿದ್ದರೆಂದು ವೈದ್ಯರು ತಿಳಿಸಿದ್ದಾರೆ.

     "ಗಾಡ್ ಮದರ್ ಆಫ್ ಕಾರ್ಡಿಯಾಲಜಿ" ಎಂದು ಪ್ರಸಿದ್ಧವಾಗಿರುವ ಭಾರತದ ಮೊದಲ ಮಹಿಳಾ ಹೃದ್ರೋಗ ತಜ್ಞ ಡಾ. ಎಸ್. ಪದ್ಮಾವತಿ ಆಗಸ್ಟ್ 29 ರಂದು ಕೋವಿಡ್ಸೋಂಕಿನಿಂದ ನಿಧನರಾದರು "ಎಂದು ಎನ್ಎಚ್ಐ ಹೇಳಿಕೆಯಲ್ಲಿ ತಿಳಿಸಿದೆ. 

      ಎನ್‌ಎಚ್‌ಐ ಸ್ಥಾಪಪರಾಗಿದ್ದ ಅವರು  1917 ರಲ್ಲಿ ಬರ್ಮಾದಲ್ಲಿ (ಈಗ ಮ್ಯಾನ್ಮಾರ್) ಜನಿಸಿದರು,. "ಅವರು ಕೋವಿಡ್ 19  ಸೋಂಕಿಗೆ ತುತ್ತಾಗಿದ್ದರು. ಉಸಿರಾಟದ ತೊಂದರೆ ಮತ್ತು ಜ್ವರ ಸಹ ಕಾಣಿಸಿಕೊಂಡಿತ್ತು. ಅವರು ಇತ್ತೀಚೆಗೆ ನ್ಯುಮೋನಿಯಾದಿಂದಲೂ ಬಳಲುತ್ತಿದ್ದರು. ವೆಂಟಿಲೇಟರ್ ಅಗತ್ಯವಿತ್ತು. ಆದರೆ ಆಕೆಗೆ ಹೃದ್ಯಾಘಾತವಾಗಿದ್ದು ನಮ್ಮ ಪ್ರಯತ್ನ ವಿಫಲವಾಗಿದೆ" ಎನ್‌ಎಚ್‌ಐ  ತಿಳಿಸಿದೆ.

       ಡಾ. ಪದ್ಮಾವತಿಯವರನ್ನು ಭಾನುವಾರ ಪಂಜಾಬಿ ಬಾಗ್‌ನಲ್ಲಿ ಗೊತ್ತುಪಡಿಸಿದ ಕೋವಿಡ್ 19 ಶವಾಗಾರದಲ್ಲಿ ಅಂತ್ಯಸಂಕ್ಸಾರ ಮಾಡಲಾಗಿದೆ. ಅವರು ಎರಡನೇ ಮಹಾಯುದ್ಧದ ಸಮಯದಲ್ಲಿ 1942 ರಲ್ಲಿ ಭಾರತಕ್ಕೆ ಬಂದಿದ್ದರು.ರಂಗೂನ್ ವೈದ್ಯಕೀಯ ಕಾಲೇಜಿನಿಂದ ಪದವಿ ಪಡೆದಿದ್ದ ಪದ್ಮಾವತಿ ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ತೆರಳಿಭಾರತಕ್ಕೆ ಹಿಂದಿರುಗಿದ ನಂತರ, ಅವರು ಲೇಡಿ ಹಾರ್ಡಿಂಗ್ ವೈದ್ಯಕೀಯ ಕಾಲೇಜಿನಲ್ಲಿ ಅಧ್ಯಾಪಕರಾಗಿ  ಸೇರಿದ್ದರು.

      1962 ರಲ್ಲಿ, ಡಾ. ಪದ್ಮಾವತಿ ಅವರು ಆಲ್ ಇಂಡಿಯಾ ಹಾರ್ಟ್ ಫೌಂಡೇಶನ್ ಅನ್ನು ಸ್ಥಾಪಿಸಿದರು ಮತ್ತು 1981 ರಲ್ಲಿ ದೆಹಲಿಯಲ್ಲಿ ಆಧುನಿಕ ಹೃದಯ ಆಸ್ಪತ್ರೆಯಾಗಿ ನ್ಯಾಷನಲ್ ಹಾರ್ಟ್ ಇನ್ಸ್ಟಿಟ್ಯೂಟ್ ಅನ್ನು ಸ್ಥಾಪಿಸಿದರು, ದಕ್ಷಿಣ ಭಾಗದಲಿ ಖಾಸಗಿ ವಲಯದಲ್ಲಿ ಮೊದಲ ಹೃದಯ ಕ್ಯಾಟಿಟೆರೈಸೇಶನ್ ಪ್ರಯೋಗಾಲಯವನ್ನು ಹೊಂದಿದ್ದರು ಎಂದು ಎನ್ಎಚ್ಐ ತಿಳಿಸಿದೆ.

      ಭಾರತದಲ್ಲಿ ಹೃದ್ರೋಗಶಾಸ್ತ್ರದ ಅಭಿವೃದ್ಧಿಗೆ ಅವರು ನೀಡಿದ ಕೊಡುಗೆ ಅಪಾರವಾಗಿದ್ದು ಅವರಿಗೆ ಅಮೇರಿಕನ್ ಕಾಲೇಜ್ ಆಫ್ ಕಾರ್ಡಿಯಾಲಜಿ ಮತ್ತು ಎಫ್‌ಎಎಂಎಸ್ ಗೌರವ,  1967 ರಲ್ಲಿ ಪದ್ಮವಿಭೂಷಣ, 1992 ರಲ್ಲಿ ಪದ್ಮಭೂಭೂಷಣ ಪ್ರಶಸ್ತಿ ಸಂದಿತ್ತು. 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries