ಎರ್ನಾಕುಳಂ: ಕೋವಿಡ್ ರೋಗಿಗಳ ದೂರವಾಣಿ ಕರೆ ವಿವರಗಳನ್ನು ಸಂಗ್ರಹಿಸುತ್ತಿರುವುದಕ್ಕಾಗಿ ಪ್ರತಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ ಅವರು ಪೆÇಲೀಸರ ವಿರುದ್ಧ ಸಲ್ಲಿಸಲಾದ ಅರ್ಜಿಯನ್ನು ನ್ಯಾಯಾಲಯ ತಳ್ಳಿದ್ದು ಕೋವಿಡ್ ಬಾಧಿತರ ಮೊಬೈಲ್ ಟವರ್ ಆಧರಿಸಿ ಬಾಧಿತರ ಸಂಪರ್ಕ ಪಟ್ಟಿ ಸಿದ್ದಪಡಿಸಲು ಮಾತ್ರ ಈ ಕ್ರಮವೆಂಬ ಪೆÇಲೀಸ್ ಇಲಾಖೆಯ ವಾದವನ್ನು ನ್ಯಾಯಾಲಯ ಎತ್ತಿಹಿಡಿದಿದೆ. ಇದರಲ್ಲಿ ಯಾವುದೇ ತಪ್ಪಿಲ್ಲ ಮತ್ತು ಪೆÇಲೀಸ್ ಕ್ರಮದಲ್ಲಿ ಯಾವುದೇ ದುಷ್ಕøತ್ಯವಿಲ್ಲ ಎಂದು ನ್ಯಾಯಾಲಯ ತೀರ್ಪು ನೀಡಿದೆ. ಮುಖ್ಯ ನ್ಯಾಯಮೂರ್ತಿ ಎಸ್ ಮಾಣಿಕುಮಾರ್ ನೇತೃತ್ವದ ನ್ಯಾಯಪೀಠ ಶುಕ್ರವಾರ ಈ ಮಹತ್ತರ ಆದೇಶವನ್ನು ಅಂಗೀಕರಿಸಿತು.
ಕೋವಿಡ್ ಬಾಧಿತರ ದೂರವಾಣಿ ಕರೆಗಳ ಬಗ್ಗೆ ಮಾಹಿತಿಗಳನ್ನು ಬೇರೆ ಇದ್ದೇಶಗಳಿಗೆ ಬಳಸಲಾಗುತ್ತಿಲ್ಲ ಮತ್ತು ಮೊಬೈಲ್ ಫೆÇೀನ್‍ನ ಟವರ್ ಗಳ ಸ್ಥಳವನ್ನು ಮಾತ್ರ ಪರಿಶೀಲಿಸಲಾಗುತ್ತಿದೆ ಎಂದು ಪೆÇಲೀಸರು ಹೈಕೋರ್ಟ್‍ಗೆ ತಿಳಿಸಿದ್ದಾರೆ. ಮೊಬೈಲ್ ಕಂಪನಿಗಳಿಗೆ ಮೊಬೈಲ್ ಫೆÇೀನ್ ಕರೆಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡುವ ಸೌಲಭ್ಯವಿದೆ. ಆದರೆ ಟವರ್ ಗಳ ಸ್ಥಳವನ್ನು ಮಾತ್ರ ಪೆÇಲೀಸರು ಪರಿಶೀಲಿಸುತ್ತಿದ್ದಾರೆ ಎಂದು ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿದೆ. ಕೋವಿಡ್ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಮತ್ತು ಸೋಂಕು ಬಾಧಿತರ ಮೊಬೈಲ್ ಟವರ್ ರೇಂಜ್ ಗಳನ್ನು ಪರೀಕ್ಷಿಸುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.
ಸೋಂಕಿಗೊಳಗಾದವರ ಮೊಬೈಲ್ ಫೆÇೀನ್ ಕರೆ ಮಾಹಿತಿಯನ್ನು ಸಂಗ್ರಹಿಸುವುದು ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಪ್ರತಿಪಕ್ಷದ ನಾಯಕ ನ್ಯಾಯಾಲಯದಲ್ಲಿ ವಾದಿಸಿದರು. ಆದರೆ ಸೋಂಕು ಬಾಧಿತರ ದೂರವಾಣಿ ಕರೆಗಳ ಮಾಹಿತಿ ಅಗತ್ಯವಿಲ್ಲ. ರೋಗನಿರ್ಣಯದ 14 ದಿನಗಳ ಬಳಿಕ ಮಾತ್ರ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ ಎಂದು ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿದೆ.


