ಮಂಜೇಶ್ವರ: ಸರಕಾರಿ ಪ್ರೌಢ ಶಾಲೆ ಉದ್ಯಾವರ, ಇಲ್ಲಿ 74ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸರಳವಾಗಿ ಯಾದರೂ ವಿಶೇಷ ರೀತಿಯಲ್ಲಿ ಆಚರಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಉದಯ ಕುಮಾರಿ ಯವರು ಧ್ವಜಾರೋಹಣಗೈದರು. ಕೋರೋನ ಕಾಲದ ಸೈನಿಕರಂತೆ ಹಗಲಿರುಳು ನಮಗಾಗಿ ದುಡಿದ ಮಂಜೇಶ್ವರ ಪ್ರಾಥಮಿಕ ಆರೋಗ್ಯ ಕೇಂದ್ರ ದ ಉದ್ಯಾವರ ಪ್ರಾಥಮಿಕ ಆರೋಗ್ಯ ಉಪ ಕೇಂದ್ರದ ಆರೋಗ್ಯಾಧಿಕಾರಿ ಶ್ರೀ ಮುಹಮ್ಮದ್ ಕುಂಞಿ ಅವರನ್ನು "ಕೋವಿಡ್ ವಾರಿಯರ್" ಎಂದು ಗೌರವಿಸಿ ಶಾಲಾ ವತಿಯಿಂದ ಸನ್ಮಾನಿಸಲಾಯಿತು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಶ್ರೀ ಅಬ್ದುಲ್ ರಝಾಕ್ ಕೆದುಂಬಾಡಿ ಶಾಲು ಹೊದಿಸಿ ಗೌರವಿಸಿ ಶಾಲಾ ಮುಖ್ಯೋಪಾಧ್ಯಾಯಿನಿ ನೆನಪಿನ ಕಾಣಿಕೆಯನ್ನು ನೀಡಿದರು. ಅದೇ ರೀತಿ ಶಾಲಾ FTCM ವೇಣುಗೋಪಾಲ್ ರವರಿಗೆ ದುರದೃಷ್ಟವಶಾತ್ ಕೋವಿಡ್ ರೋಗ ಭಾಧಿಸಿ ಅತಿ ಶೀಘ್ರದಲ್ಲಿ ರೋಗ ಮುಕ್ತಿ ಗೊಂಡು ಮರಳಿ ಯಥಾಸ್ಥಿತಿ ಸೇವೆಗೆ ಆಗಮಿಸಿದ ಪ್ರಯುಕ್ತ ಅವರನ್ನು "ಕೋವಿಡ್ ವಾರಿಯರ್" ಎಂದು ಗೌರವಿಸಿ ಅಭಿನಂದನೆಗಳನ್ನು ಸಲ್ಲಿಸಿ ಸನ್ಮಾನಿಸಲಾಯಿತು.
ಶಾಲಾ ಮಕ್ಕಳಿಲ್ಲದೇ ಆಚರಿಸಿದ ಸ್ವಾತಂತ್ರ್ಯಾನಂತರದ ಮೊದಲ ಸ್ವಾತಂತ್ರ್ಯ ದಿನಾಚರಣೆ ವಿಶೇಷ ರೀತಿಯಲ್ಲಿ
0
ಆಗಸ್ಟ್ 22, 2020
74 ನೇ ಸ್ವಾತಂತ್ರ್ಯೋತ್ಸವದ ಇನ್ನೊಂದು ವಿಶೇಷ ಎಂದರೆ ಶಾಲೆಗೆ SSLC ಯಲ್ಲಿ ಸತತ 9 ನೇ ಬಾರಿ 100% ಫಲಿತಾಂಶ ತಂದ ಮಕ್ಕಳ ಪೈಕಿ ಶ್ರೇಷ್ಠ ಅಂಕಗಳನ್ನು ಪಡೆದು ಹೆತ್ತವರಿಗೂ,ಶಾಲೆಗೂ ಕೀರ್ತಿ ತಂದ ಅವಿಶ ಡಿ ಸೋಜ, ಶ್ರಾವ್ಯ,ಶ್ರೇಯ, ಮತ್ತು ವೀಕ್ಷಿತ ಎಂಬ ನಾಲ್ಕು ಮಕ್ಕಳನ್ನು ಅವರ ಹೆತ್ತವರೊಂದಿಗೆ ಗೌರವಿಸಲಾಯಿತು.
ಕೊರೋನ ರೋಗಿಗಳ ಅವಸ್ಥೆಯ ಬಗ್ಗೆ ಸ್ವತಃ ಕೋವಿಡ್ ಬಾಧಿಸಿದ ವೇಣುಗೋಪಾಲ್ ವಿವರಿಸಿದಾಗ ಎಲ್ಲರೂ ಭಾವೋದ್ರೊದ್ವಿಕ್ತರಾದರು.
ಆರೋಗ್ಯಾಧಿಕಾರಿಗಳ ಸೇವೆಯ ಮುಂದೆ ನಾವೇನೂ ಅಲ್ಲ. ಅವರದೇ ಮಾತಿನ ಪ್ರಕಾರ ಅವರಿಗಿಂತಲೂ ರೋಗಿಗಳ ನೇರ ಸೇವೆ ಮಾಡುತ್ತಿರುವ ವೈದ್ಯರು ದಾದಿಯರು, ಸಹಾಯಕರು ಅವರ ಸಂಕಷ್ಟಭರಿತ ಜೀವನದ ನಡುವೆ ಅವರಿಗೆ ಎಷ್ಟು ಗೌರವ ಸಲ್ಲಿಸಿದರೂ ಕಡಿಮೆಯೇ. ಆದರೂ ಶ್ರೀಯುತರನ್ನು ಗೌರವಿಸಿದ ಶಾಲೆಯ ಎಲ್ಲಾ ಅಧ್ಯಾಪಕರಿಗೆ ಕೃತಜ್ಞತೆಗಳನ್ನು ಸಲ್ಲಿಸಿ ಈ ಗೌರವ ಎಲ್ಲಾ ಕೋರೋನ ವಾರಿಯರ್ಸ್ ಗಳಿಗೆ ಸಲ್ಲಲಿ ಎಂದು ಮುಕ್ತ ಕಂಠವಾಗಿ ಘೋಷಿಸಿದರು.
ಅಂತೂ ಮಕ್ಕಳಿಲ್ಲದೆ ನಡೆಸಿದ ಸ್ವಾತಂತ್ರ್ಯ ನಂತರದ ಮೊದಲ ಸ್ವಾತಂತ್ರ್ಯ ದಿನಾಚರಣೆ ಆದರೂ ಎಂದೆಂದಿಗೂ ನೆನಪಿನಂಗಳದಲ್ಲಿ ಉಳಿಯುವಂತಾಯಿತು.


