ಕಾಸರಗೋಡು: ಶಾಲಾ ಹಂತದಿಂದ ಪದವಿಪೂರ್ವ, ಸ್ನಾತಕೋತ್ತರ ಮತ್ತು ವೃತ್ತಿಪರ ಹಂತದವರೆಗೆ ಒಬಿಸಿ, ಅಲ್ಪಸಂಖ್ಯಾತ ವಿಭಾಗದ ವಿದ್ಯಾರ್ಥಿಗಳ ಕಲಿಯುವಿಕೆ ಸಂಬಂಧಿಸಿ ಲ್ಯಾಪ್‍ಟಾಪ್ ಖರೀದಿಗೆ ಕೇರಳ ರಾಜ್ಯ ಹಿಂದುಳಿದ ವಿಭಾಗ ಅಭಿವೃದ್ಧಿ ನಿಗಮವು ಸಾಲ ಒದಗಿಸುತ್ತಿದೆ.
ವೃತ್ತಿಪರ ಕೋರ್ಸ್‍ಗಳನ್ನು ಕಲಿಯುವ ವಿದ್ಯಾರ್ಥಿಗಳಿಗೆ ಶೇ.6 ಬಡ್ಡಿದರದಲ್ಲಿ ಗರಿಷ್ಠ 1 ಲಕ್ಷ ರೂ.ವರೆಗೆ ಮತ್ತು ಇತರ ಕೋರ್ಸ್‍ಗಳನ್ನು ಕಲಿಯುವ ವಿದ್ಯಾರ್ಥಿಗಳಿಗೆ ಗರಿಷ್ಠ 50,000 ರೂ.ವರೆಗೆ ಸಾಲ ಮಂಜೂರು ಮಾಡಲಾಗುವುದು.
18 ವರ್ಷ ಪೂರ್ತಿಯಾದ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿಗಳ ಪರವಾಗಿ ಪೆÇೀಷಕರು ಅರ್ಜಿ ಸಲ್ಲಿಸಬಹುದು.ಅರ್ಜಿದಾರರ ವಾರ್ಷಿಕ ಕುಟುಂಬ ಆದಾಯ 3 ಲಕ್ಷ ಮೀರಬಾರದು. ಅರ್ಜಿದಾರರು ತಾವು ಖರೀದಿಸಲು ಉದ್ದೇಶಿಸಿದ ಲ್ಯಾಪ್‍ಟಾಪ್‍ನ ಕೊಟೇಶನ್ ಮತ್ತು ಇನ್ವೋಯ್ಸ್ ಹಾಜರುಪಡಿಸಬೇಕು.
ಲ್ಯಾಪ್‍ಟಾಪ್ ಖರೀದಿಯ ಕೊಟೇಶನ್, ಇನ್ವೋಯ್ಸ್ ಪ್ರಕಾರ ಪೂರ್ಣ ಮೊತ್ತವನ್ನು ಸಾಲವಾಗಿ ನೀಡಲಾಗುವುದು.ಹೆಚ್ಚಿನ ಮಾಹಿತಿ ksbcdc.com ನಲ್ಲಿ ಲಭ್ಯವಿದೆ. ಅರ್ಜಿ ನಮೂನೆಗಳು ನಿಗಮದ ಜಿಲ್ಲಾ ಮತ್ತು ಉಪ ಜಿಲ್ಲಾ ಕಚೇರಿಗಳಲ್ಲಿ ಲಭ್ಯವಿದೆ.


