ಕಾಸರಗೋಡು: ವಿಶ್ವಮಟ್ಟದ ಅತ್ಯುತ್ತಮ ಕವನ ಪ್ರಶಸ್ತಿಗೆ ಕಾಸರಗೋಡು ಜಿಲ್ಲೆಯ ಮಹಿಳೆಯೋರ್ವೆಗೆ ಆಯ್ಕೆಯಾಗಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಅಂತರಾಷ್ಟ್ರೀಯ ಕವಿಗಳ ಸಂಘಟನೆಯಾದ ಮೋಟ್ಟಿವೇಶನಲ್ ಸಟಿಪ್ರೈಸ್ ಹಾಗೂ ಗುಜರಾತ್ ಸಾಹಿತ್ಯ ಅಕಾಡೆಮಿ ಸಂಯುಕ್ತವಾಗಿ ಆಯೋಜಿಸಿದ್ದ 80 ದೇಶಗಳ ಅತ್ಯುತ್ತಮ ಕವನ ಕೃತಿಗಳನ್ನು ಆಹ್ವಾನಿಸಿತ್ತು. ಇದರಲ್ಲಿ ಭಾಗವಹಿಸಿದ್ದ ಕರಿಂದಳ ನಿವಾಸಿ ಜಯಲಕ್ಷ್ಮಿ ಈ ಬಹುಮಾನ ಬಂದಿದೆ. ಜಯಲಕ್ಷ್ಮಿ ಅವರು ಭಾರತದ 105 ಕವಿಗಳಲ್ಲಿ ಪ್ರಶಸ್ತಿಗೆ ಆಯ್ಕೆಯಾದರು.
ಜಯಲಕ್ಷ್ಮೀ ಕರಿಂದಳ 400 ಕ್ಕೂ ಹೆಚ್ಚು ಕವನಗಳನ್ನು ಬರೆದಿದ್ದಾರೆ. ಆನ್‍ಲೈನ್ ಕವನ ನಿಯತಕಾಲಿಕೆಗಳಲ್ಲಿ ನಿಯಮಿತವಾಗಿ ಕವನಗಳನ್ನು ಪ್ರಕಟಿಸುತ್ತಿದ್ದಾರೆ. ಪ್ರಕೃತಿಯ ಶೋಷಣೆ, ಪ್ರಾಣಿಗಳ ಮೇಲಿನ ಕ್ರೌರ್ಯ ಮತ್ತು ಸಾಮಾಜಿಕ ಅನ್ಯಾಯದ ಬಗ್ಗೆ ವಸ್ತುವಿಷಯವಾಗಿ ಅವರು ಕವನಗಳನ್ನು ಬರೆದು ಗಮನ ಸೆಳೆದವರಾಗಿದ್ದಾರೆ. ಜಯಲಕ್ಷ್ಮಿ ಅವರ ನಿರೂಪಣಾ ಶೈಲಿ ಆಧ್ಯಾತ್ಮಿಕತೆ ಮತ್ತು ಪ್ರಕೃತಿಯ ಪ್ರೀತಿಯ ಸಂಯೋಜನೆಯಾಗಿದೆ.
ಅವರು ಕವನ ಗುಂಪುಗಳಾದ ಪೆÇೀಮರಿಯಮ್, ಪೆನ್ ವಂಡರ್ ಆರ್ಡಿಸಾಟಸ್, ಪ್ರೋಗ್ರೇನ್ಸ್ ಓಫ್ ರೆಟ್ಟಿಂಗ್ ಶೀ, ವಲ್ರ್ಡ್ ವೈಡ್ ರೈಟರ್ಸ್ ಇಂಡಿಯನ್ ಪೆÇಯೆಟ್ರಿ ಫೆÇೀರಮ್, ವಲ್ರ್ಡ್ ಇಂಗ್ಲಿಷ್ ರೈಟರ್ಸ್ ಯೂನಿಯನ್ ಮತ್ತು ಗ್ಲೋಬಲ್ ಫ್ರಾಟರ್ನಿಟಿ ಆಫ್ ಪೆÇಯೆಟ್ರಿ ಮೊದಲಾದ ಸಾಹಿತ್ಯ ತಂಡಗಳ ಸದಸ್ಯೆಯೂ ಆಗಿದ್ದಾರೆ. ಜಯಲಕ್ಷ್ಮೀ ಅವರು ಕಾಸರಗೋಡಿನ ಕರಿಂದಳದ ಮಕ್ಕಳ ವೈದ್ಯ ಡಾ. ಸಿ.ಕೆ.ನಾರಾಯಣನ್ ಅವರ ಪತ್ನಿ.


