HEALTH TIPS

ಕಾಸರಗೋಡು ಜಿಲ್ಲೆ ಇದೀಗ ರಾಜ್ಯಕ್ಕೇ ಮಾದರಿ!-ರೋಗ ಲಕ್ಷಣಗಳಿಲ್ಲದೇ ಇರುವ ಕೋವಿಡ್ ರೋಗಿಗಳಿಗೆ ಸ್ವಗೃಹಗಳಲ್ಲೇ ದಾಖಲಾತಿ ಚಿಕಿತ್ಸೆ ಆರಂಭ

   

             ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ರೋಗ ಲಕ್ಷಣಗಳಿಲ್ಲದೇ ಇರುವ ಕೋವಿಡ್ ರೋಗಿಗಳಿಗೆ ಸ್ವಗೃಹಗಳಲ್ಲೇ ದಾಖಲಾತಿ ಚಿಕಿತ್ಸೆ ಆರಂಭಗೊಂಡಿದೆ. ಈ ನಿಟ್ಟಿನಲ್ಲಿ ಈಗ 151 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

          ಆರ್.ಟಿ.ಪಿ.ಸಿ.ಆರ್., ಆಂಟಿಜೆನ್ ಟೆಸ್ಟ್ ಪಾಸಿಟಿವ್ ಆಗಿದ್ದರೂ, ಯಾವುದೇ ರೋಗ ಲಕ್ಷಣ ಹೊಂದದೇ ಇರುವ ಕೋವಿಡ್ ರೋಗಿಗಳನ್ನು ತಮ್ಮ ತಮ್ಮ ಮನೆಗಳಲ್ಲೇ ದಾಖಲಾತಿ ನಡೆಸಿ ಚಿಕಿತ್ಸೆ ನೀಡುವ ವಿಧಾನ ಇದೀಗ ಆರಂಭಗೊಂಡಿದೆ. ರಾಜ್ಯದಲ್ಲೇ ಪ್ರಪ್ರಥಮ ಬಾರಿಗೆ ಈ ವ್ಯವಸ್ಥೆ ಕಾಸರಗೋಡು ಜಿಲ್ಲೆಯಲ್ಲಿ ಪ್ರಾರಂಭಗೊಂಡಿದೆ. 

        ಕಾಸರಗೋಡು ನಗರಸಭೆ ವ್ಯಾಪ್ತಿಯಲ್ಲಿ , ಚೆರುವತ್ತೂರು ಗ್ರಾಮಪಂಚಾಯತ್ , ಉದುಮಾ, ಪಂಚಾಯತ್ ಗಳಲ್ಲಿ ,  ನೀಲೇಶ್ವರ ನಗರಸಭೆ ಗಳಲ್ಲಿ ಮಂದಿ ಮನೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

        ಸ್ವಗೃಹಗಳಲ್ಲಿ ಚಿಕಿತ್ಸೆಗೆ ಒಳಗಾಗುತ್ತಿರುವ ಮಂದಿಗೆ ವೈದ್ಯರು ಟೆಲಿ-ಮೆಡಿಸಿನ್ ಸೌಲಭ್ಯ ಮೂಲಕ ಚಿಕಿತ್ಸೆ ಖಚಿತಪಡಿಸುತ್ತಿದ್ದಾರೆ. ಇಂಥಾ ರೋಗಳಿಗಳು ಸ್ವ-ನಿಗಾ ದಲ್ಲಿದ್ದು, ಇತರರೊಂದಿಗೆ ಯಾವುದೇ ಸಂಪರ್ಕ ಹೊಂದದೇ, ಬದಲಾವಣೆಗಳಿದ್ದಲ್ಲಿ ಸಂಬಂಧಪಟ್ಟವರಿಗೆ ತಿಳಿಸುವವಿಧಾನ ಇತ್ಯಾದಿ ತರಬೇತಿ ನೀಡಲಾಗಿದೆ. ಆಯಾ ಗ್ರಾಮ ಪಂಚಾಯತ್ ಗಳ ವೈದ್ಯಾಧಿಕಾರಿಗಳ ನೇತೃತ್ವದಲ್ಲಿ ಇವರ ಚಿಕಿತ್ಸೆ ಸಂಬಂಧ ವಿಚಾರಗಳ ಏಕೀಕಿರಣ ನಡೆಯುತ್ತಿದೆ. 

       ಕಾಸರಗೋಡು ಜಿಲ್ಲಾ ಮಟ್ಟದಲ್ಲಿ ಚೆಮ್ನಟ್ಟಂವಯಲ್ ವಿಜ್ಞಾನ ಉದ್ಯಾನದ ಕೊರೋನಾ ನಿಯಂತ್ರಣ ಕೊಠಡಿಯಲ್ಲಿರುವ ಮಂದಿ ದೂರವಾಣಿ ಮೂಲಕ ರೋಗಿಯೊಂದಿಗೆ ವಿಚಾರ ವಿನಿಮಯ ನಡೆಸುತ್ತಿದ್ದಾರೆ. ರೋಗಿಗೆ ಯಾವುದೇ ರೀತಿಯ ದೈಹಿಕ ಅಸ್ವಾಸ್ಥ್ಯ ತಲೆದೋರಿದರೆ ರಕ್ಷಣ ಆಸ್ಪತ್ರೆಗೆ ದಾಖಲಿಸುವ ಎಲ್ಲ ಸಜ್ಜೀಕರಣ ನಡೆಸಲಾಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. 

     ಸ್ವಗೃಹಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಂದಿ ಮಾನಸಿಕ ಒತ್ತಡಗಳಿಗೆ ಸಿಲುಕಿದ್ದರೆ, ಅದನ್ನು ನಿವಾರಿಸುವ ನಿಟ್ಟಿನಲ್ಲಿ ಕಾಸರಗೋಡು ಜಿಲ್ಲಾ ಮಟ್ಟದ ಮಾನಸಿಕ ಆರೋಗ್ಯ ಕಾರ್ಯಕ್ರಮದ ಅಂಗವಾಗಿ ಟೆಲಿ ಕೌನ್ಸಿಲಿಂಗ್ ಕೂಡ ಲಭ್ಯವಿದೆ.  ದಾಖಲಿಸಿರುವ ಮನೆಗಳ ಬಗ್ಗೆ ವಾರ್ಡ್ ಮಟ್ಟದ ಜಾಗ್ರತಾ ಸಮಿತಿಗಳು ಸೂಕ್ತ ನಿಗಾ ಇರಿಸುತ್ತಿದ್ದಾರೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries