ಕುಂಬಳೆ: ಕುಂಬಳೆ ಸಮೀಪದ ನಾಯ್ಕಾಪಿನಲ್ಲಿ ಸೋಮವಾರ ರಾತ್ರಿ ಯುವಕನೋರ್ವನ ಬರ್ಬರ ಹತ್ಯೆಯ ಬೆನ್ನಿಗೆ ಮಂಗಳವಾರಸಂಜೆ ಮತ್ತಿಬ್ಬರುಯುವಕರು ಆತ್ಮಹತ್ಯೆಗೈದ ಘಟನೆ ನಡೆದಿದ್ದು ಕುಂಬಳೆ ಅಕ್ಷರಶಃ ಬೆಚ್ಚಿಬಿದ್ದಿದೆ.
ಕುಂಬಳೆ-ಬದಿಯಡ್ಕ ರಸ್ತೆಯ ಪೆಟ್ರೋಲ್ ಪಂಪ್ ಸಮೀಪದ ಕುಂಟಂಗೇರಡ್ಕ ಕಾಲನಿ ನಿವಾಸಿಗಳಾದ ರೋಶನ್(19) ಹಾಗೂ ಮನು(18) ಎಂಬವರು ಆತ್ಮಹತ್ಯೆಗೆ ಶರಣಾದವರು. ನಾಯ್ಕಾಪಿನಲ್ಲಿ ಸೋಮವಾರ ರಾತ್ರಿ ಕೊಲ್ಲಲ್ಪಟ್ಟ ಹರೀಶ್ ನ ಹತ್ಯೆಗೈದ ಘಟನೆಗೆ ಸಂಬಂಧಿಸಿ ಓರ್ವನ ಮೇಲೆ ಪೋಲೀಸರು ನಿಗಾ ಇರಿಸಿದ್ದು ಆತನ ಗೆಳೆಯರು ರೋಶನ್ ಮತ್ತು ಮನು ಆಗಿದ್ದರೆಂದು ಪ್ರಾಥಮಿಕ ವರದಿಗಳು ದೃಢೀಕರಿಸಿವೆ. ಕುಂಬಳೆ ಪೋಲೀಸರ ದಂಡು ದೌಡಾಯಿಸಿ ಪ್ರಾಥಮಿಕ ತನಿಖೆಗೆ ಚಾಲನೆ ನೀಡಿದೆ.


