ಕಾಸರಗೋಡು: ಬಿರುಸಿನ ಮಳೆಯ ಪರಿಣಾಮ ಕಾಸರಗೋಡು ಜಿಲ್ಲೆಯ ವಿವಿಧೆಡೆ ಶನಿವಾರ ಪ್ರಕೃತಿ ದುರಂತಗಳು ಸಂಭವಿಸಿದ್ದು, ಸಂರಕ್ಷಣೆ ಚಟುವಟಿಕೆಗಳು ಚುರುಕಾಗಿ ನಡೆಯುತ್ತಿವೆ.
ನೆರೆ : ಕುಟುಂಬಗಳ ಸ್ಥಳಾಂತರ:
ಚಂದ್ರಗಿರಿ ನದಿ ಉಕ್ಕಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ತಳಂಗರೆ ಕೊರಕ್ಕೋಡು ಬಯಲಿನಲ್ಲಿ ಶನಿವಾರ ನೆರೆ ಹಾವಳಿ ತಲೆದೋರಿದ್ದು, 12 ಕುಟುಂಬಗಳ ಮಂದಿ ಸ್ಥಳಾಂತರಗೊಂಡಿದ್ದಾರೆ. ಇಲ್ಲಿನ ಮನೆಗಳು ಅಧಾರ್ಂಶ ಜಲಾವೃತವಾಗಿವೆ. ಇವರಲ್ಲಿ 9 ಕುಟುಂಬಗಳು ತಮ್ಮ ಸಂಬಂಧಿಕರ ಮನೆಗಳಿಗೂ, ಮೂರು ಕುಟುಂಬಗಳು ಸಾರ್ವಜನಿಕರ ಸಹಾಯದೊಂದಿಗೆ ವಸತಿ ಗೃಹಗಳಿಗೂ ಸ್ಥಳಾಂತರಗೊಂಡಿದ್ದಾರೆ.
ಚಂದ್ರಗಿರಿ ನದಿ ಉಕ್ಕಿ ಹರಿದ ಪರಿಣಾಮ ಕಾಸರಗೋಡು ನಗರಸಭೆ ವ್ಯಾಪ್ತಿಯ ತಳಂಗರೆ ಕೊಪ್ಪಲ್ ಪ್ರದೇಶದ 20 ಕುಟುಂಗಳು ಸಂಕಷ್ಟಕ್ಕೀಡಾಗಿದ್ದಾರೆ. ತಳಂಗರೆ ಕುನ್ನಿಲ್ ಸರಕಾರ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಅಭಯಾರ್ಥಿಗಳ ಶಿಬಿರ ಆರಂಭಿಸಲಾಗಿದ್ದು, ಈ ಕುಟುಂಬಗಳ ಸದಸ್ಯರನ್ನು ಸ್ಥಳಾತರಿಸಲಾಗಿದೆ. ಕೊಪ್ಪಲ್ ಪ್ರದೇಶದ 20 ಕುಟುಂಬಗಳ 31 ಮಹಿಳೆಯರು, 7 ಮಂದಿ ಪುರುಷರು, 11 ಮಕ್ಕಳು ತಳಂಗರೆ ಕುನ್ನಿಲ್ ಶಾಲೆಯ ಶಿಬಿರಕ್ಕೆ ಸ್ಥಳಾಂತರಗೊಂಡವರು.
ಪನತ್ತಡಿ ಗ್ರಾಮಪಂಚಾಯತ್ ನ ಮೂರನೇ ವಾರ್ಡ್ ಆಗಿರುವ ಪಡಿಂuಟಿಜeಜಿiಟಿeಜರ್ ಸಂತೋಷ್ ಎಂಬವರ ತುಂಬೋಳಿಯಲ್ಲಿ ಹಟ್ಟಿ ಮತ್ತು ಹಸುಗಳು ನೆರೆಗೆ ಕೊಚ್ಚಿಹೋಗಿವೆ. ಮನೆಗೂ ಹಾನಿಯಾಗಿದೆ. ಹಸುಗಳನ್ನು ಸಂರಕ್ಷಿಸಿ ದಡ ಸೇರಿಸಲಾಗಿದೆ. ಸಂತೋಷ್ ಮತ್ತು ಅವರ ಮನೆಯ ಸದಸ್ಯರನ್ನು ಸಂಬಂಧಿಕರ ಮನೆಗೆ ಸ್ಥಳಾಂತರಿಸಲಾಗಿದೆ.
ಪನತ್ತಡಿ ಪ್ರದೇಶದ ವಿವಿಧೆಡೆ ಗುಡ್ಡದಿಂದ ಮಣ್ಣುಕುಸಿತ ಸಂಭವಿಸಿದೆ. ಕಿನಾನೂರಿನಲ್ಲಿ ನದಿ ಉಕ್ಕಿ ಹರಿದು ಹಾನಿಸಂಭವಿಸಿದ ಪ್ರದೇಶಗಳ 3 ಕುಟುಂಬಗಳ 15 ಮಂದಿ ಸದಸ್ಯರನ್ನು ಸಂತ್ರಸ್ತರ ಶಿಬಿರಕ್ಕೆ ವರ್ಗಾಯಿಸಲಾಗಿದೆ. ಕಿನಾನೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಅಭಯಾರ್ಥಿಗಳ ಶಿಬಿರ ಆರಂಭಿಸಲಗಿದೆ. ಸ್ಥಳೀಯ 35 ಕುಟುಂಬಗಳನ್ನು ಇಲ್ಲಿಗೆ ಸ್ಥಳಾಂತರಿಸುವ ಯತ್ನ ನಡೆದುಬರುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.
ಭೀಮನಡಿಯ ಕೊನ್ನಕಾಡಿನ ಕರ್ನಾಟಕ ಗಡಿ ಪ್ರದೇಶದಲ್ಲಿ ಗುಡ್ಡದಿಂದ ಮಣ್ಣುಕುಸಿತ ಸಂಭವಿಸಿದೆ. ಇಲ್ಲಿ ಬಂಡೆಕಲ್ಲುಗಳು ಉರುಳುವ ಭೀತಿಯೂ ಇದೆ ಎಂದು ತಹಸೀಲ್ದಾರ್ ತಿಳಿಸಿದರು. ಸ್ಥಳೀಯ ಮೂತ್ತಾಡಿ ಕಾಲನಿಯ 5 ಕುಟುಂಬಗಳ ಸದಸ್ಯರನ್ನು ಸುರಕ್ಷಿತ ತಾಣಕ್ಕೆ ಸ್ಥಳಾಂತರಿಸಲಾಗಿದೆ.
ಚೈತ್ರವಾಹಿನಿ ನದಿ ಉಕ್ಕಿ ಹರಿಯುತ್ತಿದೆ. ಕಾಲಿಕ್ಕಡವು-ಕುನ್ನಂಗೈ ರಸ್ತೆ, ಮಾಂಗೋಡು-ನರ್ಕಿಲಕ್ಕಾಡ್ ರಸ್ತೆ ಜಲಾವೃತವಾಗಿದೆ. ಪೆರುಂಬಟ್ಟ ಪಡಿತರ ಅಂಗಡಿಯಿಂದ ಸಾಮಾಗ್ರಿಗಳನ್ನು ಸುರಕ್ಷಿತ ತಾಣಗಳಿಗೆ ಸ್ಥಳಾಂತರಿಸಲಾಗಿದೆ. ತೇಜಸ್ವಿನಿ ನದಿ ಉಕ್ಕಿ ಹರಿದ ಪರಿಣಾಮ ನೀಲೇಶ್ವರ ನಗರಸಭೆ ವ್ಯಾಪ್ತಿಯ ನೀಲಾಯಿ,ಪಾಲಾಯಿ, ಚಾತಮತ್, ಪೇಡಾತುರ್ತಿ, ಕಾಯರ್ಂಗೋಡು, ಮುಂಡೆಮ್ಮಾಡ್ ಪ್ರದೇಶಗಳು ಜಲಾವೃತವಾಗಿವೆ. ಈ ಪ್ರದೇಶಗಳ ಸುಮಾರು 15 ಕುಟುಂಬಗಳ ಸದಸ್ಯರನ್ನು ಸುರಕಷಿತ ತಾಣಗಳಿಗೆ ಸ್ಥಳಾಂತರಿಸಲಾಗಿದೆ. ಕಿನಾನೂರು-ಕರಿಂದಳಂ ಪಂಚಾಯತ್ ನ ವಿವಿಧೆಡೆ ನೆರೆ ಹಾವಳಿ ತಲೆದೋರಿದೆ.
ಚಿತ್ತಾರಿಕಲ್ಲು ಪೆÇಲೀಸರು, ವೆಸ್ಟ್ ಏಳೇರಿ ಗ್ರಾಮಪಂಚಾಯತ್ ಉಪಾಧ್ಯಕ್ಷ ಟಿ.ಕೆ.ಸುಕುಮಾರನ್, ಕಂದಾಯ ಇಲಾಖೆ ಸಿಬ್ಬಂದಿ ಅವರ ನೇತೃತ್ವದಲ್ಲಿ ಸಂರಕ್ಷಣೆ ಚಟುವಟಿಕೆಗಳು ನಡೆದಿವೆ.
ಮಳೆ ಚಿತ್ರಗಳ ಮಾಹಿತಿ: ಚಂದ್ರಗಿರಿ ನದಿ ಉಕ್ಕಿ ಹರಿಯುತ್ತಿರುವುದು, ತಳಂಗರೆ ಕೊಪ್ಪಲ್ ಪ್ರದೇಶದ (ಚಂದ್ರಗಿರಿ) ಜನರನ್ನು ಸ್ಥಳಾಂತರಿಸುತ್ತಿರುವುದು, ಗ್ರಾಮಾಧಿಕಾರಿ ತಳಂಗರೆ ಕೊರಕೋಡ್ ಕ್ಷೇತ್ರದಲ್ಲಿ, ಕಾಸರಗೋಡು ಕಯ್ಯೂರು ತೇಜಸ್ವಿನಿ ನದಿ, ಅಂಜಾನ್ ತುರ್ತಿ ಯಲ್ಲಿ ನೀರು ಏರಿದಾಗ, ರಾಮಂಚೀರ ಸೇತುವೆ ಪ್ರವಾಹಕ್ಕೆ ಸಿಲುಕಿರುವುದು, ಚತ್ತಮ್ ಪ್ರದೇಶದಲ್ಲಿ, ನೀರಿನ ಮಟ್ಟ ಏರುತ್ತಿರುವುಉದ, ದೇಳಿ ಬಳಿ ಭೂಕುಸಿತ, ಪೆರುಂಪಟ್ಟ ಪಟ್ಟಣ ಪ್ರವಾಹ, ಮಾಲೋತ್ತ್ ಕಸಾಬಾ ಶಾಲೆಯಲ್ಲಿ ಪರಿಹಾರ ಶಿಬಿರ, ನೆಲ್ಲಿಮಲ (ಕೊನ್ನಕ್ಕಾಡ್) ನಲ್ಲಿ ಕೊನ್ನಕ್ಕಾಡ್ ಭೂಕುಸಿತಗೊಂಡಾಗ.











