HEALTH TIPS

ಯಕ್ಷಲೋಕದ ಸಿರಿಬಾಗಿಲು ಮತ್ತಷ್ಟು ಮೆರುಗುಗಳೊಂದಿಗೆ "ಪಲಾಂಡು ಚರಿತ್ರೆ" ವಿಶಿಷ್ಟ ಯಕ್ಷಗಾನ ಪ್ರಸಂಗ ಬಿಡುಗಡೆ

     

        ಕಾಸರಗೋಡು: ಸಿರಿಬಾಗಿಲು ವೆಂಕಪಯ್ಯ ಸಾಂಸ್ಕøತಿಕ ಪ್ರತಿಷ್ಠಾನವು ಅಧ್ಯಯನ ಯೋಗ್ಯ ಕಾರ್ಯಕ್ರಮಗಳ ಜತೆ ,ಕೊರೊನಾ ಯಕ್ಷ ಜಾಗೃತಿ ಮೂಲಕ ಜಾಗತಿಕ ಮಟ್ಟದಲ್ಲಿ ಕೊವಿಡ್ 19 ರ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿದೆ.ಅದರ ಜತೆ ಇಂದಿನ ವಿದ್ಯಾಮಾನಕ್ಕೆ ಸರಿಹೊಂದುವ ರೀತಿ ಅಂದಾಜು 100 ವರ್ಷಗಳ ಹಳೆಯ ಪ್ರಸಂಗ ಕೆರೋಡಿ ಸಬ್ಬರಾವ್ ವಿರಚಿತ ಪಲಾಂಡು ಚರಿತ್ರೆ ಯಕ್ಷಗಾನವನ್ನು ಸಾಮಾಜಿಕ ಜಾಲತಾಣ ದಲ್ಲಿ ಪ್ರಸಾರ ಪಡಿಸುತ್ತಿದೆ. 

      ಸಾಹಿತಿ ಕೆರೋಡಿ ಸಬ್ಬರಾವ್ ರವರು ಪತ್ರಿಕೋದ್ಯಮಿ-ನಾಟಕ-ಕಾವ್ಯ-ಯಕ್ಷಗಾನ- ಲಲಿತ ಪ್ರಭಂದ- ಭಾಷಾಂತರ ಎಲ್ಲಾ ಪ್ರಾಕಾರಗಳಲ್ಲೂ ವಿಫುಲ ಸಾಹಿತ್ಯ ರಚಿಸಿದ, ನಿಜ ಜೀವನದಲ್ಲಿ ಪ್ರಯೋಗ ಶೀಲ ಕೃಷಿಕರಾಗಿದ್ದರು, ಅವರ ಕಾಲಾವಧಿ -1863 ರಿಂದ 1028 ರ ಅವಧಿ. 

            "ಪಲಾಂಡು ಚರಿತ್ರೆ":ಕಥಾ ಹಂದರ:

      ಕಂದಮೂಲ ಗಳಿಗೂ,, ಶಾಖಾಹಾರಿಗಳಿಗೆ ತಮ್ಮಲ್ಲಿ ಯಾರು ಶ್ರೇಷ್ಠರೆಂಬ ಕುರಿತು ಉಂಟಾದ ವಾದ-ವಿವಾದ- ಕಾದಾಟ ಕೊನೆಗೆ ತೀರ್ಮಾನಕ್ಕೆ ಶ್ರೀಕೃಷ್ಣನಲ್ಲಿ ಮೊರೆ.ಇತ್ತಂಡದವರಿಗೂ ಮೂರು ದಿನಗಳ ಅವದಿ ಕೊಟ್ಟು ಅಭಿವೃದ್ಧಿ ಪಥದಲ್ಲಿದ್ದ ಕಂದಮೂಲಗಳು ಶ್ರೇಷ್ಠವೆಂದು ಪ್ರತಿಯೊಂದರ ವೈಶಿಷ್ಟ್ಯ ತಿಳುಹಿ ,ಭೂಮಿಯಲ್ಲಿ ಬೇರು ಬಿಟ್ಟು ಕಷ್ಟ ಸಹಿಷ್ಣು ಗಳಾಗಿ ಗಟ್ಟಿಯಾಗಿ ಪರಿಸ್ಥಿತಿಗೆ ಹೊಂದಿ ದೃತಿಗೆಡದೆ ಬಾಳುವುದೇ ನಿಜವಾದ ಬದುಕು. ಕೃಷಿ ಸಂಬಂಧಿತ ಯಾವ ಫಲ ಕಂದಮೂಲಗಳನ್ನು ಮನುಷ್ಯರು ಶರೀರದ ರೋಗನಿರೋಧಕ- ಪೌಷ್ಟಿಕಾಂಶ ಕ್ಕಾಗಿ ಹೇಗೆ- ಯಾವಾಗ ಬಳಸಬೇಕು - ಯಾವುದನ್ನು ಬಳಸಬಾರದು ಎಂಬ ಪ್ರಮುಖ ಸಂದೇಶ ಸಾರುವುದು ಈ ಪ್ರಸಂಗದ ಧ್ವನಿ.

        ಕನ್ನಡ ನಾಟ್ಯ ರಂಗ ಹೈದರಾಬಾದ್:

      ಕನ್ನಡ ನಾಟ್ಯ ರಂಗವು ಹೈದರಾಬಾದ್ (ಹೊರನಾಡಿನ)ಪ್ರಮುಖ ಕನ್ನಡ ಸಂಘಗಳಲ್ಲೊಂದು, 52 ವರ್ಷಗಳ ತನ್ನ ಭವ್ಯ ಇತಿಹಾಸದಲ್ಲಿ 100 ಯಕ್ಷಗಾನ ಸೇರಿ , 350ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಆಯೋಜಿಸಿದೆ. ಕನ್ನಡ- ಸಂಸ್ಕೃತಿಯ ಪರಂಪರೆಯನ್ನು ಜೀವಂತವಾಗಿಡಲು ಶ್ರಮಿಸುತ್ತಾ ಬಂದಿರುವ ಸಂಸ್ಥೆಯ ಸ್ಥಾಪಕರು ಕೆರೋಡಿ ಗುಂಡೂರಾಯರು( ಸುಬ್ಬರಾಯರ ಮೊಮ್ಮಗ). ಪ್ರಸ್ತುತ ಕಾಲದಲ್ಲಿ ಉದ್ಯಮಿ, ಕಲಾ ಪೆÇೀಷಕರಾದ ,ಮಾರಣಕಟ್ಟೆ ಕೃಷ್ಣಮೂರ್ತಿಯವರು ಅಧ್ಯಕ್ಷರಾಗಿದ್ದು, ಕರ್ನಾಟಕ ಯಕ್ಷಗಾನ ಅಕಾಡೆಮಿ ಸಹಕಾರದೊಂದಿಗೆ, ಆಸಕ್ತರಿಗೆ ತರಬೇತಿ ನಡೆಸಿ, ತೆಲಂಗಾಣದಲ್ಲಿ ಪ್ರಥಮ ಬಾರಿಗೆ ಎಂಬ ಯಕ್ಷ- ನಾಟ್ಯ -ರಂಗ ವೆಂಬ ತಂಡವನ್ನು ಕಟ್ಟಿ, ಕುಶ-ಲವ ಆಖ್ಯಾನವನ್ನು ಪ್ರದರ್ಶಿಸಿದೆ. ಕನ್ನಡ ನಾಟ್ಯ ರಂಗದ ನಿರಂಜನ ರಾವ್ ಅವರ ಅಪೇಕ್ಷೆಯಂತೆ ,ರಂಗವೂ ಈ ಸಂದಿಗ್ಧ ಕಾಲಘಟ್ಟದಲ್ಲಿ ಕಲಾವಿದರಿಗೆ ಸಹಕಾರಿಯಾಗುವ ದೃಷ್ಟಿಯಿಂದ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಈ ಕಾರ್ಯಕ್ರಮಕ್ಕೆ ಪ್ರಾಯೋಜಕತ್ವ ನೀಡಿ ಸಹಕರಿಸಿದೆ.

       ಯಕ್ಷ ತಾರಾ ಗಣ: 

         ಪಲಾಂಡು ಚರಿತ್ರೆಯಲ್ಲಿ ವಾಸುದೇವ ರಂಗಭಟ್ ಮಧೂರು -ಶ್ರೀಕೃಷ್ಣನಾಗಿ ,ರಾಧಾಕೃಷ್ಣ ನಾವಡ ಮಧೂರು- ಚೂತ ಫಲವಾಗಿ ,ಜಯಪ್ರಕಾಶ್ ಶೆಟ್ಟಿ ಪರ್ಮುದೆ- ಪಲಾಂಡುವಾಗಿ ,ಮವ್ವಾರು ಬಾಲಕೃಷ್ಣ ಮಣಿಯಾಣಿ, ಹರೀಶ ಶೆಟ್ಟಿ ಮಣ್ಣಾಪು , ಮಾಧವ ಪಾಟಾಳಿ, ಪ್ರಕಾಶ್ ನಾಯಕ್, ಬಾಲಕೃಷ್ಣ ಸೀತಾಂಗೋಳಿ ,ಶಿವರಾಜ ಪೆರ್ಲ, ಶಿವಾನಂದ ಪೆರ್ಲ, ಕಿಶನ್, ಉಪಾಸನಾ, ಸ್ವಸ್ತಿಕ್, ಶ್ರೀಗಿರಿ ಮೊದಲಾದವರು ಪಾತ್ರ ನಿರ್ವಹಿಸಿದರು. ಹಿಮ್ಮೇಳದಲ್ಲಿ ಭಾಗವತರಾಗಿ -ರಾಮಕೃಷ್ಣ ಮಯ್ಯ ಸಿರಿಬಾಗಿಲು, ತಲ್ಪಣಾಜೆ ವೆಂಕಟ್ರಮಣ ಭಟ್, ಚೆಂಡೆ- ಮದ್ದಳೆಯಲ್ಲಿ ಲಕ್ಷ್ಮೀನಾರಾಯಣ ರಾವ್ ಅಡೂರು, ಲಕ್ಷ್ಮೀಶ ಬೆಂಗ್ರೊಡಿ ಭಾಗವಹಿಸಿದರು. ಬ್ರಹ್ಮಶ್ರೀ ಗಣಾದಿರಾಜ ತಂತ್ರಿ ಕೊಲ್ಲಂಗಾನ ಇವರು ವೇಷಭೂಷಣಗಳನ್ನಿತ್ತು ಸಹಕಸಿದರು. ಉದಯ ಕಂಬಾರ್ ವರ್ಣಾ ಸ್ಟುಡಿಯೋ ನೀರ್ಚಾಲು, ಹಾಗೂ ಶ್ರೀವತ್ಸ ಕುಂಚಿನಡ್ಕ ಇವರು ಚಿತ್ರೀಕರಿಸಿದರು.ಕೊಲ್ಲಂಗಾನ ಶ್ರೀನಿಲಯದಲ್ಲಿ ಚಿತ್ರೀಕರಣ ನಡೆಸಲಾಯಿತು. 

                     ಯಕ್ಷಗಾನ ವೀಕ್ಷಣೆಗೆ ಇಲ್ಲಿ ಕ್ಲಿಕ್ ಮಾಡಿ......*YouTube Channel Link*

youtube.com/c/svvision

        ಅಭಿಮತ:

    ಪಲಾಂಡು ಚರಿತ್ರೆ,-ಕೇವಲ ಪೌರಾಣಿಕ ಅಥವಾ ಕಾಲ್ಪನಿಕ ಕಥೆಗಳಿವೆ ಸೀಮಿತವಾಗಿದ್ದ ಯಕ್ಷಗಾನದ ವಸ್ತು ವಲಯವನ್ನು ವಿಸ್ತರಿಸಿ, ಸಾಮಾಜಿಕ ಹಾಗು ಸಮಕಾಲೀನ ಸಮಸ್ಯೆಗಳನ್ನು ಯಕ್ಷಗಾನೀಯವಾಗಿ ನಿರೂಪಿಸುವ ಮಾರ್ಗವನ್ನು ತೆರೆದು ತೋರಿದ ಶ್ರೇಯಸ್ಸು ಅದಕ್ಕಿದೆ. ಅದರ ಮಾದರಿಯನ್ನು ಅನುಸರಿಸಿ ಯಕ್ಷಗಾನೀಯ ಕವಿಗಳು ಅನೇಕ ಕೃತಿಗಳನ್ನು ರಚಿಸಿದ್ದಾರೆ .ಸಮಕಾಲೀನ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ. ಇಂತಹ ಕೃತಿಯನ್ನು ಈ ಕಾಲಕ್ಕೆ ತಕ್ಕಂತೆ ಪ್ರದರ್ಶಿಸಲು ಸಿರಿಬಾಗಿಲು ಪ್ರತಿಷ್ಠಾನವು ನೇತೃತ್ವ ವಹಿಸಿರುವುದು ಸಂತಸದ ಸಂಗತಿ. ಅದಕ್ಕೆ ಎಲ್ಲಾ ರೀತಿಯ ಯಶಸ್ಸು ದೊರೆಯಲೆಂದು ಶುಭ ಹಾರೈಕೆಗಳು.

ಪೆÇ್ರ .ಎಂ .ಎ.ಹೆಗಡೆ 

ಅಧ್ಯಕ್ಷರು 

ಕರ್ನಾಟಕ ಯಕ್ಷಗಾನ ಅಕಾಡೆಮಿ- ಬೆಂಗಳೂರು 

...............................................................................

ಕೊರೋನಾ ದಿಗ್ಬಂಧನದ ವೇಳೆಯಲ್ಲಿ ಯಕ್ಷಗಾನ ಪ್ರದರ್ಶನ ವಿಲ್ಲದೆ ನಿರುತ್ಸಾಹಿಯಾಗಿರುವ ಕಲಾವಿದರಿಗೆ

ಇಂತಹ ಪ್ರದರ್ಶನ ಗಳು ಅನುಕೂಲವಾಗಲಿದೆ. ಸಮಾಜಕ್ಕೆ ಉತ್ತಮ ಸಂದೇಶಗಳನ್ನು ಸಾರುವ ಇಂತಹ ಪ್ರಸಂಗಗಳು ಯಕ್ಷಗಾನ ಕಲಾಪ್ರೇಮಿಗಳು ಆಸ್ವಾದಿಸಲು-ಸಮಾಜ ಜಾಗೃತಿ ವಹಿಸಲು ಅನುಕೂಲವಾಗಲಿ, ಯಕ್ಷಗಾನ ಬೆಳಗಿ ಬರಲಿ.

 -ರಾಧಾಕೃಷ್ಣ ನಾವಡ ಮಧೂರು 

ಯಕ್ಷಗಾನ ಕಲಾವಿದ 

...............................................................................

ಯಕ್ಷಗಾನ ಕಲೆಯನ್ನು ಸರ್ವಸ್ವವಾಗಿರಿಸುವ, ಕಲಾವಿದರುಗಳಾದ ನಾವುಗಳು ಸಮಾಜಕ್ಕೆ ನಮ್ಮಿಂದ ಕಲೆಯ ಮೂಲಕವೇ ಏನಾದರೂ ಸಂದೇಶ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಕೊಡಬೇಕೆಂಬುದು ನಮ್ಮ ಪ್ರಧಾನ ಉದ್ದೇಶ. ಈ ಹಿಂದೆ ಕೋವಿಡ್ 19 ರ ಬಗ್ಗೆ ಹಲವಾರು ಜಾಗೃತಿ ಯಕ್ಷಗಾನ ,ಬೊಂಬೆಯಾಟ ನಡೆಸಿ ಜಾಗತಿಕ ಮಟ್ಟದಲ್ಲಿ ಜಾಗೃತಿ ಅಭಿಯಾನ ದಲ್ಲಿ ಪ್ರಧಾನ ಪಾತ್ರ ವಹಿಸಿದ್ದೇವೆ. ನೂರು ವರ್ಷಗಳ ಹಿಂದೆ ಕೆರೊಡಿ ಸುಬ್ಬರಾವ್ ರಚಿಸಿದ ಪಾಲಾಂಡು ಚರಿತ್ರೆ ಪ್ರಸಂಗದ ವಿಶೇಷತೆಯನ್ನು ಗಮನಿಸಿ, ಇಂದಿನ ಈ ಪರಿಸ್ಥಿತಿಗೆ ಹೊಂದುವಂತೆ ದಾಖಲಿಸಿ ,ದೃಶ್ಯ ಮಾಧ್ಯಮದ ಮೂಲಕ ಪ್ರಸಾರ ಪಡಿಸುತ್ತಿದ್ದೇವೆ, ಯಕ್ಷಗಾನ ಕಲಾಪ್ರೇಮಿಗಳು ಇದನ್ನು ಆಸ್ವಾದಿಸಿ,ಯಕ್ಷಗಾನ ಕಲೆ ಬೆಳೆದು ಬರಲಿ ಇದು ನಮ್ಮ ಉದ್ದೇಶ .

      ರಾಮಕೃಷ್ಣ ಮಯ್ಯ ಸಿರಿಬಾಗಿಲು 

ಅಧ್ಯಕ್ಷರು- ಸಿರಿಬಾಗಿಲು ಪ್ರತಿಷ್ಠಾನ

..............................................

                 ಪ್ರಸಂಗ-ಪರದರ್ಶನ ವಿಶೇಷತೆ

.ಸುಮಾರು 100 ವರ್ಷಕ್ಕೂ ಹೆಚ್ಚಿನ ಪ್ರಾಚೀನತೆಯುಳ್ಳ ಕೀರ್ತಿಶೇಷ ಕೆರೋಡಿ ಸುಬ್ಬರಾಯರಿಂದ ರಚಿತವಾದ ಪ್ರಸಂದ....


ಕವಿಯ ಮನೆತನದ ಈ ತಲೆಮಾರಿನ ಪ್ರತಿನಿಧಿಗಳೇ ರಚನೆಯನ್ನು ರಂಗಕೃತಿಯಾಗಿಸುವಲ್ಲಿ ತೋರಿದ ಆಸಕ್ತಿ......


ಸಿರಿಬಾಗಿಲು ವೆಂಕಪ್ಪಯ್ಯ ಪ್ರತಿಷ್ಠಾನದ ರೂವಾರಿ,ಭಾಗವತ ರಾಮಕೃಷ್ಣ ಮಯ್ಯರ ಹುಮ್ಮಸ್ಸು,ಸಂಯೋಜನೆ,ಒತ್ತಾಸೆ.....


ವೈಚಿತ್ರ್ಯವುಳ್ಳ ವಸ್ತು-ವಿಷಯ...


ಪಾತ್ರ,ಅವುಗಳ ಸ್ವರೂಪ,ಸ್ವಭಾವ,ಸನ್ನಿವೇಶಗಳ ನಿರೂಪಣೆಯಲ್ಲಿ ಇಂದಿಗೂ ಹೊಸತನದ ಘಮ ಪಸರಿಸಬಹುದಾದ ಸಾಧ್ಯತೆ....


ರಂಗಮಾಧ್ಯಮಕ್ಕೆ ಇಂತಹ ವಿಷಯಗಳನ್ನು ಒಗ್ಗಿಸುವಲ್ಲಿನ ಸವಾಲು....



ಈ ಎಲ್ಲ ಕಾರಣಗಳಿಗಾಗಿ ಸಮಾಜಿಕ ವಿಷಮ ಪರಿಸ್ಥಿತಿಯಲ್ಲೂ ಭಾಗವಹಿಸಿದ ಕಲಾವಿದರಿಗೇ ಕುತೂಹಲ ಹುಟ್ಟಿಸಿದ್ದು ಈ ವಿನೂತನ ಪ್ರಯತ್ನ.


'ಇದೊಂದು ಅಮೋಘ,ಅದ್ಭುತ ಪ್ರಯೋಗ'...ಎಂಬ ತೆರನಾಗಿ ಯಾವ ಅತಿರಂಜಿತ ಪ್ರಚಾರವಾಗಲಿ,ಸಂಚಲನೆ ಮೂಡಿಸುವ ಪ್ರಯತ್ನವಾಗಲಿ ಇದರ ಪ್ರಚಾರಕ್ಕಾಗಿ ಯಾರೂ ಮಾಡಿಲ್ಲ.ಆದರೆ ಯಾವ ಕಲಾಮಾಧ್ಯಮದ ಹೊಸಪ್ರಯೋಗಳೇ ಇರಲಿ,ಅವುಗಳಿಗೆ ಯಾವತ್ತೂ ಸಹಾನುಭೂತಿಯ ಪರಿಶೀಲನೆ ಅನಿವಾರ್ಯ ಎಂದು ನಂಬಿರುವ ನಾನು,ಆ ನೆಲೆಯಿಂದ ಈ ಪ್ರಸಂಗ ಪ್ರಸ್ತುತಿಯನ್ನು ವೀಕ್ಷಿಸಿ,ಒಳಿತು-ಕೆಡುಕುಗಳನ್ನು ಕಲಾಪ್ರೀತಿಯಿಂದ ತಿಳಿಸಿ ಪೆÇ್ರೀತ್ಸಹಿಸಿ ಎಂದು ಕಲಾರಸಿಕರಲ್ಲಿ ನಿವೇದಿಸಿಕೊಳ್ಳಲಾಗಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries