ನವದೆಹಲಿ: ತಿರುವನಂತಪುರ ವಿಮಾನ ನಿಲ್ದಾಣದ ನಿರ್ವಹಣೆಯನ್ನು ಅದಾನಿ ಗ್ರೂಪ್‍ಗೆ ಹಸ್ತಾಂತರಿಸುವ ಕೇಂದ್ರದ ಕ್ರಮವನ್ನು ವಿರೋಧಿಸಿ ಕೇರಳ ವಿಧಾನ ಸಭೆಯಲ್ಲಿ ನಿರ್ಣಯ ಮಂಡಿಸಿದ ಕೇರಳ ವಿಧಾನ ಸಭೆಯ ನಿರ್ಣಯದ ವಿರುದ್ದ ಕೇಂದ್ರ ವಿದೇಶಾಂಗ ಸಚಿವ ವಿ ಮುರಲೀಧರನ್ ಸೋಮವಾರ ವಾಗ್ದಾಳಿ ನಡೆಸಿದರು. ಜನರ ಆತ್ಮಬಲವನ್ನು ಹಾಳುಗೆಡವಲು ಅಸೆಂಬ್ಲಿಯನ್ನು ಬಳಸಲಾಗುತ್ತಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಕೇರಳ ಶಾಸಕಾಂಗವು ಜನರ ಆತ್ಮಬಲವನ್ನು ಹಾನಿಗೊಳಿಸುವ ನಿಲುವನ್ನು ತೆಗೆದುಕೊಂಡಿದೆ. ಪಿಣರಾಯಿ ಸರ್ಕಾರ ಜನ ವಿರೋಧಿ ಎಂದು ಇದು ತೋರಿಸುತ್ತದೆ. "ನಿರ್ಣಯದ ಅಂಗೀಕಾರವು ಸಿಪಿಎಂ, ಕಾಂಗ್ರೆಸ್ ಪಕ್ಷಗಳೆರಡೂ ಜನರೊಂದಿಗೆ ಸಂಪರ್ಕವನ್ನು ಕಳೆದುಕೊಂಡಿದೆ ಎಂಬುದನ್ನು ತೋರಿಸುತ್ತದೆ" ಎಂದು ಅವರು ಟ್ವೀಟ್ ಮಾಡಿದ್ದಾರೆ.
ತಿರುವನಂತಪುರ ವಿಮಾನ ನಿಲ್ದಾಣದ ನಿರ್ವಹಣೆಯನ್ನು ಅದಾನಿ ಸಮೂಹಕ್ಕೆ ಹಸ್ತಾಂತರಿಸುವ ನಿರ್ಧಾರವನ್ನು ಒಪ್ಪಲಾಗುವುದಿಲ್ಲ ಎಂದು ಮುಖ್ಯಮಂತ್ರಿ ನಿನ್ನೆ ವಿಧಾನಸಭೆಯಲ್ಲಿ ತಿಳಿಸಿದ್ದರು. ಕೊಚ್ಚಿ ಮತ್ತು ಕಣ್ಣೂರು ವಿಮಾನ ನಿಲ್ದಾಣಗಳನ್ನು ನಡೆಸುವಲ್ಲಿ ಅನುಭವ ಹೊಂದಿರುವ ಸರ್ಕಾರ ವಿಮಾನ ನಿಲ್ದಾಣಗಳ ಕಾರ್ಯಾಚರಣೆಯನ್ನು ಖಾಸಗೀ ಸಂಸ್ಥೆಗೆ ಯಾಕೆ ಹಸ್ತಾಂತರಿಸಬೇಕು ಎಂದು ನಿರ್ಣಯದಲ್ಲಿ ಮುಖ್ಯಮಂತ್ರಿ ಒತ್ತಾಯಿಸಿದರು. ಆಗಸ್ಟ್ 19 ರ ನಿರ್ಧಾರವನ್ನು ಮರುಪರಿಶೀಲಿಸಬೇಕು. ವಿಮಾನ ನಿಲ್ದಾಣದ ನಿರ್ವಹಣೆಯನ್ನು ಸರ್ಕಾರದ ಸಹಭಾಗಿತ್ವದಲ್ಲಿ ಎಸ್.ಪಿ.ವಿ.ಗೆ ಹಸ್ತಾಂತರಿಸಬೇಕು ಎಂದು ನಿರ್ಣಯ ತಿಳಿಸಿದೆ.



