HEALTH TIPS

ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯಕ್ಕೆ ಸೋಲು- ಸಿಎಂ ಜನರಿಗೆ ಉತ್ತರಿಸಲಾರದೆ ಪಲಾಯನಗೈದರು-ಚೆನ್ನಿತ್ತಲ

      

          ತಿರುವನಂತಪುರ: ಎಲ್.ಡಿ.ಎಫ್. ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ನಿನ್ನೆ ಮಂಡಿಸಿದ  ಅವಿಶ್ವಾಸ ನಿರ್ಣಯವು ವಿಫಲವಾಗಿದೆ. ವಿಧಾನಸಭೆಯ 40 ಎದುರಾಗಿ  87 ಮತಗಳಿಂದ  ಅವಿಶ್ವಾಸ ನಿರ್ಣಯ ಸೋಲಪ್ಪಿಕೊಂಡಿತು. ರಾತ್ರಿ 9.30 ರವರೆಗೆ ಸುದೀರ್ಘ ಸಭೆಯ ಕೊನೆಯಲ್ಲಿ ಅವಿಶ್ವಾಸ ಮತವನ್ನು ತೆಗೆದುಕೊಳ್ಳಲಾಯಿತು.

       11 ಗಂಟೆಗಳಿಗಿಂತ ಹೆಚ್ಚು ಕಾಲ ನಡೆದ ಅವಿಶ್ವಾಸ ನಿರ್ಣಯದಲ್ಲಿ 40 ಶಾಸಕರು ಅವಿಶ್ವಾಸ ನಿರ್ಣಯದ ಪರವಾಗಿ ಮತ ಚಲಾಯಿಸಿದರೆ 87 ಮಂದಿ ಇದನ್ನು ವಿರೋಧಿಸಿದರು. ಮೂವರು ಶಾಸಕರು ಗೈರಾದರು. ಅವಿಶ್ವಾಸ ಮತದಾನದೊಂದಿಗೆ ಸದನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ ಎಂದು ಸ್ಪೀಕರ್ ಪಿ ಶ್ರೀರಾಮಕೃಷ್ಣನ್ ಘೋಷಿಸಿದರು. ಸದಸ್ಯರ ತಲೆ ಎಣಿಕೆಯ ಮೂಲಕ ಮತದಾನ ನಡೆಯಿತು. ಕೇರಳ ಕಾಂಗ್ರೆಸ್ ಜೋಸ್ ಬಣ ಮತದಾನದಿಂದ ದೂರವಿತ್ತು.

        ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಅವಿಶ್ವಾಸ ನಿರ್ಣಯದ ಉತ್ತರವಾಗಿ 3.45 ಗಂಟೆ ಮಾತನಾಡಿದರು. ಕೇರಳ ವಿಧಾನಸಭೆಯ ಇತಿಹಾಸದಲ್ಲಿ ಇದು ಅತಿ ಉದ್ದದ ಭಾಷಣವಾಗಿದೆ. ಪ್ರತಿಪಕ್ಷ ಗುಂಪುಗಳು ವಿಧಾನಸಭೆಯನ್ನು ಬಹಿಷ್ಕರಿಸುವಂತೆ ಕರೆ ನೀಡಿದರು. ಚಿನ್ನದ ಕಳ್ಳಸಾಗಣೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸ್ಪಂದಿಸುತ್ತಿಲ್ಲ ಎಂದು ಆರೋಪ ಕೇಳಿಬಂದಿತ್ತು. 

     ಒಂದು ಹಂತದಲ್ಲಿ ಪ್ರತಿಭಟನೆ ಪ್ರಬಲವಾಗುತ್ತಿರುವಂತೆ  ಪ್ರತಿಪಕ್ಷದ ನಾಯಕ ಮಿತಿಯನ್ನು ಮೀರಿದ್ದಾರೆ ಎಂದು ಸ್ಪೀಕರ್ ಸದನಕ್ಕೆ ಮಾಹಿತಿ ನೀಡಿದರು. ಏತನ್ಮಧ್ಯೆ, ಮುಖ್ಯಮಂತ್ರಿ ಜನರಿಗೆ ಉತ್ತರಿಸಲಾರದೆ ಪಲಾಯನವಾದದ ದಾರಿ ಹಿಡಿಯುತ್ತಿದ್ದಾರೆ  ಎಂದು ಪ್ರತಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ ಹೇಳಿದರು. "ಭ್ರಷ್ಟಾಚಾರದ ಆರೋಪದ ಬಗ್ಗೆ ಮುಖ್ಯಮಂತ್ರಿ ಒಂದೇ ಒಂದು ಮಾತನ್ನೂ ಹೇಳುವುದಿಲ್ಲ. ಅವರ ಪ್ರತಿಕ್ರಿಯೆ ರಾಜ್ಯಪಾಲರ ನೀತಿ ಪ್ರಕಟಣೆಯಂತಿದೆ" ಎಂದು ಚೆನ್ನಿತ್ತಲ ಹೇಳಿದರು. ರಾಜ್ಯ ಸರ್ಕಾರದ ವಿರುದ್ಧದ ಅವಿಶ್ವಾಸ ನಿರ್ಣಯವು ವಿಫಲವಾದ ಬಳಿಕ ಚೆನ್ನಿತ್ತಲ ಪ್ರತಿಕ್ರಿಯೆ ನೀಡಿದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries