HEALTH TIPS

ರಾಜ್ಯಸಭಾ ಉಪಚುನಾವಣೆ-ಶ್ರೇಯಾಮ್ಸ್ ಕುಮಾರ್ ಗೆ ಜಯ

 

       ತಿರುವನಂತಪುರ: ರಾಜ್ಯಸಭಾ ಉಪಚುನಾವಣೆಯಲ್ಲಿ ಎಲ್‍ಡಿಎಫ್ ಅಭ್ಯರ್ಥಿ ಶ್ರೇಯಾಮ್ಸ್ ಕುಮಾರ್ ಜಯಗಳಿಸಿದ್ದಾರೆ. ಶ್ರೇಯಾಮ್ಸ್ ಕುಮಾರ್ 88 ಮತಗಳಿಂದ ವಿಜಯಿಗಳಾದರು.  ಯುಡಿಎಫ್ ಅಭ್ಯರ್ಥಿ ಲಾಲ್ ವರ್ಗೀಸ್ ಕಲ್ಪಕ್ವಾಡಿ 41 ಮತಗಳನ್ನು ಪಡೆದರು. ಒಂದು ಮತ ಅಮಾನ್ಯವಾಗಿದೆ. ಕೇರಳ ಕಾಂಗ್ರೆಸ್ ಶಾಸಕ ರೋಶಿ ಅಗಸ್ಟೀನ್ ಮತ್ತು ಎನ್ ಜಯರಾಜ್ ಸ್ಪರ್ಧಾ ಕಣದಿಂದ ಹಿಂದೆ ಸರಿದರು. 

        ಸಂಸದ ವೀರೇಂದ್ರ ಕುಮಾರ್ ಅವರ ನಿಧನದಿಂದ ತೆರವಾದ ರಾಜ್ಯಸಭಾ ಸ್ಥಾನಕ್ಕೆ ಸೋಮವಾರ ರಾಜ್ಯಸಭಾ ಉಪಚುನಾವಣೆ ನಡೆಯಿತು. ಬೆಳಿಗ್ಗೆ 9 ಗಂಟೆಗೆ ಚುನಾವಣೆ ಪ್ರಾರಂಭವಾಯಿತು. ಶಾಸಕ ಕೆ ದಾಸನ್  ಮೊದಲು ಮತ ಚಲಾಯಿಸಿದರು. ವಿಧಾನಸಭೆಯ ಸಂಸತ್ತು ಸಭಾಂಗಣದಲ್ಲಿ ಚುನಾವಣೆ ನಡೆಯಿತು. ಜೋಸ್ ಕೆ.ಮಣಿ ವಿಭಾಗದ ಶಾಸಕರು ಚುನಾವಣೆಯನ್ನು ಬಹಿಷ್ಕರಿಸಿದರು.

     ವಿಧಾನಸಭೆ ಕಾರ್ಯದರ್ಶಿ ಎಸ್.ವಿ.ಉಣ್ಣಿಕೃಷ್ಣನ್ ನಾಯರ್ ಅವರು ಚುನಾವಣಾಧಿಕಾರಿಯಾಗಿಯೂ, ರಾಜ್ಯ ಚುನಾವಣಾ ಆಯೋಗ ಅಧ್ಯಕ್ಷ ಟೀಕಾರಾಮ್ ಮೀಣಾ ವೀಕ್ಷಕರಾಗಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries