ಮಧೂರು: ಕುಂಬಳೆ ಸೀಮೆಯ ನಾಲ್ಕು ಪ್ರಧಾನ ದೇವಾಲಯಗಳಲ್ಲಿ ಒಂದಾಗಿರುವ ಮಧೂರು ಶ್ರೀಮದನಂತೇಶ್ವರ ಸಿದ್ದಿ ವಿನಾಯಕ ದೇವಾಲಯದಲ್ಲಿ ಸೋಮವಾರ ದೇವಸ್ಥಾನ ತುಂಬಿಸುವುದು ಮತ್ತು ನವಾನ್ನ ಕಾರ್ಯಕ್ರಮ ಕೋವಿಡ್ ನಿಬಂಧನೆಗಳ ಪಾಲನೆಯೊಂದಿಗೆ ಸಾಂಪ್ರದಾಯಿಕವಾಗಿ ನೆರವೇರಿತು.
ಶ್ರೀಕ್ಷೇತ್ರದ ಆಡಳಿತ ಅಧಿಕಾರಿ ಎಂ.ಬಾಬು, ಪವಿತ್ರಪಾಣಿ ರತನ್ ಕುಮಾರ್ ಕಾಮಡ, ಶ್ರೀಕ್ಷೇತ್ರದ ಪ್ರಧಾನ ಅರ್ಚಕ ವಿ.ಶ್ರೀಕೃಷ್ಣ ಉಪಾಧ್ಯಾಯ, ಎಚ್.ಗೋಪಾಲಕೃಷ್ಣ ಭಟ್, ನ್ಯಾಯವಾದಿ ಅನಂತರಾಮ್ ಮೊದಲಾದವರು ಉಪಸ್ಥಿತರಿದ್ದರು.



