HEALTH TIPS

ಇನ್ನು ಜಾಹೀರಾತುದಾರರೊಂದಿಗೆ ನಟರೂ ಸಿಕ್ಕಿ ಬೀಳಲಿದ್ದಾರೆ: ಹೊಸ ಗ್ರಾಹಕರ ಸಂರಕ್ಷಣಾ ಕಾನೂನು ಜಾರಿ

       ಹೊಸದಿಲ್ಲಿ : 34 ವರ್ಷಗಳ ಬಳಿಕ ದೇಶದಲ್ಲಿ ಹೊಸ ಗ್ರಾಹಕ ಸಂರಕ್ಷಣಾ ಕಾನೂನು ಜಾರಿಗೆ ಬಂದಿದೆ. ಬಳಕೆದಾರರು ಹೆಚ್ಚು ಉಪಯುಕ್ತವೆಂದು 2019ರಲ್ಲಿ ಪಾರ್ಲಿಮೆಂಟಿನಲ್ಲಿ ಮಂಡನೆಯಾಗಿರುವ ಮಸೂದೆಯು ಮೇಲ್ನೋಟಕ್ಕೆ ಕಂಡು ಬಂದಿದ್ದು ಸೋಮವಾರದಿಂದ ಅದು ಕಾನೂನಿನ ರೂಪದಲ್ಲಿ ಜಾರಿಗೆ ಬಂದಿದೆ.

        ಹೊಸ ಕಾನೂನಿನಲ್ಲಿ, ಗ್ರಾಹಕ ಎಂಬುದರ ವ್ಯಾಖ್ಯಾನವು ಬದಲಾಗಿದ್ದು ಆಫ್‍ಲೈನ್, ಆನ್‍ಲೈನ್ ಟೆಲಿ ಮಾರ್ಕೆಟಿಂಗ್ ಕ್ಷೇತ್ರದ ವಸ್ತುಗಳನ್ನು ಖರೀದಿಸುವವರನ್ನು ಕೂಡ ಬಳಕೆದಾರರಾಗಿ ಪರಿಗಣಿಸುತ್ತದೆ ಹೊಸ ಕಾನೂನು.

         ಇದರ ಕೆಲವು ಮುಖ್ಯ ಪ್ರಯೋಜನಗಳು ಇಲ್ಲಿ ಪಟ್ಟಿಮಾಡಬಹುದು- ಗ್ರಾಹಕರು ಇನ್ನು ಯಾವುದೇ ಸ್ಥಳದಿಂದಲೂ ದೂರು ಕೊಡಬಹುದು. ವಾಸ ಸ್ಥಳ, ಕೆಲಸ ಮಾಡುವ ಜಾಗ ಅಥವಾ ಸೌಕರ್ಯ ಇರುವ ಕಾಂಪ್ಲೆಕ್ಸನ್ನು ನೋಂದಾಯಿಸಿದರಾಯಿತು. ಈ ಹಿಂದೆ ಎಲ್ಲಿಂದ ಸಾಮಾನು ತೆಗೆದುಕೊಂಡಿರುತ್ತಾರೋ ಅಲ್ಲಿಯೇ ದೂರು ನೀಡಬೇಕಾಗಿತ್ತು.

ತಪ್ಪು ಜಾಹೀರಾತು ನೀಡುವ ತಯಾರಕರಿಗೆ ದಂಡ ಹಾಗೂ ಜೈಲು ಶಿಕ್ಷೆ ಲಭಿಸುತ್ತದೆ. ಸುಳ್ಳು ಜಾಹೀರಾತಿನಲ್ಲಿ ನಟಿಸುವ ಸೆಲೆಬ್ರಿಟಿಗಳಿಗೆ ಶಿಕ್ಷೆ ನೀಡುವ ಕಲಂ ಇಲ್ಲದಿದ್ದರೂ ಅವರನ್ನು ನಿಷೇಧಿಸಬಹುದಾಗಿದೆ.

     ಜಿಲ್ಲಾ ಗ್ರಾಹಕರ ಆಯೋಗ ತಯಾರಕನಿಗೆ ದಂಡ ವಿಧಿಸಿದರೆ ಮೇಲ್ಮನವಿ ಹೋಗುವ ಮೊದಲು ದಂಡದ ಮೊತ್ತದ ಅರ್ಧ ಕಟ್ಟಿರಬೇಕು. ಇದು ಅನಗತ್ಯ ಮೇಲ್ಮನವಿಗಳನ್ನು ತಡೆಯಲು ಸಹಕಾರಿಯಾಗಿರುವುದು.

     ದೂರಿನಲ್ಲಿ ಮೂರು ತಿಂಗಳೊಳಗೆ ತೀರ್ಮಾನ ಮಾಡಬೇಕು. ಗ್ರಾಹಕರ ಆಯೋಗ ಸಮಾಂತರವಾಗಿ ಮಧ್ಯಸ್ಥಿಕೆ ಸಮಿತಿಗಳಿರುವುದು. ಇವರನ್ನು ಭೇಟಿಯಾಗಿ ವಿವಾದ ಬಗೆಹರಿಸಿಕೊಳ್ಳಬಹುದಾಗಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries