HEALTH TIPS

ಹುಟ್ಟು ಹಬ್ಬದಂದೇ ಪೃಥ್ವಿ ಅಂಬಾರ್ ಗುಡ್ ನ್ಯೂಸ್: 'ದಿಯಾ' ಹೀರೋ ಈಗ 'ಶುಗರ್ ಲೆಸ್'

     ನಿರ್ದೇಶಕರಾಗಿ ಚೊಚ್ಚಲ ಸಿನಿಮಾ ನಿರ್ದೇಶನ ಮಾಡುತ್ತಿರುವ ಕೆ.ಎಂ. ಶಶಿಧರ್‌ 'ಶುಗರ್‌ಲೆಸ್‌' ಸಿನಿಮಾದ ಟೈಟಲ್‌ ಅನೌನ್ಸ್ ಮಾಡಿದ್ದರು. ಈ ಸಿನಿಮಾಗೆ 'ದಿಯಾ' ಖ್ಯಾತಿಯ ಪೃಥ್ವಿ ಅಂಬರ್ ಹೆಸರು ಫೈನಲ್ ಆಗಿದೆ.

      'ಇದು ತುಂಬಾ ಹ್ಯೂಮರಸ್‌ ಆಗಿರುವ ಸಿನಿಮಾ. ಹಾಸ್ಯವೇ ಪ್ರಧಾನವಾಗಿರುತ್ತದೆ. ನಾನು ಸ್ಕ್ರಿಪ್ಟ್‌ ಮಾಡುವಾಗ ನನ್ನ ಸಿನಿಮಾದ ಹೀರೋ ಪಾತ್ರ ಹೇಗೆಲ್ಲ ಇರಬೇಕು ಎಂದುಕೊಂಡಿದ್ದೆನೋ, ಅದಕ್ಕೆ ಸೂಕ್ತವಾಗಿ ಪೃಥ್ವಿ ಇದ್ದಾರೆ. ನಮ್ಮ ಸಿನಿಮಾವನ್ನು ಅರ್ಪಿಸುತ್ತಿರುವ ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರೊಂದಿಗೂ ಈ ಕುರಿತು ಚರ್ಚೆ ಮಾಡಿದೆ. ಆನಂತರ ಪೃಥ್ವಿ ಅವರನ್ನೇ ಫೈನಲ್ ಮಾಡಿದೆವು' ಎಂದು ಹೇಳಿದ್ದಾರೆ.

      ನಿರ್ದೇಶಕ ಶಶಿಧರ್. ಈ ಹಿಂದೆ 'ಡಾಟರ್‌ ಆಫ್‌ ಪಾರ್ವತಮ್ಮ' ನಿರ್ಮಿಸಿದ್ದ ಶಶಿಧರ್‌ 'ಶುಗರ್‌ಲೆಸ್‌' ಮೂಲಕ ನಿರ್ದೇಶಕರಾಗುತ್ತಿದ್ದಾರೆ. ಪೃಥ್ವಿ ಅಂಬರ್‌ ಜನ್ಮದಿನ. ಆ ಸಲುವಾಗಿ ಇಂದೇ ಈ ಘೋಷಣೆ ಮಾಡಿದ್ದಾರೆ ಶಶಿಧರ್‌. ಸದ್ಯ ಕೊರೊನಾ ಪರಿಸ್ಥಿತಿ ಇರುವುದರಿಂದ, ಸರಿಯಾದ ಸಮಯ ನೋಡಿಕೊಂಡು ಶೂಟಿಂಗ್ ಶುರು ಮಾಡುವುದಕ್ಕೆ ನಿರ್ದೇಶಕರು
ಪ್ಲ್ಯಾನ್ ಮಾಡಿಕೊಂಡಿದ್ದಾರೆ. 

     ರಾಮಾ ರಾಮಾ ರೇ' ಖ್ಯಾತಿಯ ಧರ್ಮಣ್ಣ ಕಡೂರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಲಿದ್ದಾರೆ. 'ನಾನು ಬೆಳೆದಿದ್ದು ಹಳ್ಳಿಯಲ್ಲೇ. ಹಾಗಾಗಿ ಬಹಳ ರಿಲೇಟ್‌ ಆಗುತ್ತೆ ಎನ್ನಿಸಿತು. ಚಿತ್ರದಲ್ಲಿ ಕಾಮಿಡಿ ತುಂಬಾ ಚೆನ್ನಾಗಿದೆ. ಸಿನಿಮಾಗೆ ಅನೂಪ್ ಸಿಳೀನ್ ಸಂಗೀತ ನೀಡಿದ್ದಾರೆ.

     ದಿಯಾ ನಂತರ ಅನೇಕ ರೋಮ್ಯಾಂಟಿಕ್ ಸಿನಿಮಾ ಆಫರ್ ಗಳು ಬಂದವು, ಆದರೆ ವಿಭಿನ್ನ ಪಾತ್ರ ಮಾಡುವ ಆಸೆಯಿಂದ ಆ ಎಲ್ಲಾ ಆಫರ್ ಗಳನ್ನು ತಿರಸ್ಕರಿಸಿದೆ ಎಂದು ಪೃಥ್ವಿ ಅಂಬರ್ ತಿಳಿಸಿದ್ದಾರೆ. ಮುಂದಿನ ಐದು ಸಿನಿಮಾಗಳು ತುಂಬಾ ವಿಭಿನ್ನವಾಗಿದ್ದು, ಅದರಲ್ಲಿ ಶುಗರ್ ಲೆಸ್ ಕೂಡ ಒಂದಾಗಿದೆ ಎಂದು ಪೃಥ್ವಿ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries