HEALTH TIPS

ರಾಜ್ಯದಲ್ಲಿ ಏರುತ್ತಲೇ ಇದೆ ಕೋವಿಡ್ ಬಾಧಿತರ ಸಂಖ್ಯೆ- ಇಂದು 1758 ಮಂದಿಗಳಿಗೆ ಪಾಸಿಟಿವ್- ಸಂಪರ್ಕದ ಮೂಲಕ 1,641-ಕಾಸರಗೋಡು 42

  

            ತಿರುವನಂತಪುರ: ರಾಜ್ಯದಲ್ಲಿ ಕೋವಿಡ್ ಸೋಂಕು ವ್ಯಾಪಕ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿರುವುದು ಇಂದಿನ ಅಂಕಿಅಂಶಗಳಿಂದ ಸಾಬೀತಾಗುತ್ತಿದೆ. ಇಂದು, ರಾಜ್ಯದಲ್ಲಿ 1758 ಮಂದಿಗೆ ಕೋವಿಡ್ ದೃಢಪಡಿಸಲಾಗಿದ್ದು ಇದುವರೆಗಿನ ಗರಿಷ್ಠ ದೈನಂದಿನ ಸಂಖ್ಯೆ ಇದಾಗಿದೆ. ಇಂದು ರೋಗನಿರ್ಣಯ ಮಾಡಿದವರಲ್ಲಿ 39 ಮಂದಿ ವಿದೇಶಗಳಿಂದ ಮತ್ತು 42 ಇತರ ರಾಜ್ಯಗಳಿಂದ ಬಂದವರು. ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳದೊಂದಿಗೆ, ರಾಜ್ಯದ ಮನೆಗಳು ಮತ್ತು ಆಸ್ಪತ್ರೆಗಳಲ್ಲಿ ಕ್ವಾರಂಟೈನ್ ನಲ್ಲಿರುವವರ ಸಂಖ್ಯೆಯೂ ಹೆಚ್ಚುತ್ತಿದೆ. ಕೋವಿಡ್ ಪರಿಶೀಲನಾ ಸಭೆಯ ನಂತರ ಸರ್ಕಾರ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ ಈ ಅಂಕಿ ಅಂಶಗಳನ್ನು ತಿಳಿಸಲಾಗಿದೆ. 

                             ಸೋಂಕಿನಿಂದ ಮುಕ್ತರಾದ ಜಿಲ್ಲಾವಾರು ಅಂಕಿಅಂಶಗಳು:

        ಕೋವಿಡ್ ಸೋಂಕಿಗೆ ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ 1,365 ಜನರ ಪರೀಕ್ಷಾ ಫಲಿತಾಂಶಗಳು ನಕಾರಾತ್ಮಕವಾಗಿವೆ. ತಿರುವನಂತಪುರಂ ಜಿಲ್ಲೆಯ 310, ಕೊಲ್ಲಂ  54, ಪತ್ತನಂತಿಟ್ಟು 29, ಆಲಪ್ಪುಳ 65 , ಕೊಟ್ಟಾಯಂ 48 , ಇಡುಕ್ಕಿ 59, ಎರ್ನಾಕುಳಂ  64 , ತ್ರಿಶೂರ್ 33 ಮತ್ತು ಪಾಲಕ್ಕಾಡ್ ಜಿಲ್ಲೆಯ 82 ಮಂದಿ, ಮಲಪ್ಪುರಂ ಜಿಲ್ಲೆಯ 194, ಕೋಝಿಕ್ಕೋಡ್ 195,  ವಯನಾಡ್ ಜಿಲ್ಲೆ 46, ಕಣ್ಣೂರು 61, ಮತ್ತು ಕಾಸರಗೋಡು ಜಿಲ್ಲೆಯ 125 ಮಂದಿಗಳ ಪರೀಕ್ಷೆಗಳು ಇಂದು ಕೋವಿಡ್ ನೆಗೆಟಿವ್ ಆಗಿದೆ. ಇದರೊಂದಿಗೆ, 16,274 ಜನರಿಗೆ ಸೋಂಕು ದೃಢಗೊಂಡು ಚಿಕಿತ್ಸೆಯಲ್ಲಿದ್ದಾರೆ. 31,394 ಜನರನ್ನು ಈವರೆಗೆ ಕೋವಿಡ್‍ನಿಂದ ಮುಕ್ತಗೊಳಿಸಲಾಗಿದೆ.

                         ಸೋಂಕು ಬಾಧಿತರ ಜಿಲ್ಲಾವಾರು ಅಂಕಿಅಂಶಗಳು:

      ಇಂದು ತಿರುವನಂತಪುರದಲ್ಲಿ ಇಂದು ಅತಿ ಹೆಚ್ಚು ಸೋಂಕಿಗೊಳಗಾದವರನ್ನು ಗುರುತಿಸಲಾಗಿದೆ. ತಿರುವನಂತಪುರ 489, ಮಲಪ್ಪುರಂ 242, ಎರ್ನಾಕುಳಂ 192, ಕೋಝಿಕ್ಕೋಡ್ 147, ಆಲಪ್ಪುಳ 126, ಕಣ್ಣೂರು 123 , ಕೊಟ್ಟಾಯಂ 93 , ಕೊಲ್ಲಂ 88 ಮತ್ತು ಪತ್ತನಂತಿಟ್ಟು 88, ಪಾಲಕ್ಕಾಡ್ 65 , ಪಾಲಕ್ಕಾಡ್  51, ತ್ರಿಶೂರ್ 48 , ವಯನಾಡ್ 47 ು, ಕಾಸರಗೋಡು ಜಿಲ್ಲೆಯಲ್ಲಿ 42 ಮತ್ತು ಇಡುಕ್ಕಿ ಜಿಲ್ಲೆಯ 5 ಮಂದಿಗಳಿಗೆ ಇಂದು ಕೋವಿಡ್ ಪಾಸಿಟಿವ್ ದೃಢಪಡಿಸಲಾಗಿದೆ. 

    

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries