ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಮಂಗಳವಾರ 42 ಮಂದಿಗೆ ಕೊರೊನಾ ಸೋಂಕು ದೃಢೀಕರಿಸಲಾಗಿದೆ. ಈ ಪೈಕಿ 40 ಮಂದಿಗೆ ಸಂಪರ್ಕದ ಮೂಲಕ ಸೋಂಕು ಬಾಧಿಸಿದೆ. ತಲಾ ಒಬ್ಬರಂತೆ ವಿದೇಶ ಹಾಗು ಇತರ ರಾಜ್ಯದಿಂದ ಬಂದವರು. 127 ಮಂದಿ ಗುಣಮುಖರಾಗಿದ್ದಾರೆ.
ರೋಗ ಬಾಧಿತರು : ಚೆಮ್ನಾಡ್-6, ಉದುಮ-11, ಕುಂಬಳೆ-3, ಪುಲ್ಲೂರು-ಪೆರಿಯೆ-1, ಅಜಾನೂರು-3, ಚೆಂಗಳ-5, ಕಾಂಞಂಗಾಡ್-7, ಕಳ್ಳಾರ್-1, ವಲಿಯಪರಂಬ-1, ನೀಲೇಶ್ವರ-2, ತೃಕ್ಕರಿಪುರ-1, ಪಳ್ಳಿಕೆರೆ-1 ಎಂಬಂತೆ ರೋಗ ಬಾಧಿಸಿದೆ.
ಮೂವರ ಸಾವು : ಕೊರೊನಾ ಸೋಂಕಿನಿಂದ ಉಕ್ಕಿನಡ್ಕ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಚೆಮ್ನಾಡ್ ಪಂಚಾಯತ್ ವ್ಯಾಪ್ತಿಯ 40 ರ ಹರೆಯದ ಯುವಕ ಸಾವಿಗೀಡಾದರು. ಒಂದು ವಾರದ ಹಿಂದೆ ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಜೆಮ್ನಾಡ್ ಗ್ರಾಮ ಪಂಚಾಯತ್‍ನ 65 ವರ್ಷ ಪ್ರಾಯದ ಮಹಿಳೆಯೊಬ್ಬರು ಸಾವಿಗೀಡಾಗಿದ್ದಾರೆ. ಆ.9 ರಂದು ಕಾಸರಗೋಡು ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಸ್ಥಿತಿ ಗಂಭೀರ ಹಿನ್ನೆಲೆಯಲ್ಲಿ ಇವರನ್ನು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಅಸೌಖ್ಯದ ಹಿನ್ನೆಲೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಂತೆ ಸಾವಿಗೀಡಾದ ನೀಲೇಶ್ವರ ಕೋಟ್ಟಯಿಲ್ ನಿವಾಸಿ 75 ವರ್ಷದ ವೃದ್ಧರಿಗೆ ಕೊರೊನಾ ಪಾಸಿಟಿವ್ ಎಂಬುದಾಗಿ ತಿಳಿದು ಬಂದಿದೆ. ಕಣ್ಣೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಜುಲೈ 19 ರಂದು ಪಯ್ಯನ್ನೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. 20 ರಂದು ಕಣ್ಣೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು.


