HEALTH TIPS

ಕೇರಳ ಲೋಕಸೇವಾ ಪರೀಕ್ಷೆಗಳಲ್ಲಿ ಮಹತ್ತರ ಬದಲಾವಣೆ-ಇನ್ನು ಪರೀಕ್ಷೆಗಳು ಇರಲಿವೆ ಎರಡು ಹಂತಗಳಲ್ಲಿ


          ತಿರುವನಂತಪುರ: ಕೇರಳ ಲೋಕಸೇವಾ ಆಯೋಗದ ಪರೀಕ್ಷೆಯ ವಿಧಾನಗಳು ಬದಲಾಗುತ್ತಿವೆ ಎಂದು ಪಿಎಸ್‍ಸಿ ಪರೀಕ್ಷಾ ಅಧ್ಯಕ್ಷರು ಮಂಗಳವಾರ ತಿಳಿಸಿದ್ದಾರೆ. ಇನ್ನು ಪರೀಕ್ಷೆಗಳನ್ನು ಎರಡು ಹಂತಗಳಲ್ಲಿ ನಡೆಸಲಾಗುವುದು. ಸ್ಕ್ರೀನಿಂಗ್ ಅಂಕಗಳು ಅಂತಿಮ ಫಲಿತಾಂಶದ ಮೇಲೆ ಪರಿಣಾಮ ಬೀರುವುದಿಲ್ಲ ಮತ್ತು ಅತ್ಯುತ್ತಮವಾದವುಗಳು ಮಾತ್ರ ಎರಡನೇ ಹಂತಕ್ಕೆ ಪ್ರವೇಶ ಪಡೆಯುತ್ತವೆ ಎಂದು ಅಧ್ಯಕ್ಷರು ತಿಳಿಸಿದ್ದಾರೆ. ಹೊಸ ವ್ಯವಸ್ಥೆಯನ್ನು ಡಿಸೆಂಬರ್‍ನಿಂದ ಜಾರಿಗೆ ಬರಲಿದೆ. 

       ಮೊದಲ ಹಂತದ ಪರೀಕ್ಷೆ ಸ್ಕ್ರೀನಿಂಗ್ ಪರೀಕ್ಷೆ ಎಂದು ಪರಿಗಣಿಸಲಾಗುವುದು ಮತ್ತು ಎರಡನೇ ಪರೀಕ್ಷೆಯ ಅಂಕಗಳು ಆಯ್ದ ಕೆಲವರಿಗೆ ಅಂತಿಮ ಶ್ರೇಯಾಂಕದಲ್ಲಿ ಮಾನದಂಡವಾಗುತ್ತವೆ ಎಂದು ಪಿಎಸ್ಸಿ ಅಧ್ಯಕ್ಷರು ಹೇಳಿರುವರು. ಪ್ರಸ್ತುತ ಜಾರಿಯಲ್ಲಿರುವ ರ್ಯಾಂಕ್ ಪಟ್ಟಿಗಳನ್ನು ವಿಸ್ತರಿಸಲಾಗುವುದಿಲ್ಲ ಎಂದರು. ಕೋವಿಡ್ ಅವಧಿಯಲ್ಲಿ ಪಿಎಸ್ಸಿ ಯಶಸ್ವಿಯಾಗಿ ಮುನ್ನಡೆದಿದೆ. ಮತ್ತು ಕೋವಿಡ್ ಕಾಲಘಟ್ಟದಲ್ಲಿ 11,000 ಕ್ಕೂ ಹೆಚ್ಚು ನೇಮಕಾತಿ ಶಿಫಾರಸುಗಳನ್ನು ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿರುವರು. 

      ಪರೀಕ್ಷೆಗಳು ಪೂರ್ಣಗೊಂಡ ನಂತರ ರ್ಯಾಂಕ್ ಪಟ್ಟಿಗಳನ್ನು ತ್ವರಿತಗೊಳಿಸಲಾಗುವುದು ಎಂದು ಅಧ್ಯಕ್ಷರು ಹೇಳಿದರು. ಎಲ್ಲಾ ಪರೀಕ್ಷೆಗಳನ್ನು ಎರಡು ಹಂತಗಳಲ್ಲಿ ನಡೆಸಲಾಗುವುದು. 10 ಲಕ್ಷ ಅಥವಾ 20 ಲಕ್ಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದರೆ ಅವರಿಗೆ ಮೊದಲ ಪ್ರಾಥಮಿಕ ಸ್ಕ್ರೀನಿಂಗ್ ಪರೀಕ್ಷೆಯನ್ನು ನಡೆಸಲಾಗುತ್ತದೆ. ಇದರಲ್ಲಿ ಉತ್ತೀರ್ಣರಾದ ಅತ್ಯುತ್ತಮ ಅಭ್ಯರ್ಥಿಗಳಿಗೆ ಎರಡನೇ ಪರೀಕ್ಷೆ ನಡೆಯಲಿದೆ. ಇದು ವಿಷಯಾಧಾರಿತ, ಇನ್ನೂ ಉತ್ತಮವಾದ ಪ್ರಶ್ನೆಗಳನ್ನು ಹೊಂದಿರುತ್ತದೆ. ಇದರ ಅಂಕಗಳು ಅಂತಿಮ ಶ್ರೇಯಾಂಕದ ಮಾನದಂಡವಾಗಿರುತ್ತದೆ. ಅಂತಿಮ ಶ್ರೇಯಾಂಕದಲ್ಲಿ ಅರ್ಹತಾ ಪರೀಕ್ಷೆಯಲ್ಲಿನ ಅಂಕಗಳನ್ನು ಪರಿಗಣಿಸಲಾಗುವುದಿಲ್ಲ.

      ಯುಪಿಎಸ್‍ಸಿ ಪರೀಕ್ಷೆಯ ಮಾದರಿಯಲ್ಲಿ ರಾಜ್ಯ ಲೋಕಸೇವಾ ಆಯೋಗದ ಪರೀಕ್ಷಾ ವ್ಯವಸ್ಥೆಯನ್ನು ಉತ್ತಮ ರೀತಿಯಲ್ಲಿ ಬದಲಾಯಿಸಲಾಗುತ್ತಿದೆ ಎಂದು ಪಿಎಸ್‍ಸಿ ಅಧ್ಯಕ್ಷರು ತಿಳಿಸಿದ್ದಾರೆ. ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳ ಸಂಖ್ಯೆ ಕಡಿಮೆ ಇರುವುದರಿಂದ ಫಲಿತಾಂಶ ಪಡೆಯಲು ವಿಳಂಬವಾಗಲಾರದು. ಹೊಸ ವ್ಯವಸ್ಥೆಯನ್ನು ಡಿಸೆಂಬರ್‍ನಿಂದ ಪರೀಕ್ಷೆಗಳಲ್ಲಿ ಜಾರಿಗೆ ತರಲಾಗುವುದು ಎಂದು ಅಧ್ಯಕ್ಷರು ಹೇಳಿದರು.

        ಕೋವಿಡ್ ಕಾರಣದಿಂದಾಗಿ ಮೂಂದೂಡಲ್ಪಟ್ಟ ಪರೀಕ್ಷೆಗಳನ್ನು ನಡೆಸಲು ಪಿಎಸ್ಸಿ ನಿರ್ಧರಿಸಿದೆ. ಸೆಪ್ಟೆಂಬರ್-ಅಕ್ಟೋಬರ್ ತಿಂಗಳುಗಳಲ್ಲಿ ಪರೀಕ್ಷೆಗಳು ನಡೆಯಲಿವೆ ಎಂದು ಅಧ್ಯಕ್ಷರು ಹೇಳಿದರು. ಕೋವಿಡ್ ನಿಬಂಧನೆಗಳಿಗೆ ಅನುಗುಣವಾಗಿ ಪರೀಕ್ಷೆಗಳನ್ನು ನಡೆಸಲಾಗುವುದು. ಕೆಎಎಸ್ ಮತ್ತು ಕೇರಳ ಆಡಳಿತ ಸೇವೆಗಳ ಪ್ರಾಥಮಿಕ ಫಲಿತಾಂಶಗಳನ್ನು ಆಗಸ್ಟ್ 26 ರಂದು ಬಿಡುಗಡೆ ಮಾಡಲಾಗುವುದು ಎಂದು ಪಿಎಸ್ಸಿ ಅಧ್ಯಕ್ಷರು ತಿಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries