HEALTH TIPS

ಕಟ್ಟುನಿಟ್ಟಿನ ನಿಬಂಧನೆಗಳೊಂದಿಗೆ ನಡೆದ ನೀಟ್ ಪರೀಕ್ಷೆ- ಕೇರಳದ 12 ಜಿಲ್ಲೆಗಳಲ್ಲಿ 1,15,959 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರ್


       ತಿರುವನಂತಪುರ: ರಾಷ್ಟ್ರೀಯ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ನೀಟ್ ಕಟ್ಟುನಿಟ್ಟಿನ ನಿಬಂಧನೆಗಳೊಂದಿಗೆ ಭಾನುವಾರ ನಡೆಯಿತು. ಪರೀಕ್ಷೆಯು ಮಧ್ಯಾಹ್ನ 2 ಗಂಟೆಗೆ ಪ್ರಾರಂಭವಾಯಿತು ಮತ್ತು ಸಂಜೆ 5 ಕ್ಕೆ ಕೊನೆಗೊಂಡಿತು. 

       ದೇಶಾದ್ಯಂತ 15.97 ಲಕ್ಷ ನೋಂದಾಯಿತ ವಿದ್ಯಾರ್ಥಿಗಳಿದ್ದಾರೆ. ಕೇರಳದಲ್ಲಿ 12 ಜಿಲ್ಲೆಗಳ 322 ಪರೀಕ್ಷಾ ಕೇಂದ್ರಗಳಲ್ಲಿ 1,15,959 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾದರು. ಕಠಿಣ ಪರೀಕ್ಷೆಯ ಬಳಿಕ ವಿದ್ಯಾರ್ಥಿಗಳನ್ನು ಪರೀಕ್ಷಾ ಸಭಾಂಗಣಗಳಿಗೆ ಕಳಿಸಲಾಯಿತು. ತಪಾಸಣೆ, ಸಾಮಾಜಿಕ ಅಂತರಗಳನ್ನು ಕಟ್ಟುನಿಟ್ಟಾಗಿ ದೃಢಪಡಿಸಲಾಯಿತು.  ಪರೀಕ್ಷಾ ಸಭಾಂಗಣಗಳು ಮತ್ತು ಆವರಣಗಳನ್ನು ಈ ಹಿಂದೆ ಸೋಂಕುರಹಿತಗೊಳಿಸಲಾಗಿತ್ತು.

         ನಿಯಮಗಳು ಮತ್ತು ಮುನ್ನೆಚ್ಚರಿಕೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಅಧಿಕಾರಿಗಳು ಈ ಹಿಂದೆ ವಿದ್ಯಾರ್ಥಿಗಳಿಗೆ ಮತ್ತು ಪೆÇೀಷಕರಿಗೆ ಎಚ್ಚರಿಕೆ ನೀಡಿದ್ದರು. ಮಾಸ್ಕ್,  ಕೈಗವಸುಗಳು ಮತ್ತು ಸ್ಯಾನಿಟೈಜರ್‍ಗಳಂತಹ ತಡೆಗಟ್ಟುವ ಕ್ರಮಗಳನ್ನು ವಿದ್ಯಾರ್ಥಿಗಳು ಬಳಸಬೇಕು ಮತ್ತು ಇವುಗಳನ್ನು ಮರಳುವಾಗ ಪರೀಕ್ಷಾ ಕೇಂದ್ರಗಳಲ್ಲಿ ಬಿಡಬಾರದು ಎಂದು ಸೂಚನೆಯಲ್ಲಿ ತಿಳಿಸಲಾಗಿತ್ತು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries