ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 110 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢೀಕರಿಸಲಾಗಿದೆ. ಇದೇ ವೇಳೆ 176 ಮಂದಿ ಗುಣಮುಖರಾಗಿದ್ದಾರೆ. 102 ಮಂದಿ ಸಂಪರ್ಕದಿಂದ ರೋಗ ಬಾಧಿತರಾಗಿದ್ದಾರೆ. ಇತರ ರಾಜ್ಯದಿಂದ ಬಂದ 3 ಮಂದಿ ಮತ್ತು ವಿದೇಶದಿಂದ ಬಂದ 5 ಮಂದಿಗೆ ರೋಗ ಬಾಧಿಸಿದೆ.
ರೋಗ ಬಾಧಿತರು : ಕಾಂಞಂಗಾಡ್-20, ವರ್ಕಾಡಿ-1, ಕಾಸರಗೋಡು-9, ಕುಂಬಳೆ-7, ಕಿನಾನೂರು-4, ಅಜಾನೂರು-7, ಮುಳಿಯಾರು-5, ದೇಲಂಪಾಡಿ-1, ಬದಿಯಡ್ಕ-2, ಚೆಂಗಳ-5, ಚೆಮ್ನಾಡ್-3, ಮೊಗ್ರಾಲ್ ಪುತ್ತೂರು-1, ಬೇಡಡ್ಕ-1, ಪಿಲಿಕೋಡು-2, ತೃಕ್ಕರಿಪುರ-1, ಉದುಮ-6, ನೀಲೇಶ್ವರ-15, ಚೆರ್ವತ್ತೂರು-1, ಕಯ್ಯೂರು-2, ಕಳ್ಳಾರ್-3, ಪನತ್ತಡಿ-1, ಪುಲ್ಲೂರು-2, ಪಳ್ಳಿಕೆರೆ-5, ಪುತ್ತಿಗೆ-1, ಮಧೂರು-4, ಮಂಜೇಶ್ವರ-1 ಎಂಬಂತೆ ರೋಗ ಬಾಧಿಸಿದೆ.
177 ಮಂದಿಗೆ ಕೋವಿಡ್ ನೆಗೆಟಿವ್:
ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 177 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು.
ನೆಗೆಟಿವ್ ಆದವರ ಸ್ಥಳೀಯಾಡಳಿತ ಸಂಸ್ಥೆಗಳ ಮಟ್ಟದ ಗಣನೆ:
ಕಾಸರಗೋಡು ನಗರಸಭೆ 14, ಮಧೂರು ಪಂಚಾಯತ್ 9, ಕುತ್ತಿಕೋಲು ಪಂಚಾಯತ್ 2, ಮುಳಿಯಾರು ಪಂಚಾಯತ್ 6, ಚೆಂಗಳ ಪಂಚಾಯತ್ 8, ಬೇಡಡ್ಕ ಪಂಚಾಯತ್ 8, ಎಣ್ಮಕಜೆ ಪಂಚಾಯತ್ 3, ಮೊಗ್ರಾಲ್ ಪುತ್ತೂರು ಪಂಚಾಯತ್ 5, ಬದಿಯಡ್ಕ ಪಂಚಾಯತ್ 5, ಕುಂಬಳೆ ಪಂಚಾಯತ್ 2, ಮಂಜೇಶ್ವರ ಪಂಚಾಯತ್ 1, ಪುತ್ತಿಗೆ ಪಂಚಾಯತ್ 1, ಚೆಮ್ನಾಡ್ ಪಂಚಾಯತ್ 30, ಕಾಞಂಗಾಡ್ ನಗರಸಭೆ 15, ಪಿಲಿಕೋಡ್ ಪಂಚಾಯತ್ 6, ಪಳ್ಳಿಕ್ಕರೆ ಪಂಚಾಯತ್ 7, ಉದುಮಾ ಪಂಚಾಯತ್ 6, ಅಜಾನೂರು ಪಂಚಾಯತ್ 1, ಪಡನ್ನ ಪಂಚಾಯತ್ 2, ನೀಲೇಶ್ವರ ನಗರಸಭೆ 10, ಪುಲ್ಲೂರು-ಪೆರಿಯ ಪಂಚಾಯತ್ 1, ಚೆರುವತ್ತೂರು ಪಂಚಾಯತ್ 9, ಕಯ್ಯೂರು-ಚೀಮೇನಿ ಪಂಚಾಯತ್ 3, ಕಿನಾನೂರು-ಕರಿಂದಳಂ ಪಂಚಾಯತ್ 7, ಕಡೋಂ-ಬೇಳೂರು ಪಂಚಾಯತ್ 5 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ.
4850 ಮಂದಿ ನಿಗಾದಲ್ಲಿ:
ಕಾಸರಗೋಡು ಜಿಲ್ಲೆಯಲ್ಲಿ 4850 ಮಂದಿ ನಿಗಾದಲ್ಲಿದ್ದಾರೆ ಎಂದು ಆರೋಗ್ಯ ಇಲಾಖೆ ವರದಿ ತಿಳಿಸಿದೆ.
ಮನೆಗಳಲ್ಲಿ 3572 ಮಂದಿ, ಸಾಂಸ್ಥಿಕವಾಗಿ 1278 ಮಂದಿ ನಿಗಾದಲ್ಲಿರುವರು. ನೂತನವಾಗಿ 173 ಮಂದಿ ನಿಗಾ ಪ್ರವೇಶಿಸಿದ್ದಾರೆ. 217 ಮಂದಿ ಸೋಮವಾರ ತಮ್ಮ ನಿಗಾ ಅವಧಿ ಪೂರ್ಣಗೊಳಿಸಿದ್ದಾರೆ.
ನೂತನವಾಗಿ 256 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 185 ಮಂದಿಯ ಫಲಿತಾಂಶ ಲಭಿಸಲು ಬಾಕಿಯಿದೆ.
ಕಾಸರಗೋಡು ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 8514 ಮಂದಿಗೆ ಕೋವಿಡ್ ಪಾಸಿಟಿವ್
ಕಾಸರಗೋಡು, ಸೆ.21: ಕಾಸರಗೋಡು ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 8514 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು.
ಇವರಲ್ಲಿ 7350 ಮಂದಿಗೆ ಸಂಪರ್ಕ ಮೂಲಕ ಸೋಂಕು ತಗುಲಿದೆ. 668 ಮಂದಿ ವಿದೇಶದಿಂದ, 496 ಮಂದಿ ಇತರ ರಾಜ್ಯಗಳಿಂದ ಬಂದವರು. 6469 ಮಂದಿಗೆ ಈ ವರೆಗೆ ಕೋವಿಡ್ ನೆಗೆಟಿವ್ ಆಗಿದೆ. ಈಗ 1975 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ 846 ಮಂದಿ ಸ್ವಗೃಹಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್ ಸಂಬಂಧ ಮೃತಪಟ್ಟವರ ಸಂಖ್ಯೆ 70 ಆಗಿದೆ.
ರಾಜ್ಯದಲ್ಲಿ 2910 ಮಂದಿಗೆ ಸೋಂಕು:
ಕೇರಳದಲ್ಲಿ 2910 ಮಂದಿಗೆ ಸೋಂಕು : ಕೇರಳ ರಾಜ್ಯದಲ್ಲಿ ಸೋಮವಾರ 2910 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢೀಕರಿಸಲಾಗಿದೆ. 18 ಮಂದಿಯ ಸಾವಿಗೆ ಕೊರೊನಾ ವೈರಸ್ ಕಾರಣವೆಂಬುದಾಗಿ ಖಚಿತವಾಗಿದೆ. ರೋಗ ಬಾಧಿತರಲ್ಲಿ 36 ಮಂದಿ ವಿದೇಶದಿಂದ, 133 ಮಂದಿ ಇತರ ರಾಜ್ಯಗಳಿಂದ ಬಂದವರು. 2653 ಮಂದಿಗೆ ಸಂಪರ್ಕದ ಮೂಲಕ ರೋಗ ಬಾಧಿಸಿದೆ. 88 ಮಂದಿ ಆರೋಗ್ಯ ಕಾರ್ಯಕರ್ತರಿಗೆ ರೋಗ ಬಾಧಿಸಿದೆ. 3022 ಮಂದಿ ಗುಣಮುಖರಾಗಿದ್ದಾರೆ.
ರೋಗ ಬಾಧಿತರ ಜಿಲ್ಲಾವಾರು ವಿವರ :
ತಿರುವನಂತಪುರ-533, ಕಲ್ಲಿಕೋಟೆ-376, ಮಲಪ್ಪುರಂ-349, ಕಣ್ಣೂರು-314, ಎರ್ನಾಕುಳಂ-299, ಕೊಲ್ಲಂ-195, ತೃಶ್ಶೂರು-183, ಪಾಲ್ಘಾಟ್-167, ಕೋಟ್ಟಯಂ-156, ಆಲಪ್ಪುಳ-112, ಕಾಸರಗೋಡು-110, ಇಡುಕ್ಕಿ-82, ವಯನಾಡು-18, ಪತ್ತನಂತಿಟ್ಟ-16 ಎಂಬಂತೆ ರೋಗ ಬಾಧಿಸಿದೆ.
ಗುಣಮುಖ : ತಿರುವನಂತಪುರ-519, ಕೊಲ್ಲಂ-243, ಪತ್ತನಂತಿಟ್ಟ-79, ಆಲಪ್ಪುಳ-234, ಕೋಟ್ಟಯಂ-136, ಇಡುಕ್ಕಿ-37, ಎರ್ನಾಕುಳಂ-297, ತೃಶ್ಶೂರು-140, ಪಾಲ್ಘಾಟ್-171, ಮಲಪ್ಪುರಂ-486, ಕಲ್ಲಿಕೋಟೆ-419, ವಯನಾಡು-46, ಕಣ್ಣೂರು-39, ಕಾಸರಗೋಡು-176 ಎಂಬಂತೆ ಗುಣಮುಖರಾಗಿದ್ದಾರೆ. ಪ್ರಸ್ತುತ ಕೇರಳ ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ 39,285 ಮಂದಿ ಚಿಕಿತ್ಸೆ ಪಡೆಯುತಿದ್ದಾರೆ. 98,724 ಮಂದಿ ಗುಣಮುಖರಾಗಿದ್ದಾರೆ.





