HEALTH TIPS

ಭಾರತದ 4 ಲ್ಯಾಬ್‌ಗಳಿಂದ ಪಡೆದ ಕೋವಿಡ್ ನೆಗಟಿವ್ ವರದಿಗಳನ್ನು ತಿರಸ್ಕರಿಸಿ: ಏರ್ ಇಂಡಿಯಾ ಎಕ್ಸ್‌ಪ್ರೆಸ್ ಗೆ ದುಬೈ ಸೂಚನೆ

      ನವದೆಹಲಿ: ನಾಲ್ಕು ಭಾರತೀಯ ಪ್ರಯೋಗಾಲಯಗಳಿಂದ ಪ್ರಯಾಣಿಕರ ಪಡೆದ ಕೋವಿಡ್-19 ನೆಗಟಿವ್ ಪರೀಕ್ಷಾ ವರದಿಗಳನ್ನು ತಿರಸ್ಕರಿಸಬೇಕು ಎಂದು ದುಬೈ ನಾಗರಿಕ ವಿಮಾನಯಾನ ಪ್ರಾಧಿಕಾರ(ಡಿಸಿಎಎ) ಸೋಮವಾರ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ಗೆ ಸೂಚಿಸಿದೆ.

          ಜೈಪುರದ ಸೂರ್ಯ ಲ್ಯಾಬ್, ಕೇರಳದ ಮೈಕ್ರೋಹೆಲ್ತ್ ಲ್ಯಾಬ್, ಡಾ.ಪಿ.ಭಾಸಿನ್ ಪಾಥ್‌ಲ್ಯಾಬ್ಸ್(ಖಾಸಗಿ) ಲಿಮಿಟೆಡ್ ಮತ್ತು ದೆಹಲಿಯ ನೋಬಲ್ ಡಯಾಗ್ನೋಸ್ಟಿಕ್ ಸೆಂಟರ್ ನೀಡುವ ಕೋವಿಡ್-19 ವರದಿಗಳನ್ನು ತಿರಸ್ಕರಿಸಬೇಕು ಎಂದು ವಿಮಾನಯಾನ ಸಂಸ್ಥೆ ಟ್ವಿಟರ್‌ನಲ್ಲಿ ತಿಳಿಸಿದೆ.

      ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಯ ನಿಯಮಗಳ ಪ್ರಕಾರ, ಭಾರತದಿಂದ ಪ್ರಯಾಣಿಸುವ ಪ್ರಯಾಣಿಕರು ಪ್ರಯಾಣಕ್ಕೂ 96 ಗಂಟೆಗಳ ಮೊದಲು ಮಾಡಿದ ಆರ್ ಟಿ-ಪಿಸಿಆರ್ ನಿಂದ ಪಡೆದ ಕೋವಿಡ್ ನೆಗಟಿವ್ ಮೂಲ ಪ್ರಮಾಣಪತ್ರಗಳನ್ನು ಸಲ್ಲಿಸಬೇಕು.

       ಆಗಸ್ಟ್ 18 ಮತ್ತು ಸೆಪ್ಟೆಂಬರ್ 4 ರಂದು ಕೋವಿಡ್-19 ಪಾಸಿಟಿವ್ ಪ್ರಮಾಣಪತ್ರಗಳೊಂದಿಗೆ ಇಬ್ಬರು ಪ್ರಯಾಣಿಕರನ್ನು ಕರೆತಂದಿದ್ದಕ್ಕಾಗಿ ಸೆಪ್ಟೆಂಬರ್ 18 ರಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಗಳನ್ನು ಡಿಸಿಎಎ 24 ಗಂಟೆಗಳ ಕಾಲ ಸ್ಥಗಿತಗೊಳಿಸಿತು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries