HEALTH TIPS

ಕೊರೋನಾದಿಂದ ಮುಗ್ಗರಿಸಿರುವ ಜಾಗತಿಕ ಆರ್ಥಿಕತೆ ಚೇತರಿಕೆಗೆ ಕನಿಷ್ಠ 5 ವರ್ಷ ಬೇಕು; ವಿಶ್ವಬ್ಯಾಂಕ್

            ಮ್ಯಾಡ್ರಿಡ್‌ : ಕೋವಿಡ್‌-19 ಸಾಂಕ್ರಾಮಿಕ ರೋಗದಿಂದ ಉಂಟಾಗಿರುವ ಜಾಗತಿಕ ಆರ್ಥಿಕ ಕುಸಿತ ತನ್ನ ಚೇತರಿಕೆಯ ಹಾದಿಗೆ ಮರಳಲು ಕನಿಷ್ಟ 5 ವರ್ಷಗಳು ಬೇಕಾಗಬಹುದು ಎಂದು ವಿಶ್ವಬ್ಯಾಂಕಿನ ಪ್ರಮುಖ ಅರ್ಥಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕಳೆದ ವರ್ಷದ ಡಿಸೆಂಬರ್‌ ಹೊತ್ತಿಗೆ ಚೀನಾದಲ್ಲಿ ಕಾಣಿಸಿಕೊಂಡ ಕೊರೋನಾ ವೈರಸ್‌ ಅಕ್ಷರಶಃ ಇಡೀ ವಿಶ್ವದ ಆರ್ಥಿಕ ಕುಸಿತಕ್ಕೆ ಕಾರಣವಾಗಿದೆ. ಕೊರೋನಾ ನೀಡಿದ ಲಾಕ್‌ಡೌನ್‌ ಹೊಡೆತಕ್ಕೆ ವಿಶ್ವದ ಬಹುತೇಕ ಉದ್ಯಮಗಳು ನಷ್ಟದಿಂದಾಗಿ ಬಾಗಿಲು ಎಳೆದುಕೊಂಡಿವೆ. ಭಾರತದಲ್ಲಂತೂ ಜಿಡಿಪಿ ಪ್ರಮಾಣ ಶೇ.-23.4ಕ್ಕೆ ಕುಸಿದಿದ್ದು, ನಿರುದ್ಯೋಗ ತಾಂಡವವಾಡುತ್ತಿದೆ. ಲಾಕ್‌ಡೌನ್‌ ಅವಧಿಯಲ್ಲಿ ಸುಮಾರು 40 ಕೋಟಿಗೂ ಅಧಿಕ ಜನ ಉದ್ಯೋಗ ಕಳೆದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಇನ್ನೂ ವಲಸೆ ಕಾರ್ಮಿಕರ ಗೋಳು ಹೇಳತೀರದಾಗಿತ್ತು. ಒಟ್ಟಾರೆ ಲಾಕ್‌ಡೌನ್‌ನಿಂದಾಗಿ ಭಾರತದ ಮಾತ್ರವಲ್ಲದೆ ಇಡೀ ವಿಶ್ವದ ಆರ್ಥಿಕತೆ ಇದೀಗ ಸಂಕಷ್ಟದ ದಿನಗಳನ್ನು ಎಣಿಸುತ್ತಿದ್ದು, "ಕೊರೋನಾ ಬಿಕ್ಕಟ್ಟಿನಿಂದ ಉಂಟಾಗಿರುವ ಜಾಗತಿಕ ಆರ್ಥಿಕ ಚೇತರಿಕೆಗೆ ಕನಿಷ್ಟ ಐದು ವರ್ಷಗಳು ಬೇಕಾಗಬಹುದು" ಎಂದು ವಿಶ್ವ ಬ್ಯಾಂಕಿನ ಮುಖ್ಯ ಅರ್ಥಶಾಸ್ತ್ರಜ್ಞ ಕಾರ್ಮೆನ್ ರೀನ್‌ಹಾರ್ಟ್ ಗುರುವಾರ ತಿಳಿಸಿದ್ದಾರೆ.

         ಈ ಸಂಬಂಧ  ಮ್ಯಾಡ್ರಿಡ್‌ನಲ್ಲಿ ನಡೆದ ಸಮ್ಮೇಳನದಲ್ಲಿ ತನ್ನ ಅಭಿಪ್ರಾಯವನ್ನು ತಿಳಿಸಿರುವ ಅರ್ಥಶಾಸ್ತ್ರಜ್ಞ ಕಾರ್ಮೆನ್ ರೀನ್‌ಹಾರ್ಟ್, "ಲಾಕ್‌ಡೌನ್‌ಗಳಿಗೆ ಸಂಬಂಧಿಸಿದ ಎಲ್ಲಾ ನಿರ್ಬಂಧ ಕ್ರಮಗಳನ್ನು ಈಗಾಗಲೇ ಹಲವು ದೇಶಗಳು ತೆಗೆದುಹಾಕಿವೆ. ಇದರಿಂದ ಆರ್ಥಿಕತೆ ಮತ್ತೆ ಅಭಿವೃದ್ಧಿಯ ಹಾದಿಯನ್ನು ಹಿಡಿದಿರುವುದು ನಿಜ. ಆದರೆ, ಕೊರೋನಾ ಹೊಡೆತಕ್ಕೆ ಸಿಲುಕಿರುವ ಇಡೀ ವಿಶ್ವದ ಆರ್ಥಿಕತೆ ಮತ್ತೆ ಚೇತರಿಕೆಯ ಹಾದಿಗೆ ಮರಳಲು ಕನಿಷ್ಟ 5 ವರ್ಷಗಳಾದರೂ ಬೇಕಾಗಬಹುದು" ಎಂದು ತಿಳಿಸಿದ್ದಾರೆ.
        ಸಾಂಕ್ರಾಮಿಕ ರೋಗದಿಂದ ಉಂಟಾದ ಆರ್ಥಿಕ ಹಿಂಜರಿತವು ಇತರ ದೇಶಗಳಿಗಿಂತ ಕೆಲವು ದೇಶಗಳಲ್ಲಿ ಹೆಚ್ಚು ಕಾಲ ಉಳಿಯುತ್ತದೆ ಮತ್ತು ಅಸಮಾನತೆಗಳ ಉಲ್ಬಣಕ್ಕೆ ಕಾರಣವಾಗುತ್ತದೆ. ಏಕೆಂದರೆ ಶ್ರೀಮಂತ ದೇಶಗಳಲ್ಲಿನ ಬಿಕ್ಕಟ್ಟಿನಿಂದ ಬಡವರಿಗೆ ಹೆಚ್ಚು ತೊಂದರೆಯಾಗುತ್ತದೆ ಮತ್ತು ಬಡ ದೇಶಗಳು ಶ್ರೀಮಂತ ರಾಷ್ಟ್ರಗಳಿಗಿಂತ ಹೆಚ್ಚು ತೊಂದರೆಗೊಳಗಾಗುತ್ತವೆ. ಅಲ್ಲದೆ, ಇಪ್ಪತ್ತು ವರ್ಷಗಳಲ್ಲಿ ಮೊದಲ ಬಾರಿಗೆ ಬಿಕ್ಕಟ್ಟಿನ ನಂತರ ಜಾಗತಿಕ ಬಡತನದ ಪ್ರಮಾಣ ಏರಿಕೆಯಾಗಲಿದೆ" " ಎಂದು ರೀನ್‌ಹಾರ್ಟ್ ಹೇಳಿದ್ದಾರೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries