ಕಾಸರಗೋಡು: ಎಡನೀರು ಮಠದ ನೂತನ ಉತ್ತರಾಧಿಕಾರಿಗಳಾಗಿ ಪೀಠಾರೋಹಣಗ್ಯೆಯ್ಯಲಿರುವ ಶ್ರೀಸಚ್ಚಿದಾನಂದ ಭಾರತೀ ಅವರು ಪೂರ್ವಭಾವಿಯಾಗಿ ನಡೆಸುವ ವಿವಿಧ ಪುಣ್ಯಕ್ಷೇತ್ರ ದರ್ಶನ ಸೋಮವಾರದಿಂದ ಆರಂಭಗೊಳ್ಳಲಿದ್ದು ಬೆಳಿಗ್ಗೆ 7 ಕ್ಕೆ ಕುಂಬಳೆ ಸೀಮೆಯ ನಾಲ್ಕು ಪ್ರಧಾನ ಕ್ಷೇತ್ರಗಳಲ್ಲಿ ಒಂದಾದ ಅಡೂರು ಶ್ರೀ ಮಹಾಲಿಂಗೇಶ್ವರ ದೇವಾಲಯದಿಂದ ಪಯಣ ಆರಂಭಿಸುವರು. ಬಳಿಕ ಮಧೂರು, ಕಣಿಪುರ, ಮುಜುಂಗಾವು ಮೊದಲಾದ ದೇವಾಲಯಗಳನ್ನು ಸಂದರ್ಶಿಸಿ ಸಂಜೆ ಮಾಯಿಪ್ಪಾಡಿ ಅರಮನೆಗೆ ಭೇಟಿನೀಡುವರೆಂದು ಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.





