ತಿರುವನಂತಪುರ: ರಾಜ್ಯದ ಎಲ್ಲಾ ಶಾಲೆಗಳಲ್ಲಿ ಆನ್‍ಲೈನ್ ತರಗತಿಗಳನ್ನು ಗರಿಷ್ಠ ಅರ್ಧ ಘಂಟೆಗೆ ಇಳಿಸಬೇಕು ಮತ್ತು ಒಂದು ದಿನದ ತರಗತಿಯ ಉದ್ದವು ಎರಡು ಗಂಟೆ ಮೀರಬಾರದು ಎಂದು ಮಕ್ಕಳ ಹಕ್ಕುಗಳ ಸಂರಕ್ಷಣೆ ರಾಜ್ಯ ಆಯೋಗ ನಿರ್ದೇಶಿಸಿದೆ.
ತಿರುವಲ್ಲಾದ ಖಾಸಗಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿಯೊಬ್ಬರ ಪೆÇೀಷಕರು ನೀಡಿದ ದೂರಿನ ಹಿನ್ನೆಲೆಯಲ್ಲಿ ಮಕ್ಕಳ ರಕ್ಷಣಾ ಆಯೋಗದ ಸದಸ್ಯ ರೆನೀ ಆಂಟನಿ ಈ ಆದೇಶ ಹೊರಡಿಸಿದ್ದು, ರಾಜ್ಯದ ಸಿಬಿಎಸ್‍ಇ ಮತ್ತು ಐಸಿಎಸ್‍ಇ ಶಾಲೆಗಳ ಮಕ್ಕಳು ದಿನಕ್ಕೆ 5 ರಿಂದ 7 ಗಂಟೆಗಳ ಕಾಲ ಆನ್‍ಲೈನ್ ತರಗತಿಗಳಿಗೆ ಹಾಜರಾಗಬೇಕಾಗಿದ್ದು, ಇದು ದೈಹಿಕ ಅಸ್ವಸ್ಥತೆ ಮತ್ತು ಒತ್ತಡವನ್ನು ಉಂಟುಮಾಡುತ್ತದೆ ಎಂಬುದನ್ನು ಆಯೋಗ ಗಂಭೀರವಾಗಿ ಪರಿಗಣಿಸಿ ಈ ಮಹತ್ತರವ ತೀರ್ಪು ನೀಡಿದೆ.
ಸರ್ಕಾರಿ ಹಾಗೂ ಅನುದಾನಿತ ಶಾಲಾ ವಿದ್ಯಾರ್ಥಿಗಳು( ಸಾರ್ವಜನಿಕ ಶಿಕ್ಷಣ ಇಲಾಖೆ) ವಿಕ್ಟರ್ಸ್ ಚಾನೆಲ್ ಮೂಲಕ ಪಾಠಗಳನ್ನು ಆಲಿಸುತ್ತಿದ್ದರೆ ಅನುದಾನರಹಿತ ಶಾಲೆಗಳಲ್ಲಿನ ಮಕ್ಕಳ ದುಃಸ್ಥಿತಿಗೆ ದೂರು ಪರಿಹಾರವನ್ನು ಕೋರಿದೆ. ಪ್ರತಿ ತರಗತಿಯ ನಂತರ 15 ರಿಂದ 30 ನಿಮಿಷಗಳ ವಿಶ್ರಾಂತಿ ಅವಧಿ ಇರಬೇಕು. ಪರೀಕ್ಷೆಯ ದೃಷ್ಟಿಯಿಂದ ಆನ್ ಲೈನ್ ಲಿಖಿತ ಪರೀಕ್ಷೆಯನ್ನು ನಡೆಸಬಾರದು. ಮಕ್ಕಳ ಸಂದೇಹವನ್ನು ಪರಿಹರಿಸಲು ಮತ್ತು ಕಲಿಕೆಯ ಪ್ರಕ್ರಿಯೆಗೆ ಸಂಬಂಧಿಸಿದ ಚಟುವಟಿಕೆಗಳನ್ನು ಮೌಲ್ಯಮಾಪನ ಮಾಡಲು ವಿದ್ಯಾರ್ಥಿ ಸ್ನೇಹಿ ವಿಧಾನವನ್ನು ಅಳವಡಿಸಿಕೊಳ್ಳಬೇಕು. ಎಲ್ಲಾ ಸಿಬಿಎಸ್‍ಇ, ಐಸಿಎಸ್‍ಇ, ಜವಾಹರ್ ನವೋದಯ ಮತ್ತು ಕೇಂದ್ರ ವಿದ್ಯಾಲಯಗಳ ಪ್ರಾಂಶುಪಾಲರು ಆನ್ ಲೈನ್ ತರಗತಿಗಳ ಮಾಸಿಕ ವೇಳಾಪಟ್ಟಿಗಳನ್ನು ಜಿಲ್ಲಾಧಿಕಾರಿ ಮತ್ತು ಶಿಕ್ಷಣ ಉಪನಿರ್ದೇಶಕರಿಗೆ ಸಲ್ಲಿಸಬೇಕು ಎಂದು ಆಯೋಗ ನಿರ್ದೇಶನ ನೀಡಿದೆ.
ಮಕ್ಕಳ ಹಕ್ಕುಗಳ ಆಯೋಗದ ಆದೇಶ: ಸಂತೃಪ್ತಿ
ಎಂಎಚ್‍ಆರ್‍ಡಿ ಪ್ರಕಟಿಸಿದ ಮಾರ್ಗಸೂಚಿಗಳಿಗೆ ಅನುಸಾರವಾಗಿ ಆನ್ ಲೈನ್ ತರಗತಿಗಳನ್ನು ನಡೆಸಲಾಗಿದೆಯೆ ಎಂದು ಎಲ್ಲಾ ಶಿಕ್ಷಣ ಅಧಿಕಾರಿಗಳು ಖಚಿತಪಡಿಸಿಕೊಳ್ಳಬೇಕು. ಆನ್‍ಲೈನ್ ಅಧ್ಯಯನದ ಹೆಸರಿನಲ್ಲಿ ನಿರಂತರ ತರಗತಿಗಳು ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರುತ್ತವೆ ಎಂದು ಆರಂಭದಿಂದಲೇ ದೂರುಗಳು ಕೇಳಿಬಂದಿವೆ. ಕೆಲವು ಸಿಬಿಎಸ್‍ಇ ಶಾಲೆಗಳು ಮಕ್ಕಳಿಗೆ ವಿರಾಮ ನೀಡದಿರುವ ಪ್ರವೃತ್ತಿಯ ಬಗ್ಗೆ ವ್ಯಾಪಕ ದೂರುಗಳು ಬಂದಿವೆ. ಮಕ್ಕಳ ರಕ್ಷಣಾ ಆಯೋಗದ ಕ್ರಾಂತಿಕಾರಿ ನಿರ್ಧಾರದಿಂದ ಪೆÇೀಷಕರು ಮತ್ತು ವಿದ್ಯಾರ್ಥಿಗಳು ಈಗ ನಿರಾಳರಾಗಿದ್ದಾರೆ.





