HEALTH TIPS

ಗುರುವಿನ ಸಂದೇಶಕ್ಕೆ ಕಾಲ ವ್ಯತ್ಯಾಸವಿಲ್ಲ- ಪ್ರತಿಮೆ ಒಂದು ಸ್ಪಷ್ಟವಾದ ಸ್ಮಾರಕ-ಪಿಣರಾಯಿ ವಿಜಯನ್

   

      ತಿರುವನಂತಪುರ: ಕೇರಳದ ಸಾಮಾಜಿಕ ಇತಿಹಾಸವನ್ನು ಹಂತಹಂತವಾಗಿ ಬದಲಾಯಿಸಿದ ಮಹೋಪಾಧ್ಯಾಯ  ಶ್ರೀನಾರಾಯಣ ಗುರು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದರು. ಜನರ ಜೀವನವನ್ನು ಸಮರ್ಪಕವಾಗಿ ಕತ್ತಲೆಯಿಂದ ಬೆಳಕಿನೆಡೆಗೆ ಪರಿವರ್ತಿಸುವಲ್ಲಿ ನಾರಾಯಣ ಗುರು ಪ್ರಮುಖ ಪಾತ್ರ ವಹಿಸಿದ್ದ ಮಹಾನ್ ವ್ಯಕ್ತಿತ್ವದವರಾಗಿದ್ದರು  ಎಂದು ಅವರು ಫೇಸ್‍ಬುಕ್ ಪೆÇೀಸ್ಟ್‍ನಲ್ಲಿ ತಿಳಿಸಿದ್ದಾರೆ. 

          ರಾಜ್ಯ ರಾಜಧಾನಿ ತಿರುವನಂತಪುರದಲ್ಲಿ ಶ್ರೀ ನಾರಾಯಣ ಗುರುಗಳ ಪ್ರತಿಮೆಯನ್ನು ಅನಾವರಣಗೊಳಿಸಿದ ಬಳಿಕ ಅವರು ತಮ್ಮ ಸಂದೇಶವನ್ನು ಪೇಸ್ ಬುಕ್ ಪೋಸ್ಟ್ ನಲ್ಲಿ ಉಲ್ಲೇಖಿಸಿ ಮಾತನಾಡಿದರು.

      ರಾಜ್ಯ ಸರ್ಕಾರದ ನಿರ್ಮಾಣದಲ್ಲಿ ನಾರಾಯಣ ಗುರುಗಳ ಪ್ರತಿಮೆ ಎಲ್ಲಿಯೂ ನಿರ್ಮಿಸಿಲ್ಲ. ಈ ಹಿನ್ನೆಲೆಯಲ್ಲಿ ಗುರುಗಳ ಪ್ರತಿಮೆಯನ್ನು ರಾಜಧಾನಿಯ ಮಧ್ಯದಲ್ಲಿ ಇರಿಸಲು ನಿರ್ಧರಿಸಲಾಯಿತು, ಇದು ಹೆಚ್ಚಿನ ಜನರನ್ನು ಆಕರ್ಷಿಸುತ್ತದೆ ಮತ್ತು ಅದನ್ನು ಕಾರ್ಯಗತಗೊಳಿಸಲಾಗಿದೆ ಎಂದು ಅವರು ಹೇಳಿದರು.

       ನಿರ್ಮಿಸಲಾದ  ಪ್ರತಿಮೆಯು ಅಮೂರ್ತ ಸ್ವರೂಪದ ಸ್ಮಾರಕವಾಗಿದೆ ಎಂದ ಅವರು  'ಗುರುವಿನ ಶ್ರೇಷ್ಠ ಸ್ಮಾರಕವೇ ಗುರುಗಳ ದೊಡ್ಡ ಸಂದೇಶಗಳು. ಜೀವನದಲ್ಲಿ ಆ ಸಂದೇಶಗಳನ್ನು ಕಲಿಯುವುದು ಮತ್ತು ಅಂತೆಯೇ ನಡೆಯುವುದು ಗುರುಗಳಿಗೆ ಸಮರ್ಪಿಸುವ ದೊಡ್ಡ ಗುರು ಕಾಣಿಕೆಯಾಗಿದೆ. ಪ್ರತಿಮೆಯನ್ನು ಇಲ್ಲಿಗೆ ಸಂದರ್ಶನ ನಡೆಸುವವರೆಲ್ಲರೂ ವೀಕ್ಷಿಸುವರು. ಈ ಪ್ರತಿಮೆಯು ಹೊಸ ತಲೆಮಾರಿನ ಶಿಕ್ಷಕರಿಗೆ ಅಂತರರಾಷ್ಟ್ರೀಯ ಮತ್ತು ಶಾಶ್ವತ ಪ್ರಸ್ತುತತೆಯ ಸಂದೇಶಗಳನ್ನು ನೀಡುತ್ತದೆ' ಎಂದು ಸಿಎಂ ಹೇಳಿದರು.

       ಗುರುವಿನ ಸಂದೇಶಗಳು ಹೊಸ ಆಯಾಮಗಳನ್ನು ಪಡೆದುಕೊಳ್ಳುತ್ತಿದ್ದಂತೆ, ಹೊಸ ಸಮಾಜವು ಹುಟ್ಟುತ್ತದೆ ಎಂಬ ಭರವಸೆಯನ್ನು ಮುಖ್ಯಮಂತ್ರಿ ಹಂಚಿಕೊಂಡರು. ಗುರುಗಳೇ ಹೇಳಿರುವಂತೆ, 'ಮನುಷ್ಯ ಮತ್ತು ಮನುಷ್ಯನ ನಡುವಿನ ಸಹೋದರತ್ವ' ಸಮಗ್ರ ಏಳ್ಗೆಗೆ ಕಾರಣವಾಗುತ್ತದೆ. 'ಯಾವುದೇ ಜಾತಿ ಅಥವಾ ಧರ್ಮವಿಲ್ಲದ ಮತ್ತು ಎಲ್ಲರನ್ನು ಸಹೋದರ ಸಹೋದರಿಯರಂತೆ ನೋಡುವ ಜನರ ಸಮಾಜವು ಇಂದಿಗೆ ಅಗತ್ಯ ಇದೆ. ತನ್ನ ಜೀವನದುದ್ದಕ್ಕೂ ಗುರುಗಳು ಸಮಾಜದ ಜನರಿಗಾಗಿ ದಣಿವಿಲ್ಲದೆ ಕೆಲಸ ಮಾಡಿದರು. ಗುರುಗಳ ನಿರ್ಗಮನದ ದಶಕಗಳ ಬಳಿಕವೂ ಸಮಾಜವನ್ನು ಪೂರ್ಣ ಅರ್ಥದಲ್ಲಿ ಸಾಧ್ಯವಾಗಿಸಲು ನಮಗೆ ಸಾಧ್ಯವಾಗಲಿಲ್ಲ'ಎಂದು ಸಿಎಂ ಗಮನಸೆಳೆದರು. "ಆದ್ದರಿಂದ, ಗುರು ಸಂದೇಶವನ್ನು ಅನುರ್ಷಠಾನಗೊಳಿಸುವ ಜವಾಬ್ದಾರಿ ನಮ್ಮ ಮೇಲಿದೆ" ಎಂದು ಅವರು ಹೇಳಿದರು.

          'ಸಮುದಾಯದಲ್ಲಿ ಗುರುಗಳ  ಸಂದೇಶವನ್ನು ಹರಎಬೇಕು. ಹೆಚ್ಚು ಹೆಚ್ಚು ಜನರನ್ನು ಗುರುಗಳತ್ತ ಆಕರ್ಷಿಸುವುದು ಇಂದಿನ ಅಗತ್ಯವಾಗಿದೆ. ಈ ಸನ್ನಿವೇಶದಲ್ಲಿಯೇ ಆಧುನಿಕ ಕಾಲದಲ್ಲಿ ಗುರುವಿನ ಪ್ರತಿಮೆಯ ಸ್ಥಾಪನೆಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಗುರುವಿನ ಸಂದೇಶವು ಹಳೆಯ ಅಥವಾ ಹೊಸದರಿಂದ ಪ್ರತ್ಯೇಕಿಸಲಾಗುವುದಿಲ್ಲ. ಇದು ಸಾರ್ವಕಾಲಿಕ ಮತ್ತು ಎಲ್ಲಾ ಲೋಕಗಳಿಗೆ ಅನ್ವಯವಾಗುವ ಸಾರ್ವತ್ರಿಕ ಮೌಲ್ಯಗಳನ್ನು ತಿಳಿಸುತ್ತದೆ' ಎಂದು ಪಿಣರಾಯಿ ವಿಜಯನ್ ಹೇಳಿದರು.

       ಸಮಾಜದ ಅನೀತಿಗಳನ್ನು ತೊಡೆದುಹಾಕಿ ಸಮಾಜವನ್ನು ಶುದ್ಧೀಕರಿಸಲು ಅಂದು ನಾರಾಯಣ ಗುರುಗಳು ಆವಿರ್ಬವಿಸಿದರು. ಆದರೆ ಇಂದೀಗ ಮತ್ತೆ ಗೊಂದಲದ ಸಮಾಜ ನಿರ್ಮಾಣವಾಗುತ್ತಿದ್ದು ಸಂಕಷ್ಟಗಳು ಎದುರಾಗುತ್ತಿವೆ. ಸಮಯ ಕಳೆದರೂ ಕೆಟ್ಟ ಅಭ್ಯಾಸಗಳು ಬದಲಾಗದೆ ಉಳಿಯುತ್ತವೆ. ಇವುಗಳನ್ನು ವಿರೋಧಿಸಬೇಕಾಗಿದೆ. ಅದಕ್ಕಾಗಿಯೇ ಗುರುವಿನ ಸಂದೇಶಕ್ಕೆ ಶಾಶ್ವತ ಪ್ರಸ್ತುತತೆ ಇದೆ ಎಂದು  ಸಿಎಂ ಗಮನಸೆಳೆದರು.

        ನಿಜವಾದ ಜ್ಞಾನವು ಮಾನವೀಯತೆಗೆ ಸೇರಿದೆ. ಆದ್ದರಿಂದ ಆ ಜ್ಞಾನವನ್ನು ಎಲ್ಲರಿಗೂ ತಲುಪಿಸುವ ಗುರುಗಳ ಪ್ರಯತ್ನಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಅವರು ಹೇಳಿದರು. 'ಇಂದು ಕೇರಳದಲ್ಲಿ ವಾಮಾಚಾರದಿಂದ ಸ್ತ್ರೀ-ವಿರೋಧಿ ತಾರತಮ್ಯದವರೆಗೆ ಏನೂ ಇಲ್ಲವೆನ್ನಲಾಗದು. ಆದರೆ ಇದನ್ನು ವೈಭವೀಕರಿಸಲು ವಿದ್ಯಾವಂತ ಜನರಲ್ಲಿ ಒಂದು ಭಾಗ ಇರುತ್ತದೆ. ನಿಜವಾದ ಜ್ಞಾನವು ಅವರನ್ನು ತಲುಪುವುದಿಲ್ಲ. ನಿಜವಾದ ಜ್ಞಾನ ಮಾನವೀಯತೆಗೆ ಸೇರಿದೆ' ಸಿ.ಎಂ.ವಿಜಯನ್  ಹೇಳಿದರು. 

         ರಾಷ್ಟ್ರ ಪ್ರಜಾಪ್ರಭುತ್ವ ವ್ಯವಸ್ಥೆಯು ನಾರಾಯಣ ಗುರುಗಳಿಗೆ ಋಣಿಯಾಗಿದೆ ಎಂದು ಮುಖ್ಯಮಂತ್ರಿ ಗಮನಸೆಳೆದರು. 'ಸಂಘಟನೆಯೊಂದಿಗೆ ಅಚಲವಾಗಿರಬೇಕೆಂಬ ಗುರುವಿಗೆ ಪ್ರಗತಿಪರ ಚಳುವಳಿಗಳು ಕೇರಳದಲ್ಲಿ ಬೇರೂರಲು ದಾರಿ ಮಾಡಿಕೊಂಡವು ಎಂದು ಅವರು ಹೇಳಿದರು.

       "ಒಂದು ಜಾತಿ, ಒಂದೇ ಧರ್ಮ, ಒಂದೇ ದೇವರು" ಎಂದು ಅವರು ಹೇಳಿದಾಗ, ಗುರುವು ನಿರ್ದಿಷ್ಟ ಜಾತಿ, ನಿರ್ದಿಷ್ಟ ಧರ್ಮ ಎಂದು ಅರ್ಥೈಸಲಿಲ್ಲ. ಇದರ ಅರ್ಥ ಜಾತಿ ಮತ್ತು ಧರ್ಮವಲ್ಲ, ಮನುಷ್ಯ ಮತ್ತು ಮಾನವೀಯತೆಯ ಮಹತ್ವ. ಅಥವಾ 'ಧರ್ಮ ಏನೇ ಇರಲಿ, ಮನುಷ್ಯ ಒಳ್ಳೆಯವನಾಗಿದ್ದರೆ ಸಾಕು' ಎಂದು ಗುರು ಹೇಳುತ್ತಿರಲಿಲ್ಲ ಎಂದು ಅವರು ಈ ಸಂದರ್ಭ ತಿಳಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries