ಕೊಚ್ಚಿ: ಆನೆಗಳನ್ನು ಇನ್ನು ಮುಂದೆ ಸಾಕುಪ್ರಾಣಿಗಳೆಂದು ಪರಿಗಣಿಸಲಾಗುವುದಿಲ್ಲ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಆದೇಶವನ್ನು ತಿದ್ದುಪಡಿ ಮಾಡಿದೆ. ಏಪ್ರಿಲ್ 15 ರಂದು ಆದೇಶ ನೀಡಲಾಗಿತ್ತು. ಲಾಕ್ ಡೌನ್ ಸಮಯದಲ್ಲಿ ಸಾಕುಪ್ರಾಣಿಗಳಿಗೆ ಆಹಾರಕ್ಕಾಗಿ ಹಣ ಒದಗಿಸುವಂತ ಆದೇಶವನ್ನು ಶಿಫಾರಸು ಮಾಡಲಾಗಿತ್ತು. ಜೊತೆಗೆ ಸಾಕು ಪ್ರಾಣಿಗಳ ಪಟ್ಟಿಯಲ್ಲಿ ಆನೆಗಳನ್ನು ಉಲ್ಲೇಖಿಸಲಾಗಿತ್ತು.
ಏಷ್ಯಾದ ಆನೆಗಳು ಎಲಿಫಾಸ್ ಮ್ಯಾಕ್ಸಿಮಸ್ ಕುಲಕ್ಕೆ ಸೇರಿದ್ದು, ಭಾರತದ ವನ್ಯಜೀವಿಗಳ ಶೆಡ್ಯೂಲ್ 1 ವಿಭಾಗದಲ್ಲಿ ಸೇರಿಕೊಂಡಿವೆ ಎಂದು ಕೇರಳ ರಾಜ್ಯ ಪ್ರಾಣಿ ಕಲ್ಯಾಣ ಮಂಡಳಿಯ ಸದಸ್ಯ ಎಂ.ಎನ್.ಜಯಚಂದ್ರನ್ ನಾಯರ್ ರಾಜ್ಯಪಾಲರಿಗೆ ದೂರು ನೀಡಿದರು.
'ಆನೆಗಳನ್ನು ಸಾಕು ಪ್ರಾಣಿಗಳೆಂದು ಬಣ್ಣಿಸುವುದು ಕಾನೂನುಬಾಹಿರ. ಇದು ಆನೆಗಳಿಗೆ ಸಂಬಂಧಿಸಿದ ಅನೇಕ ಪ್ರಕರಣಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಜಯಚಂದ್ರನ್ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಸಾಕಲಾಗುವ ಆನೆಗಳನ್ನು ಖಾಸಗಿ ಒಡೆತನದ ಆನೆಗಳೆಂದು ಪ್ರತ್ಯೇಕವಾಗಿ ಉಲ್ಲೇಖಿಸಲು ಸರ್ಕಾರ ಆದೇಶಿಸಿದೆ.





