ಕುಂಬಳೆ: ಕಳೆದ 15 ವರ್ಷಗಳಿಂದ ಕುಂಬಳೆ ಗ್ರಾ.ಪಂ.ಜನಪ್ರತಿನಿಧಿಯಾಗಿ ಶಾಂತಿಪಳ್ಳ, ಮಾಟಂಗುಳಿ, ಕುಂಬಳೆ ಪೇಟೆಯನ್ನು ಪ್ರತಿನಿಧೀಕರಿಸಿ ಜನರ ಕಷ್ಟ-ಸುಖಗಳಿಗೆ ಸ್ಪಂದಿಸಿ ಮಾದರಿ ಗ್ರಾ.ಪಂ.ಸದಸ್ಯನಾಗಿ ಗುರುತಿಸಿಕೊಂಡಿರುವ ರಮೇಶ್ ಭಟ್ ಅವರನ್ನು ಕುಂಬಳೆ ಗ್ರಾ.ಪಂ.ಬಿಜೆಪಿ 23ನೇ ವಾರ್ಡ್ ಸಮಿತಿ ವತಿಯಿಂದ ಕುಂಬಳೆ ಅಂಗನವಾಡಿಯಲ್ಲಿ ಇತ್ತೀಚೆಗೆ ಸನ್ಮಾನಿಸಿ ಗೌರವಿಸಲಾಯಿತು.
ಮುಖ್ಯ ಅತಿಥಿಗಳಾಗಿ ನರಸಿಂಹ ಅಡಿಗ ಶೇಡಿಕಾವು, ಚಂದ್ರಶೇಖರ ಭಟ್ ರಾಮನಗರ, ವೀರಕೇಸರಿ ಕ್ಲಬ್ ಅಧ್ಯಕ್ಷ ಸತೀಶ್ ಕುಮಾರ್ ಭಂಡಾರಿ, ಶಿವಾನಂದ ರಾವ್ ಕಂಚಿಕಟ್ಟೆ, ಉಮೇಶ್ ಮಳಿ ಉಪಸ್ಥಿತರಿದ್ದು ಮಾತನಾಡಿದರು. ಗುರುಪ್ರಸಾದ್ ಕುಂಬಳೆ ಸ್ವಾಗತಿಸಿ, ಮಧುಸೂದನ ಮಾವಿನಕಟ್ಟೆ ವಂದಿಸಿದರು. ಅಂಗನವಾಡಿ ಕಾರ್ಯಕರ್ತೆ ಜಲಜಾಕ್ಷಿ ನಿರೂಪಿಸಿದರು.





