ಕಾಸರಗೋಡು: ವಿಶ್ವ ಕಿವುಡರ ದಿನಾಚರಣೆ ಅಂಗವಾಗಿ ಜಿಲ್ಲಾ ಮಟ್ಟದ ಕಾರ್ಯಕ್ರಮ ಮತ್ತು ವೆಬಿನಾರ್ ಕಾರ್ಯಕ್ರಮ ನಡೆಯಿತು.
ಜಿಲ್ಲಾ ಮೆಡಿಕಲ್ ಕಚೇರಿ(ಆರೋಗ್ಯ), ರಾಷ್ಟ್ರೀಯ ಆರೋಗ್ಯ ದೌತ್ಯ, ಜಿಲ್ಲಾ ಐ.ಸಿ.ಡಿ.ಎಸ್. ಸೆಲ್ ಜಂಟಿ ವತಿಯಿಂದ ಜಿಲ್ಲೆಯ ಅಂಗನವಾಡಿ ಶಿಕ್ಷಕರಿಗೆ "ಮಕ್ಕಳಲ್ಲಿ ಕಿವುಡುತನ ಕಾರಣ ಮತ್ತು ಪರಿಹಾರ" ಎಂಬ ವಿಷಯದಲ್ಲಿ ವೆಬಿನಾರ್ ನಡೆಯಿತು. ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ. ರಾಮದಾಸ್ ಅವರು ಉದ್ಘಾಟಿಸಿದರು. ಪೆರಿಯ ಸಮಾಜ ಆರೋಗ್ಯ ಕೇಂದ್ರದ ಇ.ಎ.ಎನ್.ಟಿ. ವಿಶೇಷ ತಜ್ಞೆ ಡಾ. ಅಶ್ವತಿ ಕೆಜಿ. ತರಗತಿ ನಡೆಸಿದರು. ಐ.ಸಿ.ಡಿ.ಸಿ. ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಕವಿತಾರಾಣಿ ರಂಜಿತ್ ಉಪಸ್ಥಿತರಿದ್ದರು. ಜಿಲ್ಲಾ ಶಿಕ್ಷಣ ಮತ್ತು ಮೀಡಿಯಾ ಅಧಿಕಾರಿ ಅಬ್ದುಲ್ ಲತೀಫ್ ಮಠತ್ತಿಲ್ ಸ್ವಾಗತಿಸಿದರು. ಸಹಾಯಕ ಅಧಿಕಾರಿ ಡಯಾನಾ ಎಸ್. ವಂದಿಸಿದರು.
ವಿಶ್ವ ಕಿವುಡರ ದಿನಾಚರಣೆ ಅಂಗವಾಗಿ ನಡೆದ ವೆಬಿನಾರ್ ಗಂಭೀರ ಸಮಸ್ಯೆಯೊಂದರ ಕಾರಣ ಮತ್ತು ಪರಿಹಾರದ ಬಗ್ಗೆ ಬೆಳಕು ಚೆಲ್ಲಿದೆ.
ಜಿಲ್ಲಾ ಮೆಡಿಕಲ್ ಕಚೇರಿ(ಆರೋಗ್ಯ), ರಾಷ್ಟ್ರೀಯ ಆರೋಗ್ಯ ದೌತ್ಯ, ಜಿಲ್ಲಾ ಐ.ಸಿ.ಡಿ.ಎಸ್. ಸೆಲ್ ಜಂಟಿ ವತಿಯಿಂದ ಜಿಲ್ಲೆಯ ಅಂಗನವಾಡಿ ಶಿಕ್ಷಕರಿಗೆ "ಮಕ್ಕಳಲ್ಲಿ ಕಿವುಡುತನ ಕಾರಣ ಮತ್ತು ಪರಿಹಾರ" ಎಂಬ ವಿಷಯದಲ್ಲಿ ವೆಬಿನಾರ್ ನಡೆಯಿತು.
ವಿಶ್ವ ಆರೋಗ್ಯ ಸಂಘಟನೆಯ ಗಣನೆಯ ಪ್ರಕಾರ ಪ್ರಪಂಚದಲ್ಲಿ ಸರಿಸುಮಾರು 466 ಮಿಲಿಯನ್ ಜನ ಭಾಗಶಃ , ಪೂರ್ಣರೂಪದಲ್ಲಿ ಕಿವುಡುತನದಿಂದ ಬಳಲುತ್ತಿದ್ದಾರೆ. ಇವರಲ್ಲಿ 432 ಮಂದಿ ಪ್ರಾಯಪ್ರಬುದ್ಧರಾದವರು, 34 ಮಿಲಿಯನ್ ಮಕ್ಕಳೂ ಆಗಿದ್ದಾರೆ. ಭಾರತದಲ್ಲಿ ಸರಿಸುಮಾರು 63 ಮಿಲಿಯನ್ ಮಂದಿ ಶ್ರವಣದೋಷದಿಂದ ಬಳಲುತ್ತಿದ್ದಾರೆ ಎಂದು ವಿಬಿನಾರ್ ಅಭಿಪ್ರಾಯಪಟ್ಟಿದೆ.
ಜನನದಿಂದಲೇ ಬಂದ ದೋಷ, ಗರ್ಭಿಣಿಯಾಗಿದ್ದಾಗ ತಾಯಿಗೆ ಚಿಕ್ಕನ್ಪೋಕ್ಸ್, ರೂಬೆಲ್ಲ, ಸಿಹಿಮೂತ್ರ ರೋಗ, ಅತಿ ರಕ್ತದೊತ್ತಡ ಸಹಿತ ಕಾಯಿಲೆಗಳು, ತೀಮಗಳು ಪೂರ್ತಿಯಾಗದೇ ಶಿಶುವಿನ ಜನನ ಇತ್ಯಾದಿಗಳೂ ಮಗುವಿನ ಶ್ರವಣದೋಷಕ್ಕೆ ಕಾರಣವಾಗಬಹುದು. ಪ್ರಾಯಪೂರ್ತಿಯಾದವರಲ್ಲಿ ಸಿಹಿಮೂತ್ರರೋಗ, ಅತಿ ರಕ್ತದೊತ್ತಡ, ಥಾಯಿರಾಯಿಡ್ ಸಮಸ್ಯೆಗಳು, ಅಪಘಾತ, ಧೂಮಪಾನ, ಮದ್ಯಪಾನ, ಸತತವಾಗಿ ದೊಡ್ಡ ಪ್ರಮಾಣದ ಸದ್ದು ಕೇಳಿಸಿಕೊಳ್ಳುವುದು, ಕೆಲವು ದೀರ್ಘಾವಧಿಯ ಔಷಧ ಸೇವನೆ ಇತ್ಯಾದಿಗಳು ಕುರುಡುತನಕ್ಕೆ ಕಾರಣವಾಗುತ್ತವೆ ಎಂದು ಪರಿಣತರು ಅಭಿಪ್ರಾಯಪಟ್ಟಿದ್ದಾರೆ.
ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಮೂಲಕ ವೈಜ್ಞಾನಿಕ ರೀತಿಯಲ್ಲಿ ಈ ಸಮಸ್ಯೆಯನ್ನು ಹೋಗಲಾಡಿಸಬಹುದು. "ಕಿವುಡರ ಮಾನವಹಕ್ಕುಗಳ ಖಚಿತತೆ ಮೂಡಿಸುವುದು ಈ ವರ್ಷದ ಕಿವುಡರ ದಿನಾಚರಣೆಯ ಸಂದೇಶವಾಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ಈ ವೇಳೆ ತಿಳಿಸಿದರು.




