HEALTH TIPS

ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಯನ್ನು ಅನಿರ್ದಿಷ್ಟಕಾಲ ವಿಸ್ತರಿಸಲಾಗುವುದಿಲ್ಲ-ಪಿಣರಾಯಿ ವಿಜಯನ್- ಉಪಚುನಾವಣೆ ನಡೆಸದಿರಲು ಸರ್ವಪಕ್ಷ ಸಭೆ ನಿರ್ಧಾರ

  

           ತಿರುವನಂತಪುರ: ರಾಜ್ಯದಲ್ಲಿ ಕೋವಿಡ್ ವ್ಯಾಪಕಗೊಳ್ಳುತ್ತಿರುವುದರಿಂದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಶುಕ್ರವಾರ ಕರೆದ ಸರ್ವಪಕ್ಷ ಸಭೆಯಲ್ಲಿ  ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಮುಂದೂಡಲು ನಿರ್ಧರಿಸಿದೆ. ಆದರೆ ಉಪ ಚುನಾವಣೆಗಳು ನಡೆಯಬೇಕಿದ್ದ ಚವರ ಮತ್ತು ಕುಟ್ಟನಾಡ್ ಕ್ಷೇತ್ರಗಳಲ್ಲಿನ ಉಪಚುನಾವಣೆಯನ್ನು ರದ್ದುಗೊಳಿಸಲು ಸರ್ಕಾರ ಮತ್ತು ಪ್ರತಿಪಕ್ಷಗಳು ತೀರ್ಮಾನಿಸಿದೆ ಎಮದು ತಿಳಿದುಬಂದಿದೆ. 

       ಚುನಾವಣಾ ಸಂಬಂಧಿತ ವಿಷಯಗಳ ಬಗ್ಗೆ ಸರ್ವಪಕ್ಷ ಸಭೆಯ ನಿರ್ಣಯಗಳನ್ನು ಚುನಾವಣಾ ಆಯೋಗಕ್ಕೆ ತಿಳಿಸಲಾಗುವುದು. ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಅನಿರ್ದಿಷ್ಟಾವಧಿಗೆ ವಿಸ್ತರಿಸಲು ಸಾಧ್ಯವಿಲ್ಲ ಎಂದು ಸಿಎಂ ಹೇಳಿದರು. ರಾಜ್ಯದ ಕೋವಿಡ್ ಪ್ರಕರಣಗಳ ಸಂದರ್ಭಗಳನ್ನು ಪರಿಶೀಲಿಸಿದ ನಂತರ ಈ ನಿರ್ಧಾರ ತೆಗೆದುಕೊಳ್ಳಬಹುದು ಎಂದರು.

      ಉಪಚುನಾವಣೆಯನ್ನು ಕೈಬಿಡುವ ಪರವಾಗಿ ಇರುವ ಬಿಜೆಪಿ, ಸ್ಥಳೀಯಾಡಳಿತಗಳಿಗಿರುವ ಚುನಾವಣೆಗಳನ್ನು ನಡೆಸಬೇಕು ಎಂದು ಸ್ಪಷ್ಟಪಡಿಸಿದೆ. ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಮತ್ತು ಹೆಚ್ಚಿನ ಜನರಿಗೆ ಚಿಕಿತ್ಸೆ ಮತ್ತು ಕ್ವಾರಂಟೈನ್ ನಡೆಯುತ್ತಿರುವುದರಿಂದ ನವೆಂಬರ್‍ನಲ್ಲಿ ಚುನಾವಣೆ ಅಸಾಧ್ಯ ಎನ್ನುವುದು ಸರ್ಕಾರ ಮತ್ತು ಪ್ರತಿಪಕ್ಷಗಳ ಅಭಿಪ್ರಾಯವಾಗಿದೆ. ನಾಲ್ಕು ತಿಂಗಳ ಕಾಲ ಸಂಸತ್ ಸದಸ್ಯರನ್ನು ಆಯ್ಕೆ ಮಾಡಲು ಉಪಚುನಾವಣೆ ಅಗತ್ಯವಿಲ್ಲ ಎಂಬ ಅಭಿಪ್ರಾಯ ಎಡಪಂಥೀಯ ಮತ್ತು ಸರ್ಕಾರದ ಅಭಿಪ್ರಾಯವಾಗಿದೆ.

          ವಿಧಾನಸಭೆ ಉಪಚುನಾವಣೆ ಇಲ್ಲ ಎಂದು ತಿಳಿಸಿ ರಾಜ್ಯ ಸರ್ಕಾರ ಚುನಾವಣಾ ಆಯೋಗಕ್ಕೆ ಕಳುಹಿಸಿದ ಪತ್ರದ ಪ್ರತಿಯನ್ನು ಗುರುವಾರ ಮಾಧ್ಯಮಗಳಿಗೆ ಬಿಡುಗಡೆ ಮಾಡಲಾಗಿತ್ತು. ಮುಖ್ಯ ಕಾರ್ಯದರ್ಶಿ ವಿಶ್ವಾಸ್ ಮೆಹ್ತಾ ಅವರು ಆಗಸ್ಟ್ 21 ರಂದು ಚುನಾವಣಾ ಆಯೋಗ ಕಳುಹಿಸಿದ ಪತ್ರದ ಪ್ರತಿಯನ್ನು ಬಿಡುಗಡೆ ಮಾಡಿದರು. 

       ವಿಧಾನಸಭಾ ಚುನಾವಣೆಗೆ ಇನ್ನು ಹೆಚ್ಚು ಸಮಯವಿಲ್ಲದ್ದರಿಂದ ಉಪಚುನಾವಣೆಗಳನ್ನು ಈಗ ನಡೆಸಿದರೆ ಭಾರಿ ನಷ್ಟವಾಗಲಿವೆ. ಕೇರಳ ವಿಧಾನಸಭೆಯ ಅವಧಿ 2021 ರ ಮೇ 21 ರವರೆಗೆ ಇರುವುದರಿಂದ ಹೊಸ ಸದಸ್ಯರಿಗೆ ಕೆಲಸ ಮಾಡಲು ಕಡಿಮೆ ಸಮಯವಷ್ಟೇ ಲಭ್ಯವಾಗುತ್ತದೆ ಎಂದು ಮುಖ್ಯ ಕಾರ್ಯದರ್ಶಿ ಪತ್ರದಲ್ಲಿ ತಿಳಿಸಿದ್ದಾರೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries