HEALTH TIPS

ಸುರೇಶ್ ಗೋಪಿ, ಕಣ್ಣಂತಾನಂ, ರಾಜೀವ್ - ಈಗ ಅಬ್ದುಲ್ಲ ಕುಟ್ಟಿ ಕೂಡ! -ಬಿಜೆಪಿ ಕೇರಳ ರಾಜ್ಯ ಘಟಕದಲ್ಲಿ ಭಿನ್ನಾಭಿಪ್ರಾಯದ ಹೊಗೆ-ಪಕ್ಷ ಬೆಳವಣಿಗೆಗೆ ಹೊಡೆತ

  

       ತಿರುವನಂತಪುರ: ಕೇಂದ್ರ ಬಿಜೆಪಿ ಕಾರ್ಯಕಾರಿಣಿಯಲ್ಲಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಿ ಉಪಯೋಗವಿಲ್ಲದ ನಾಯಕರಿಗೆ ಮಣೆ ಹಾಕುತ್ತಿರುವ ಬಗ್ಗೆ ಕೇರಳ ಬಿಜೆಪಿಯಲ್ಲಿ ಅಸಮಧಾನದ ಹೊಗೆ ಮತ್ತೊಮ್ಮೆ ಎದ್ದಿದೆ!

      ಪ್ರಸ್ತುತ ಪ್ರಕಟಗೊಂಡ  ಪಟ್ಟಿಯಲ್ಲಿ ಖಚಿತವಾಗಿ ಸ್ಥಾನ ಪಡೆಯುವ ನಿರೀಕ್ಷೆಯಿದ್ದ ಪಿ.ಕೆ.ಕೃಷ್ಣದಾಸ್, ಕುಮ್ಮನಂ ರಾಜಶೇಖರನ್ ಮತ್ತು ಶೋಭಾ ಸುರೇಂದ್ರನ್ ಅವರ ಲೋಪವು ರಾಜ್ಯ ಮಟ್ಟದಲ್ಲಿ ದೊಡ್ಡ ಚರ್ಚೆಗಳಿಗೆ ಕಾರಣವಾಗುವುದು ಖಚಿತವಾಗಿದೆ.

         ಬಿಜೆಪಿ ರಾಜ್ಯ ಅಧ್ಯಕ್ಷ ಕೆ.ಸುರೇಂದ್ರನ್ ಮತ್ತು ಕೇಂದ್ರ ಸಚಿವ ವಿ ಮುರಲೀಧರನ್ ಅವರ ಹಸ್ತಕ್ಷೇಪದಿಂದಾಗಿ ಕೃಷ್ಣದಾಸ್ ಅವರನ್ನು ಕಡೆಗಣಿಸಲಾಗಿದೆ ಎಂಬ ಮಾತುಗಳು ಪಕ್ಷದೊಳಗಿಂದಲೇ ಕೇಳಿಬಂದಿದೆ. ಆದರೆ ಕೇಂದ್ರ ನಾಯಕತ್ವವು ಈ ಕಾರಣದಿಂದ ಅವರನ್ನು ಆಯ್ಕೆಗೊಳಿಸಲು ಮುಂದಾಗಿಲ್ಲ ಎಂಬ ಸಮಜಾಯಿಶಿ ವ್ಯಕ್ತವಾಗಿದೆ. ಅಲ್ಲದೆ, ಕ್ಯಾಬಿನೆಟ್ ಪುನರ್ರಚನೆಯಲ್ಲಿ ಕೇರಳಕ್ಕೆ ಸೂಕ್ತ ಪರಿಗಣನೆ ಸಿಗಲಿದೆ ಎಂದು ಸುಳಿವು ಲಭ್ಯವಾಗಿದೆ. 

       ಆದರೆ ರಾಜ್ಯ ನಾಯಕರು, ಗುಂಪಗಳನ್ನು ಲೆಕ್ಕಿಸದೆ, ರಾಜ್ಯ ಘಟಕದ ಪ್ರಸ್ತಾಪಗಳನ್ನು ಪಕ್ಷ, ಸರ್ಕಾರ ಅಥವಾ ಸಂಸದೀಯ ಸ್ಥಾನಗಳಲ್ಲಿ ಆಗಾಗ್ಗೆ ತಿರಸ್ಕರಿಸುವುದರ ಬಗ್ಗೆ ಮತ್ತು ಪಕ್ಷದ ಹಿರಿಯ ನಾಯಕರನ್ನು ಕಡೆಗಣಿಸುವುದರ ಬಗ್ಗೆ ಅಸಮಾಧಾನ ವ್ಯಕ್ತಗೊಂಡಿದೆ. 

        ಬಿಜೆಪಿಯ ಹಿರಿಯ ಸದಸ್ಯರಲ್ಲದ ಅಲ್ಫೋನ್ಸ್ ಕಣ್ಣಂತಾನಂ, ಸುರೇಶ್ ಗೋಪಿ ಮತ್ತು ರಾಜೀವ್ ಚಂದ್ರಶೇಖರ್ ಅವರಿಗೆ ರಾಜ್ಯಸಭಾ ಸ್ಥಾನಗಳನ್ನು ಈ ಹಿಂದೆ ನೀಡಲಾಗಿತ್ತು. ಮತ್ತು ರಾಜ್ಯ ಘಟಕದ ಹಿತಾಸಕ್ತಿಗಳನ್ನು ಪರಿಗಣಿಸದೆ ಕಣ್ಣಂತಾನಂಗೆ ಸಚಿವಾಲಯ ನೀಡಲಾಯಿತು. ಆದರೆ ಇವರಿಂದ ಪಕ್ಷವು ಯಾವ ವರ್ಚಸ್ಸನ್ನೂ ಗಳಿಸಲು ಶಕ್ತವಾಗಿಲ್ಲ.  ಟೀಕೆಗಳನ್ನು ನಿಗ್ರಹಿಸಲು ವಿ ಮುರಲೀಧರನ್ ಅವರನ್ನು ರಾಜ್ಯಸಭೆಯ ಸದಸ್ಯರನ್ನಾಗಿ ಮತ್ತು ಕೇಂದ್ರ ಸಚಿವರನ್ನಾಗಿ ಮಾಡಲಾಯಿತು. ಪಿ.ಎಸ್.ಶ್ರೀಧರನ್ ಪಿಳ್ಳೈ ಅವರನ್ನು ಮಿಜೋರಾಂ ರಾಜ್ಯಪಾಲರನ್ನಾಗಿ ಮಾಡಲಾಯಿತು. ಮತ್ತೆ ಕೇಂದ್ರ ಸಚಿವಾಲಯಕ್ಕೆ ಪರಿಗಣಿಸಲ್ಪಟ್ಟವರಲ್ಲಿ ಕಣ್ಣಂತಾನಂ ಮತ್ತು ಸುರೇಶ್ ಗೋಪಿ ಸೇರಿದ್ದಾರೆ. ರಾಜೀವ್ ಚಂದ್ರಶೇಖರ್ ಕೂಡ ಸಚಿವಾಲಯದ ಹುದ್ದೆಯನ್ನು ಅಲಂಕರಿಸಿದ್ದರು. 

      ಆದರೆ ಕಣ್ಣಂತಾನಂ ಮತ್ತು ರಾಜೀವ್ ಅವರನ್ನು ಸಚಿವರನ್ನಾಗಿ ನೇಮಿಸುವುದನ್ನು ರಾಜ್ಯ ಘಟಕ ಒಪ್ಪಿರಲಿಲ್ಲ. ಸಂಸತ್ತಿನಲ್ಲಿ ಕೇರಳದಿಂದ ಬೇರೆ ಯಾವುದೇ ಪಕ್ಷದ ನಾಯಕರು ಇಲ್ಲದಿರುವುದರಿಂದ ಸುರೇಶ್ ಗೋಪಿ ಅವರನ್ನು ಸಂಪುಟಕ್ಕೆ ಸೇರಿಸಲು ರಾಜ್ಯ ಘಟಕ ವಿರೋಧಿಸುವುದಿಲ್ಲ. ಇದೇ ವೇಳೆ ರಾಜ್ಯದಲ್ಲಿ ಪಕ್ಷದ ಬೆಳವಣಿಗೆಯ ಲಾಭಕ್ಕಾಗಿ ಪಿಕೆ ಕೃಷ್ಣದಾಸ್ ಅವರನ್ನು ಬೇರೆ ರಾಜ್ಯದಿಂದ ರಾಜ್ಯಸಭೆಗೆ ಮತ್ತು ಕೇಂದ್ರ ಸಚಿವ ಸಂಪುಟಕ್ಕೆ ಕರೆತರುವ ಪ್ರಸ್ತಾಪವನ್ನು ಕೇಂದ್ರ ನಾಯಕತ್ವ ಪರಿಗಣಿಸುತ್ತಿದೆ.

      ಆದರೆ ರಾಜ್ಯಸಭೆಯಲ್ಲಿ ಕೇರಳದಿಂದ ಪ್ರಸ್ತುತ 4 ಸದಸ್ಯರು ಇತರ ರಾಜ್ಯಗಳ ಮೂಲಕ ಇರುವುದರಿಂದ ಅದನ್ನು ಪರಿಗಣಿಸುವುದು ಕಷ್ಟ ಎಂದು ರಾಷ್ಟ್ರೀಯ ನಾಯಕರ ಅಭಿಪ್ರಾಯವಾಗಿದೆ.

       ಎ.ಪಿ ಅಬ್ದುಲ್ಲಕುಟ್ಟಿಯನ್ನು ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ಮಾಡಲಾಗಿದ್ದರೂ, ಕೇರಳ ಘಟಕವು ಆ ಬಗ್ಗೆ ತೃಪ್ತಿ ಹೊಂದಿಲ್ಲ ಎಂದು ವರದಿಯಾಗಿದೆ. ಟಾಮ್ ವಡಕ್ಕನ್ ಅವರನ್ನು ರಾಷ್ಟ್ರೀಯ ವಕ್ತಾರರನ್ನಾಗಿ ಮಾಡಿರುವುದು ಕೇರಳದ ನಾಯಕರಿಗೆ ಹಿತವಾಗಿಲ್ಲ ಎನ್ನಲಾಗಿದೆ. ಕೇರಳದ ನಾಯಕರು ರಾಜ್ಯದ ಹಿರಿಯ ನಾಯಕರನ್ನು ಕಡೆಗಣಿಸಿ ನವಾಗತರಿಗೆ  ಹೆಚ್ಚಿನ ಪರಿಗಣನೆ ನೀಡುತ್ತಿದ್ದಾರೆ ಎಂಬ ಸಿಟ್ಟು ರಾಜ್ಯ ನಾಯಕರಿಗಿದೆ ಎಂದು ತಿಳಿದುಬಂದಿದೆ. ರಾಷ್ಟ್ರೀಯ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ಅರವಿಂದ್ ಮೆನನ್ (ತ್ರಿಶೂರ್) ಮಾತ್ರವೇ ನಿನ್ನೆ ನಡೆದ ಕೇಂದ್ರ ಕಾರ್ಯಕಾರಿಣಿಯ ಕೇರಳದ ಏಕೈಕ ಹಿರಿಯ ಸದಸ್ಯರಾಗಿದ್ದಾರೆ. ಈ ಎಲ್ಲದರ ಹೊರತಾಗಿಯೂ, ಕೇರಳದ ಬಿಜೆಪಿ ನಾಯಕರು ಗುಂಪು ಜಗಳಗಳನ್ನು ಮರೆತು ಒಗ್ಗಟ್ಟಾಗಿ ನಿಲ್ಲಲು ಸಿದ್ಧರಿಲ್ಲ. ಒಗ್ಗಟ್ಟಾಗಿ ಇರಲು ರಾಷ್ಟ್ರೀಯ ನಾಯಕತ್ವ ಬಯಸಿದೆ ಎಂದು ವಿಶ್ಲೇಶಿಸಲಾಗಿದೆ. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries