ಮಧೂರು: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ಪಾರಂಪರ್ಯ ಅರ್ಚಕ ಮೇಲಿನ ಮನೆ ವೆಂಕಟಕೃಷ್ಣ ಕಲ್ಲೂರಾಯ (88)ಅವರು ಭಾನುವಾರ ಕೊಕ್ಕಡದಲ್ಲಿರುವ ಪುತ್ರಿಯ ಮನೆಯಲ್ಲಿ ನಿಧನ ಹೊಂದಿದರು. ಕಳೆದ 70 ವರ್ಷಗಳಿಗಿಂತಲೂ ಹೆಚ್ಚುಕಾಲ ಮಧೂರು ಶ್ರೀಕ್ಷೇತ್ರದ ಬೃಹತ್ ಉತ್ಸವಮೂರ್ತಿಯನ್ನು ಹೊತ್ತು ವಿಶಿಷ್ಟ ತಿಡಂಬು ನೃತ್ಯದ ಮೂಲಕ ಗಮನ ಸೆಳೆದಿದ್ದರು.
ಮೃತರು ಮೂವರು ಪುತ್ರರು ಹಾಗು ಪುತ್ರಿಯನ್ನು ಅಗಲಿದ್ದಾರೆ. ಮೃತರು ಯಕ್ಷಗಾನ ಕಲಾವಿದರೂ ಆಗಿದ್ದರು. ಎರಡನೇ ಪುತ್ರ ರಾಜಕುಮಾರ್ ಕಲ್ಲೂರಾಯ ವಯನಾಡ್ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಾಗಿದ್ದಾರೆ.







