HEALTH TIPS

ಬೃಂದಾವನಸ್ಥರಾದ ಅಭಿನವ ಶಾಂಕರ ಎಡನೀರುಶ್ರೀ-ಸಚ್ಚಿದಾನಂದ ಭಾರತಿ ಉತ್ತರಾಧಿಕಾರಿ

     ಕಾಸರಗೋಡು: ನಿನ್ನೆ ಬ್ರಹ್ಮ್ಯೆಕ್ಯರಾದ ಶ್ರೀಮದ್ ಎಡನೀರು ಮಠಾಧೀಶ ಶ್ರೀಕೇಶವಾನಂದ ಭಾರತೀ ಪಾದಂಗಳವರ ಬೃಂದಾವನ ವಿಧಿವಿಧಾನಗಳು ಅಪರಾಹ್ನ ಸಕಲ ವೈಧಿಕ ವಿಧಿವಿಧಾನಗಳೊಂದಿಗೆ ಯತಿ ಪರಂಪರೆಯನುಸಾರ ನೆರವೇರಿತು.

        ಸಾಗಿಬಂದ ದಾರಿ-ಸಾಧನೆ:      

      1960, ನ.14ರಿಂದ ಎಡನೀರು ಮಠಾಧಿಶರಾಗಿ ಕಾರ್ಯನಿರ್ವಹಿಸಲು ಆರಂಭಿಸಿದ್ದ ಶ್ರೀಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ, ಸಂಗೀತ, ಯಕ್ಷಗಾನ, ಶಿಕ್ಷಣ, ಪ್ರವಾಸೋದ್ಯಮ ಸಹಿತ ಧಾರ್ಮಿಕ ಕ್ಷೇತ್ರಗಳಲ್ಲಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಎಡನೀರು ಮಠದಕೊಡುಗೆ ಮಹತ್ವದ್ದಾಗಿತ್ತು.

    ಕಾಸರಗೋಡಿನಲ್ಲಿ ಕನ್ನಡ ಸಂಸ್ಕøತಿಯ ಕೇಂದ್ರವಾಗಿ ಎಡನೀರು ಗುರುತಿಸಲ್ಪಟ್ಟಿತ್ತು. ಕೇರಳದ ಕನ್ನಡ ಅಲ್ಪಸಂಖ್ಯಾತ ಪ್ರದೇಶವಾದ ಕಾಸರಗೋಡು ಜಿಲ್ಲೆಯ ಎಡನೀರು ಇಡೀ ದೇಶದ ಗಮನ ಸೆಳೆದ ಸಂಸಸ್ಥಾನವಾಗಿದೆ.

     ಇಡೀ ಭಾರತವೇ ಗುರುತಿಸುವ ಸುಪ್ರೀಂಕೋರ್ಟ್‍ನ ಕೇಶವಾನಂದ ಭಾರತೀ ವರ್ಸಸ್ ಕೇರಳ ರಾಜ್ಯ ಪ್ರಕರಣದ ತೀರ್ಪು, ಭಾರತೀಯ ಸಂವಿಧಾನದ ತಿದ್ದುಪಡಿಗಳ ಮೇಲಿನ ಇತಿಮಿತಿಗಳು ಹಾಗೂ ನಿಯಂತ್ರಣಕ್ಕೆ ಮಾರ್ಗದರ್ಶನವಾಗಿದೆ.

     ಇಡೀ ಭಾರತದಲ್ಲಿ ಕಾನೂನು ಶಿಕ್ಷ ಣ ಆರಂಭವಾಗುವಲೇ, ಕಾನೂನು ವಿದ್ಯಾರ್ಥಿಗಳು ಕೇಶವಾನಂದ ಭಾರತೀ ವರ್ಸಸ್ ಕೇರಳ ರಾಜ್ಯ ಪ್ರಕರಣದ ಕುರಿತು ಅಧ್ಯಯನ ನಡೆಸುತ್ತಾರೆ.


          ಏನೀದು ಕೇಶವಾನಂದ ಭಾರತೀ ಕೇಸ್?:

    ಸ್ವಾತಂತ್ರ್ಯ ಭಾರತದ ಒಂದು ಪ್ರಧಾನ ಸಾಂವಿಧಾನಿಕ ಪ್ರಕರಣ ಕೇಶವಾನಂದ ಭಾರತಿ ವರ್ಸಸ್ ಕೇರಳ ರಾಜ್ಯ ಪ್ರಕರಣ. ಕಾಸರಗೋಡು ಜಿಲ್ಲೆಯ ಎಡನೀರು ಮಠಾದೀಶ ಶ್ರೀಶ್ರೀ ಕೇಶವಾನಂದ ಭಾರತೀ ಸ್ವಾಮೀಜಿಯವರು 1971ರಲ್ಲಿ ಕೇರಳ ಸರ್ಕಾರದ ಭೂ ಸುಧಾರಣಾ ಕಾಯ್ದೆ ವಿರುದ್ಧ ಸುಪ್ರೀಂಕೋರ್ಟ್‍ನಲ್ಲಿ ದಾವೆ ಹೂಡಿದರು.

   ಆಸ್ತಿ ಮೂಲಭೂತವಾದುದೋ ಅಥವಾ ಇಲ್ಲವೋ ಎಂಬುದು ಈ ಪ್ರಕರಣದ ಪ್ರಧಾನ ಅಂಶವಾಗಿತ್ತು. ಆ ಪ್ರಕರಣದ ಬಗ್ಗೆ ಸುಪ್ರೀಂಕೋರ್ಟ್ ಸಂವಿಧಾನದ ತಿದ್ದುಪಡಿಗಳು ಸಂವಿಧಾನದ ಮೂಲ ನಿರ್ಮಾಣವನ್ನು ಕಡ್ಡಾಯವಾಗಿ ಗೌರವಿಸಬೇಕೆಂದು ಸಾರಿತು.ನ್ಯಾಯಾಲಯದ ಆದೇಶ ಸಂವಿಧಾನದ ಕೆಲವು ಮೂಲ ವಿಷಯಗಳನ್ನು ತಿದ್ದುಪಡಿ ಮೂಲಕ ಬಲಾಯಿಸುವುದು ಸಾಧ್ಯವಿಲ್ಲ ಎಂಬುದಾಗಿ ತಿಳಿಸಿತ್ತು. ಅಂದರೆ ಭಾರತದ ಸಂಸತ್ತಿನ ಸಾಂವಿಧಾನಿಕ ತಿದ್ದುಪಡಿಯಾಗಬಹುದು, ಆದರೆ ಅದು ಸಂವಿಧಾನದ ಮೂಲಭೂತ ಸ್ವಭಾವವನ್ನು ಬದಲಾಯಿಸಬಾರದು ಎಂಬುದು ಈ ತೀರ್ಪಿನ ವಿಶೇಷತೆಯಾಗಿತ್ತು.ಕೇರಳ ಸರ್ಕಾರದ ಭೂಪರಿಷ್ಕರಣೆ ಪ್ರಕಾರ ಕಾಸರಗೋಡು ಸಮೀಪದ ಎಡನೀರು ಮಠದ ಆಸ್ತಿಯನ್ನು ಕೇರಳ ಸರ್ಕಾರ ಸ್ವಾಧೀನಪಡಿಸುವುದಕ್ಕೆ ಸಂಬಂಧಿಸಿದ ಪ್ರಕರಣವಾಗಿತ್ತು.ಎಡನೀರು ಮಠಾಧೀಶ ಶ್ರೀಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಇದರ ವಿರುದ್ಧ ಸುಪ್ರೀಂಕೋರ್ಟ್‍ಗೆ ದಾವೆ ಹೂಡಿ ಭೂಪರಿಷ್ಕರಣೆ ಕಾಯ್ದೆ ಮಾನ್ಯತೆಯನ್ನು ಪ್ರಶ್ನಿಸಿದ್ದರು. ಇದರೊಂದಿಗೆ ಧಾರ್ಮಿಕ ಹಕ್ಕು, ಮಠಗಳನ್ನು ನಡೆಸಲು ಇರುವ ಹಕ್ಕು, ಸಮಾನತೆಯ ಹಕ್ಕು, ಆಸ್ತಿ ಹಕ್ಕು ಮುಂತಾದ ಮೂಲಭೂತ ಹಕ್ಕುಗಳನ್ನು ಸಂರಕ್ಷಿಸುವ ಕುರಿತು ಉಲ್ಲೇಖಿಸಲಾಗಿತ್ತು. ಸುಮಾರು 68 ದಿನಗಳ ಕಾಲ  ವಾದ ಪ್ರತಿವಾದ ನಡೆಯಿತು. ಮಠದ ಪರವಾಗಿ ಎನ್.ಎ.ಪಾಲ್ಕಿವಾಲ ವಾದಿಸಿದ್ದರು. 

        ಗಣ್ಯರ ಸಂತಾಪ:

    ಶ್ರೀಗಳ ಬ್ರಹ್ಮ್ಯೆಕ್ಯಕ್ಕೆ ಪ್ರಧಾನಿ ನರೇಂದ್ರಮೋದಿ, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ಕರ್ನಾಟಕ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಂಸದೆ ಶೋಭಾ ಕರಂದ್ಲಾಜೆ, ಕೊಂಡೆವೂರು ಮಠದ ಶ್ರೀಯೋಗಾನಂದ ಸರಸ್ವತಿ ಸ್ವಾಮೀಜಿ, ಒಡಿಯೂರು, ಮಾಣಿಲ ಶ್ರೀಗಳು, ಕಾಸರಗೋಡು ಚಿನ್ಮಯಾನಂದ ಸ್ವಾಮೀಜಿ, ಕರಿಂಜೆ ಶ್ರೀಗಳು, ಕಟೀಲು ಆಸ್ರಣ್ಣ ಸಹೋದರರು, ಬಿಜೆಪಿ ಕೇರಳ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್, ಕೇಂದ್ರ ವಿ.ಮುರಳೀಧರನ್ ಮೊದಲಾದವರು ಟ್ವೀಟ್ ಮಾಡಿ ತೀವ್ರ ಸಂತಾಪ ಸೂಚಿಸಿದ್ದಾರೆ.




         ಗಣ್ಯರ ಭೇಟಿ:

    ಸಂಸದ ರಾಜಮೋಹನ ಉಣ್ಣಿತ್ತಾನ್, ಉದುಮ ಶಾಸಕ ಕೆ.ಕುಂಞÂ ರಾಮನ್, ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು, ಮಂಜೇಶ್ವರ ಶಾಸಕ ಎಂ.ಸಿ.ಖಮರುದ್ದೀನ್, ಬಿಜೆಪಿ ಜಿಲ್ಲಾಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್, ಮುಖಂಡ ಕುಂಟಾರು ರವೀಶ ತಂತ್ರಿ, ಸ್ಥಳೀಯ ಜಿಲ್ಲಾ ಪಂಚಾಯತಿ, ಗ್ರಾ.ಪಂ. ಸದಸ್ಯರು, ವಿವಿಧ ಪಂಚಾಯತಿಗಳ ಅಧ್ಯಕ್ಷರು, ಕಾಸರಗೋಡು ತಹಶೀಲ್ದಾರ್, ರಂಗಕರ್ಮಿ, ಕರ್ನಾಟಕ ಕೊಂಕಣಿ ಅಕಾಡೆಮಿ ಮಾಜಿ ಅಧ್ಯಕ್ಷ ಕಾಸರಗೋಡು ಚಿನ್ನಾ, ಕೇರಳ ಪಾರ್ತಿಸುಬ್ಬ ಕಲಾಪರಿಷತ್ತಿನ ಅಧ್ಯಕ್ಷ ಎಂ.ಶಂಕರ ರೈ ಮಾಸ್ತರ್,  ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಸದಸ್ಯರೂ, ಕೇರಳ ತುಳು ಅಕಾಡೆಮಿ ಅಧ್ಯಕ್ಷ ಎಂ.ಉಮೇಶ ಸಾಲ್ಯಾನ್, ಹಲವು ಯಕ್ಷಗಾನ, ಸಂಗೀತ, ನೃತ್ಯ ಕಲಾವಿದರು ಸಹಿತ ಅನೇಕ ಮಂದಿ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು.

            ಮುಂದಿನ ಮಠಾಧಿಪತಿಗಳ ಘೋಷಣೆ:

    ಸೆ.2 ರಂದು ತಮ್ಮ 60ನೇ ಚಾತುರ್ಮಾಸ್ಯ ವ್ರತಾನುಷ್ಠಾನವನ್ನು ಯಶಸ್ವಿಯಾಗಿ ಪೂರೈಸಿದ್ದರು. ಈ ವೇಳೆಯೇ ವಯೋಸಹಜವಾಗಿ ಅಲ್ಪ ನಿತ್ರಾಣರಂತೆ ಕಂಡುಬಂದಿದ್ದ ಶ್ರೀಗಳು ತಮ್ಮ ಉತ್ತರಾಧಿಕಾರಿಯಾಗಿ ತಮ್ಮ ಪೂರ್ವಾಶ್ರಮದ ಸಹೋದರಿ ಸರಸ್ವತಿ-ನಾರಾಯಣ ಕೆದಿಲಾಯ ದಂಪತಿಗಳ ಸುಪುತ್ರ ಜಯರಾಮ ಕೆದಿಲಾಯ ಅವರನ್ನು ನೇಮಿಸಲಾಗಿದೆ.ಶ್ರೀಸಚ್ಚಿದಾನಂದ ಭಾರತೀ ಎಂಬ ನಾಮಧೇಯವಿರಿಸಲಾಗಿದ್ದು ಸೆ.28 ರಂದು ಅಧಿಕೃತವಾಗಿ ದೀಕ್ಷೆ ಸ್ವೀಕರಿಸಲಿರುವರೆಂದು ತಿಳಿದುಬಂದಿದೆ.

      ಪ್ರಸ್ತುತ 50ರ ಹರೆಯದ ಜಯರಾಮ ಮಂಜತ್ತಾಯ ಅವರು ಕೇರಳ ಪಾರ್ತಿಸುಬ್ಬ ಯಕ್ಷಗಾನ ಕಲಾಪರಿಷತ್ತಿನ ಅಧ್ಯಕ್ಷರಾಗಿದ್ದವರು.ಪ್ರಸ್ತುತ ಸದಸ್ಯರಾಗಿದ್ದಾರೆ. ಮಠದ ಸಂಪೂರ್ಣ ಉಸ್ತುವಾರಿಯನ್ನು ಕಳೆದೊಂದು ದಶಕದಿಂದ ಸಮರ್ಥವಾಗಿ ನಿಭಾಯಿಸಿರುವ ಜಯರಾಮ ಅವರು ಎಲ್ಲಾ ಜಾತಿ, ಮತ, ಧರ್ಮ, ರಾಜಕೀಯ ಪಕ್ಷಗಳೊಂದಿಗೆ ಸಮಷ್ಠಿ ಭಾವದಲ್ಲಿ ಜನಾನುರಾಗಿಯಾಗಿದ್ದು, ಉನ್ನತ ವಲಯಗಳ ವರೆಗಿನ ಸಂಪರ್ಕ ಹೊಂದಿ ಸಜ್ಜನ ವ್ಯಕ್ತಿಯಾಗಿದ್ದಾರೆ. 


    ಅಧಿಕೃತ ಘೋಷಣೆ ಮತ್ತು ಪೀಠಾರೋಹಣ ವಿಧಿವಿಧಾನಗಳು ಎರಡು ವಾರಗಳ ಬಳಿಕ ನಡೆಯಲಿದೆ ಎಂದು ಮಠದ ಮೂಲಗಳು  ವಿವರ ನೀಡಿರುವರು.

         ಬ್ರಹ್ಮೈಕ್ಯರಾದ ಕೇಶವಾನಂದ ಭಾರತೀ ಶ್ರೀಗಳ ಅಂತ್ಯದ ವಿಧಿವಿಧಾನಗಳು ಮಠದ ಉತ್ತರ ಭಾಗದಲ್ಲಿರುವ ಬೃಂದಾವನದಲ್ಲಿ ಭಾನುವಾರ ಅಪರಾಹ್ನ ನಡೆಯಿತು. ಮಠದ ಈ ಹಿಂದಿನ ಯತಿವರೇಣ್ಯರ ಸಮಾಧಿಗಳ ಪಕ್ಕದಲ್ಲಿ ಶ್ರೀಗಳ ಸಮಾಧಿ ಮಾಡಲಾಯಿತು. ವೇದ ವಿದ್ವಜ್ಜನರು ನೇತೃತ್ವ ವಹಿಸಿದ್ದರು.



Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries