HEALTH TIPS

ಕೋವಿಡ್ ಜನಜಾಗೃತಿಗಾಗಿ ಕಾಸರಗೋಡಿನಲ್ಲಿ ಬಹುಭಾಷಾ ಸಂದೇಶಗಳೊಂದಿಗೆ ರಂಗಕ್ಕಿಳಿದಿರುವ ಐ.ಇ.ಸಿ.

 

    ಕಾಸರಗೋಡು: ಜನಜಾಗೃತಿಗಾಗಿ ಕಾಸರಗೋಡಿನಲ್ಲಿ ಬಹುಭಾಷಾ ಸಂದೇಶಗಳೊಂದಿಗೆ ಐ.ಸಿ.ಸಿ.(ಇನ್ಫಾರ್ಮೇಷನ್, ಎಜ್ಯುಕೇಷನ್, ಕಮ್ಯನಿಕೇಷನ್) ವಿಭಾಗ ರಂಗಕ್ಕಿಳಿದಿದೆ. 

         ಕನ್ನಡ, ಮಲೆಯಾಳಂ, ತಮಿಳು ಸಹಿತ ಭಾಷೆಗಳಲ್ಲಿ ಇಲ್ಲಿ ವೈವಿಧ್ಯಮಯ ಸಂದೇಶಗಳನ್ನು ರವಾನಿಸಲಾಗುತ್ತಿದೆ. ಸಾಮಾಜಿಕ ಜಾಲತಾಣಗಳ ಮೂಲಕ, ಭಿತ್ತಿಪತ್ರ, ಕಿರುಹೊತ್ತಗೆ, ನೆನಪಿನ ಚೀಟಿ ಹೀಗೆ ಹಲವು ರೂಪಗಳಲ್ಲಿ ಸಂದೇಶಗಳು ಜನತೆಗೆ ತಲಪುತ್ತಿವೆ. ಕೋವಿಡ್ ಸೋಂಕು ಎಂಬ ಮಹಾಮಾರಿಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರ ನೇತೃತ್ವದಲ್ಲಿ ಜಿಲ್ಲೆಯ ಪ್ರಧಾನ ಇಲಾಖೆಗಳ ಸಿಬ್ಬಂದಿ ಒಗ್ಗಟ್ಟಿನಿಂದ ಇಲ್ಲಿ ಕಾರ್ಯಪ್ರವೃತ್ತರಾಗುವ ಸೌಲಭ್ಯಗಳಿವೆ. ಇದರ ಅಂಗವಾಗಿ ಐ.ಇ.ಸಿ. ಜಿಲ್ಲಾ ಮಟ್ಟದ ಸಂಚಲನ ಸಮಿತಿ ಚಟುವಟಿಕೆ ನಡೆಸುತ್ತಿದೆ. 

     ಕೋವಿಡ್ ಸೋಂಕಿನ ಮೊದಲ ಹಂತದಲ್ಲೇ ಪ್ರತಿರೋಧಕ್ಕೆ ಮಾದರಿಯಾಗಿ ಜಗತ್ತಿನ ಗಮನ ಸೆಳೆದಿರುವ ಕಾಸರಗೋಡು ಜಿಲ್ಲೆ ಈ ನಿಟ್ಟಿನಲ್ಲಿ ವಿನೂತನ ಅಧ್ಯಾಯ ರಚಿಸಲು ನಡೆಸಿರುವ ದೌತ್ಯವೇ ಈ ಐ.ಇ.ಸಿ. ಸಂಚಲನ ಸಮಿತಿಯ ಚಟುವಟಿಕೆಗಳು. ಈ ಸಮಿತಿ "ನಮ್ಮ ನಾಡ ಹಬ್ಬಕ್ಕೆ ನಮ್ಮ ನಾಡಿನದೇ ಹೂವುಗಳ ಬಳಕೆಯಾಗಲಿ" ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದುದು ಇದಕ್ಕೆ ಉತ್ತಮ ನಿದರ್ಶನ. 


          ಕೋವಿಡ್ ಗಿಂತಲೂ ಒಂದು ಹೆಜ್ಜೆ ಮುಂದು:

    ಕೋವಿಡ್ ಪ್ರತಿರೋಧಕ್ಕೆ ನೂತನ ಯೋಜನೆ ರಚಿಸುವ, ಜನಜಾಗೃತಿ ನಡೆಸುವ, ಈ ನಿಟ್ಟಿನಲ್ಲಿ ವಿನೂತನ ಮಾರ್ಗಗಳನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಕಿರುಚಿತ್ರ, ಡಿಜಿಟಲ್ ಭಿತ್ತಿಪತ್ರ, ಹಾಡುಗಳು, ಟ್ರೋಲ್, ಕರಪತ್ರ ಇತ್ಯಾದಿಗಳನ್ನು ಸಿದ್ಧಪಡಿಸಿ ಹಂಚುವ ಕಾಯಕ ಈ ಸಮಿತಿಯದ್ದು. ಕಾಸರಗೋಡು ಜಿಲ್ಲೆಯ ವಿವಿಧ ಇಲಾಖೆಗಳ ಜನಜಾಗೃತಿ ಚಟುವಟಿಕೆಗಳನ್ನು ಸಂಯೋಜಿಸಿ ಹೆಚ್ಚುವರಿ ಜನತೆಗೆ ತಲಪುವಂತೆ ಮಾಡುವ 50ಕ್ಕೂ ಅಧಿಕ (ಡಿಜಿಟಲ್ ಭಿತ್ತಿಪತ್ರ, ಕರಪತ್ರ ಸಹಿತ) ವಿಧಾನಗಳು ಈಗಾಗಲೇ ಚಾಲ್ತಿಯಲ್ಲಿವೆ.                    

        ಜಿಲ್ಲಾ ವಾರ್ತಾಧಿಕಾರಿ ಮಧುಸೂದನನ್ ಎಂ. ಅವರು ಈ ಸಮಿತಿಯ ಸಂಚಾಲಕರಾಗಿದ್ದಾರೆ. ಜಿಲ್ಲಾಡಳಿತೆ, ಆರೋಗ್ಯ ಇಲಾಖೆ, ಸಾರ್ವಜನಿಕ ಸಂಪರ್ಕ ಮತ್ತು ಮಾಹಿತಿ ಇಲಾಖೆ, ಶುಚಿತ್ವಮಿಷನ್, ಮಾಸ್ಟರ್ ಯೋಜನೆ ಸಹಿತ ವಿಭಾಗಗಳು ಸಂಯೋಜಿತ ಸರಪಳಿಯಲ್ಲಿ ಐ.ಇ.ಸಿ. ಸಂಚಲನ ವಿಭಾಗವಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries