HEALTH TIPS

Loan Restructuring: 26 ಕ್ಷೇತ್ರಗಳ ಸಾಲ ಪುನರ್​​ ರಚನೆಗೆ ಮುಂದಾದ ಕೆ.ವಿ ಕಾಮತ್​ ನೇತೃತ್ವದ ತಜ್ಞರ ಸಮಿತಿ

      ನವದೆಹಲಿ: ಕೋವಿಡ್-19 ಬಿಕ್ಕಟ್ಟಿನಿಂದ ಭಾರತದ ಆರ್ಥಿಕತೆ ಕ್ಷೀಣಿಸುತ್ತಿದೆ. ಹೀಗಾಗಿ ಯಾವುದೇ ಬ್ಯಾಂಕುಗಳು ಆರ್ಥಿಕತೆ ಒತ್ತಡಕ್ಕೆ ಸಿಲುಕಬಾರದು ಎಂದು ರಿಸರ್ವ್​​ ಬ್ಯಾಂಕ್​​ ಆಫ್​ ಇಂಡಿಯಾ(ಆರ್​ಬಿಐ) ರೆಸಲ್ಯೂಷನ್​​ವೊಂದನ್ನು ಸಿದ್ದಪಡಿಸಿದೆ. ಈ ರೆಸಲ್ಯೂಷನ್​​ ಫ್ರೇಮ್​​​ ವರ್ಕ್​ ಮಾಡುವ ಜವಾಬ್ದಾರಿಯನ್ನು ದೇಶದ ಹಿರಿಯ ಬ್ಯಾಂಕಿಂಗ್ ಉದ್ಯಮಿ ಕೆ.ವಿ. ಕಾಮತ್ ನೇತೃತ್ವದ ತಜ್ಞರ ಸಮಿತಿಗೆ ಹೊರಿಸಲಾಗಿತ್ತು. ಇದರ ಭಾಗವಾಗಿ ಕೆ.ವಿ ಕಾಮತ್​ ನೇತೃತ್ವದ ತಜ್ಞರ ಸಮಿತಿಯೂ 26 ಕ್ಷೇತ್ರಗಳ ಸಾಲ ಪುನರ್ ​​ರಚನೆಗೆ(ಲೋನ್​​ ರೀಸ್ಟ್ರಕ್ಚರ್) ಮಾಡಲು ಆಯ್ಕೆ ಮಾಡಿಕೊಂಡಿದೆ. ಸಂಬಂಧಿಸಿದ ಕ್ಷೇತ್ರಗಳ ಉದ್ಯಮಿಗಳಿಗೆ ಸಾಲ ನೀಡುವಾಗ ಈ ಸಾಲ ಪುನರ್​​ ರಚನೆ ಮಾರ್ಗದರ್ಶಿಗಳನ್ನು ಪರಿಗಣನೆಗೆ ತೆಗೆದುಕೊಳ್ಳುವಂತೆ ಬ್ಯಾಂಕುಗಳಿಗೆ ಸಮಿತಿ ಶಿಫಾರಸು ಮಾಡಲಿದೆ ಎಂದು ಆರ್​​ಬಿಐ ಹೇಳಿದೆ.

      ಕೊರೋನಾದಿಂದ ಭಾರೀ ಹೊಡೆತ ತಿಂದಿರುವ ಬ್ಯಾಂಕುಗಳು ಸಾಲದ ಕಂತುಗಳ (ಇಎಂಐ) ಮರುಪಾವತಿಗೆ ನೀಡಿರುವ ವಿನಾಯಿತಿ ಅವಧಿಯನ್ನು (ಮಾರಟೋರಿಯಂ) ಬಳಸಿಕೊಂಡು ಪ್ರಾಮಾಣಿಕ ಗ್ರಾಹಕರನ್ನು ದಂಡಿಸುತ್ತಿವೆ ಎಂಬ ಆರೋಪ ಕೇಳಿ ಬಂದಿತ್ತು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಕೇಂದ್ರ ಹಣಕಾಸು ಸಚಿವೆ ಬ್ಯಾಂಕುಗಳಿಗೆ ಗ್ರಾಹಕರ ಬಳಿ ಸಾಲದ ಕಂತುಗಳು ಕಟ್ಟುವಂತೆ ಬಲತ್ಕಾರ ಮಾಡುವಂತಿಲ್ಲ ಎಂದು ಆದೇಶಿಸಿದ್ದರು.


      ಇದರ ಭಾಗವಾಗಿ 2020ರ ಮಾರ್ಚ್ ಒಂದರಿಂದ ಎಲ್ಲ ಸಾಲಗಳ ಇಎಂಐ ಮರುಪಾವತಿಯನ್ನು ಮೂರು ತಿಂಗಳವರೆಗೆ ಮುಂದೂಡಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್​ಬಿಐ) ಅವಕಾಶ ಕಲ್ಪಿಸಿತ್ತು. ನಂತರ ಆಗಸ್ಟ್ 31ರ ವರೆಗೆ ಅದನ್ನು ವಿಸ್ತರಿಸಲಾಗಿತ್ತು. ವಿನಾಯಿತಿ ಅವಧಿಯಲ್ಲಿ ಬಡ್ಡಿ ವಿಧಿಸುವುದು ಗ್ರಾಹಕರಿಗೆ ದೊಡ್ಡ ಹೊಡೆತ ಬಿದ್ದಿತ್ತು.

     ಇನ್ನೊಂದೆಡೆ ಕೊರೋನಾ ವೈರಸ್ ಬಿಕ್ಕಟ್ಟಿನಲ್ಲಿ ಭಾರತದ ಆರ್ಥಿಕತೆ ಐತಿಹಾಸಿಕ ಅಧಃಪತನವಾಗಬಹುದು ಎಂದು ಅನೇಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಈ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಶೇ. 4.5ರಷ್ಟು ನಷ್ಟ ಹೊಂದಬಹುದು ಎಂದು ನಿರೀಕ್ಷಿಸಿದೆ. ಬಹುತೇಕ ಅಂತಾರಾಷ್ಟ್ರೀಯ ರೇಟಿಂಗ್ ಸಂಸ್ಥೆಗಳು ಭಾರತದ ಆರ್ಥಿಕತೆ ಬಗ್ಗೆ ಮಾಡಿರುವ ಅಂದಾಜುಗಳು ಆಶಾದಾಯಕವಾಗಿಲ್ಲ. ಈ ಹತಾಶೆಯ ಸಂದರ್ಭದಲ್ಲಿ 72 ವರ್ಷದ ಕೆ.ವಿ. ಕಾಮತ್ ಅವರು ಭಾರತದ ಆರ್ಥಿಕತೆ ಚೇತರಿಸಿಕೊಳ್ಳಬಹುದು ಎಂಬ ಸುಳಿವನ್ನು ಕಂಡಿದ್ದರು. ಹೀಗಾಗಿ ಇದನ್ನು ಸರಿಪಡಿಸಲು ಕೆ.ವಿ ಕಾಮತ್​ ನೇತೃತ್ವದಲ್ಲಿ ತಜ್ಞರ ಸಮಿತಿ ರಚಿಸಲಾಗಿತ್ತು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries