ನವದೆಹಲಿ: ಭಾರತದ ಅತಿ ದೊಡ್ಡ ದತ್ತಾಂಶ ಸಂಗ್ರಹಣಾ ಸಂಸ್ಥೆ ರಾಷ್ಟ್ರೀಯ ಸೂಚನಾ ವಿಜ್ಞಾನ ಕೇಂದ್ರ (National Informatics Centre)ದ ಮೇಲೆ ಸೈಬರ್ ದಾಳಿಯ ಸುದ್ದಿ ಕೇಳಿಬಂದಿದೆ. ಈ ಹಲ್ಲೆಯ ಕುರಿತು ದೆಹಲಿಯ ಪೋಲೀಸರ ವಿಶೇಷ ಸೆಲ್ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದೆ. ಈ ಸೈಬರ್ ದಾಳಿ (CyberAttack)ಯ ಮೂಲಕ NIC ಹಲವು ಕಂಪ್ಯೂಟರ್ ಗಳನ್ನು ಗುರಿಯಾಗಿಸಲಾಗಿದೆ ಎನ್ನಲಾಗಿದೆ. ಅಷ್ಟೇ ಅಲ್ಲ ಹಲವು ಸಂವೇದನಶೀಲ ಮಾಹಿತಿಯ ಮೇಲೆ ಕನ್ನ ಕೂಡ ಹಾಕಲಾಗಿದೆ ಎನ್ನಲಾಗಿದೆ.
ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಮಾಹಿತಿ ಕಳುವು ಸಾಧ್ಯತೆ
ನ್ಯಾಷನಲ್ ಇನ್ಫರ್ಮ್ಯಾಟಿಕ್ಸ್ ಸೆಂಟರ್ ನಲ್ಲಿ ಪ್ರಧಾನಿ ಕಾರ್ಯಾಲಯ, NSA ಸೇರಿದಂತೆ ರಾಷ್ಟ್ರೀಯ ಹಿತಾಸಕ್ತಿಗೆ ಸಂಬಂಧಿಸಿದ ಮಾಹಿತ ಸಂಗ್ರಹಿಸಿ ಇಡಲಾಗುತ್ತದೆ. ಏತನ್ಮಧ್ಯೆ ಪ್ರಸ್ತುತ ನಡೆದಿರುವ ಸೈಬರ್ ದಾಳಿ ತುಂಬಾ ಅಪಾಯಕಾರಿಯಾಗಿದೆ ಎಂದೇ ವರ್ತಿಸಲಾಗುತ್ತಿದೆ. ಬಲ್ಲ ಮೂಲಗಳು ನೀಡಿರುವ ಮಾಹಿತಿ ಪ್ರಕಾರ ಈ ಸೈಬರ್ ದಾಳಿ ಬೆಂಗಳೂರು ಮೂಲದ ಒಂದು ಸಂಸ್ಥೆಯ ಮೂಲಕ ನಡೆಸಲಾಗಿದ್ದು, ಈ ಸಂಸ್ಥೆ ಅಮೆರಿಕಾದ ಜೊತೆಗೆ ಸಂಪರ್ಕ ಹೊಂದಿರುವುದು ತಿಳಿದುಬಂದಿದೆ. NIC ಡೇಟಾಬೇಸ್ ನಲ್ಲಿ ರಾಷ್ಟ್ರೀಯ ಭದ್ರತೆಗೆ ಸಂಬಂಧಸಿದ ಮಾಹಿತಿಗಳ ಜೊತೆಗೆ ಭಾರತೀಯ ನಾಗರಿಕರು ಹಾಗೂ ವಿವಿಐಪಿಗಳಿಗೆ ಸಂಬಂಧಿಸಿದ ಮಾಹಿತಿ ಕೂಡ ಇರುತ್ತದೆ.
ಇ-ಮೇಲ್ ಮೂಲಕ ಈ ದಾಳಿ ನಡೆಸಲಾಗಿದೆ
ದೆಹಲಿ ಪೋಲೀಸರ ವಿಶೇಷ ಸೆಲ್ ಪೊಲೀಸರು ನೀಡಿರುವ ಮಾಹಿತಿ ಪ್ರಕಾರ NIC ಸಿಸ್ಟಂಗಳ ಮೇಲೆ ಇ-ಮೇಲ್ ಮಾಧ್ಯಮದ ಮೂಲಕ ಮಾಲ್ ವೇರ್ ಕಳುಹಿಸಲಾಗಿದೆ. ಮೇಲ್ ನಲ್ಲಿ ಕಳುಹಿಸಲಾಗಿರುವ ಒಂದು ಲಿಂಕ್ ಮೇಲೆ ಕಿಲ್ಲಿಕ್ಕಿಸಿದ ಬಳಿಕ ಎಲ್ಲ ಮಾಹಿತಿಗಳು ಕಣ್ಮರೆಯಾಗಿವೆ ಎನ್ನಲಾಗಿದೆ. ಇದಾದ ಬಳಿಕ ದೆಹಲಿ ಪೊಲೀಸರಿಗೆ ಸೂಚನೆ ನೀಡಲಾಗಿದೆ. ಮಾಹಿತಿ ಪಡೆದ ದೆಹಲಿ ಪೋಲೀಸರ ಸ್ಪೆಷಲ್ ತಂಡ ಕೂಡಲೇ ಕಾರ್ಯತತ್ಪರವಾಗಿದ್ದು, ತನಿಖೆಯನ್ನು ಆರಂಭಿಸಿದೆ.





