ಕಾಸರಗೋಡು: ಮಂಗಲ್ಪಾಡಿ ತಾಲೂಕು ಆಸ್ಪತ್ರೆ, ಮಂಜೇಶ್ವರ ಸಿ.ಎಚ್.ಸಿ. ಗಳಲ್ಲಿ ಇನ್ನು ಮುಂದೆ ಹೈಮಾಸ್ಟ್ ಲೈಟ್ ಗಳು ಬೆಳಕು ನೀಡಲಿವೆ.
ಮಂಜೇಶ್ವರ ಬ್ಲಾಕ್ ಪಂಚಾಯತ್ 2019-20 ವಾರ್ಷಿಕ ಯೋಜನೆಯಲ್ಲಿ ಅಳವಡಿಸಿ 14 ಲಕ್ಷ ರೂ. ಈ ಯೋಜನೆಗಾಗಿ ವೆಚ್ಚಮಾಡಲಾಗಿದೆ. ಮಂಗಲ್ಪಾಡಿ ತಾಲೂಕು ಆಸ್ಪತ್ರೆ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಶಾಸಕ ಎಂ.ಸಿ.ಕಮರುದ್ದೀನ್ ಸ್ವಿಚ್ ಆನ್ ನಡೆಸಿ ಯೋಜನೆಯನ್ನು ಉದ್ಘಾಟಿಸಿದರು. ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷ ಎ.ಕೆ.ಎಂ.ಅಶ್ರಫ್ ಅಧ್ಯಕ್ಷತೆ ವಹಿಸಿದ್ದರು. ಮಂಗಲ್ಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಷಾಹುಲ್ ಹಮೀದ್ ಬಂದ್ಯೋಡು, ಹಾಸ್ಪಿಟಲ್ ಆಡಳಿತ ಸಮಿತಿ ಸದಸ್ಯರಾದ ಸಿ.ಸತ್ಯನ್ ಉಪ್ಪಳ, ಕೋಸ್ಮೋಸ್ ಹಮೀದ್, ಕೆ.ಪಿ.ಮುನೀರ್ ಮೊದಲಾದವರು ಉಪಸ್ಥಿತರಿದ್ದರು. ಮಮಜೇಶ್ವರ ಸಿ.ಎಚ್.ಸಿಯಲ್ಲಿ ನಡೆದ ಸಮಾರಮಭದಲ್ಲಿ ಮಂಜೇಶ್ವರ ಬ್ಲೋಕ್ ಪಂಚಾಯತ್ ಸ್ಥಾಯೀ ಸಮಿತಿ ಅಧ್ಯಕ್ಷ ಮುಸ್ತಫಾ ಉದ್ಯಾವರ, ಮಂಜೇಶ್ವರ ಗ್ರಾಮ ಪಂಚಾಯತ್ ಸದಸ್ಯ ಅಬ್ದುಲ್ಲ ಗುಡ್ಡಗೇರಿ, ಆಸ್ಪತ್ರೆ ಆಡಳಿತೆ ಸಮಿತಿ ಸದಸ್ಯರಾದ ಅಬ್ದುಲ್ಲ ಖಾಜಾ, ಮೊಯ್ದೀನ್, ಕೆ.ಎಂ.ಅಬ್ದುಲ್ ಖಾದರ್, ಡಾ.ನವೀಷ್ ಮೊದಲಾದವರು ಉಪಸ್ಥಿತರಿದ್ದರು.