ಕಾಸರಗೋಡು: ಕಾಸರಗೋಡು ಜಿಲ್ಲೆಯ ಕೋವಿಡ್ ಪ್ರತಿರೋಧ ಜನಜಾಗೃತಿ ಚುರುಕುಗೊಳಿಸುವ ನಿಟ್ಟಿನಲ್ಲಿ ಐ.ಇ.ಸಿ. ಸಂಚಲನ ಸಮಿತಿ ಮತ್ತು ಜಿಲ್ಲಾಡಳಿತ ನೇತೃತ್ವದಲ್ಲಿ ಮಕ್ಕಳಿಗಾಗಿ ಮೊಬೈಲ್ ಸಲ್ಫಿ ವೀಡಿಯೋ ಸ್ಪರ್ಧೆ ನಡೆಯಲಿದೆ.
ಕನ್ನಡ, ತುಳು, ಮಲೆಯಾಳಂ, ಇಂಗ್ಲೀಷ್ ಭಾಷೆಗಳ ವೀಡಿಯೋ ನಿರ್ಮಿಸಬೇಕು. ಜಿಲ್ಲೆಯ 10 ವರ್ಷಕ್ಕಿಂತ ಕೆಲಗಿನ ವಯೋಮಾನದ ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಬಹುದು, ಒಂದು ನಿಮಿಷಕ್ಕಿಂತ ಕಡಿಮೆ ಅವಧಿಯ ವೀಡಿಯೋ ಇರಬೇಕು. ಕೋವಿಡ್ ಪ್ರತಿರೋಧಕ್ಕೆ ನನ್ನ ವತಿಯಿಂದ ಒಂದು ಸಂದೇಶ ಎಂಬ ಆಶಯದೊಂದಿಗೆ ಮೊಬೈಲ್ ಬಳಸಿ ವೀಡಿಯೋ ಸಿದ್ಧಪಡಿಸಬೇಕು. 10 ವರ್ಷಕ್ಕಿಂತ ಕಡಿಮೆ ವಯೋಮಾನದ ಮಕ್ಕಳೂ ಮನೆಯಿಂದ ಹೊರಗಿಳೀಯಕೂಡದು ಎಂಬ ಸಂದೇಶದ ವೀಡಿಯೋಗಳನ್ನು ಸಿದ್ಧಪಡಿಸಬೇಕು. ನ.10ರ ಮುಂಚಿತವಾಗಿ prdcontest@gmail.com ಎಂಬ ವಿಳಾಸಕ್ಕೆ ವೀಡಿಯೋಗಳನ್ನು ಕಳುಹಿಸಬೇಕು.
ಪ್ರಥಮ ಬಹುಮಾನ 5 ಸಾವಿರ ರೂ., ದ್ವಿತೀಯಬಹುಮಾನ 3 ಸಾವಿರ ರೂ., ತೃತೀಯ ಬಹುಮಾನ 2 ಸಾವಿರ ರೂ. ಇರುವುದು. ಹೆಚ್ಚುವರಿ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 9947334637.





