ಕಾಸರಗೋಡು: ವಿಜಯದಶಮಿಯ ಪುಣ್ಯಕಾಲದಲ್ಲಿ ಮಕ್ಕಳಿಗೆ ವಿದ್ಯಾರಂಭ ಕಾರ್ಯಕ್ರಮ ವಿವಿಧ ಕೇಂದ್ರಗಳಲ್ಲಿ ಜರುಗಿತು. ಕೋವಿಡ್ ಹಿನ್ನೆಲೆಯಲ್ಲಿ ನಿಬಂಧನೆಗಳೊಂದಿಗೆ ಮಕ್ಕಳಿಗೆ ಮೊದಲ ಅಕ್ಷರವನ್ನು ಅಭ್ಯಾಸಮಾಡಲಾಯಿತು. ಬಹುತೇಕ ಮನೆಗಳಲ್ಲೇ ಮಕ್ಕಳಿಗೆ ಅಕ್ಷರಾಭ್ಯಾಸವನ್ನು ನಡೆಸಲಾಗಿತ್ತು. ಧಾರ್ಮಿಕ ಹಾಗೂ ವಿವಿಧ ಸಾಂಸ್ಕøತಿಕ ಕೇಂದ್ರಗಳಲ್ಲಿ ಕೋವಿಡ್ ಕಟ್ಟುನಿಟ್ಟಿನೊಂದಿಗೆ ವಿದ್ಯಾರಂಭ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದರೂ, ನಿಗದಿತ ಸಂಖ್ಯೆಯ ಜನರಿಗಷ್ಟೆ ಪ್ರವೇಶಾನುಮತಿ ನೀಡಲಾಗಿತ್ತು. ಆಯುಧಪೂಜೆ, ವಾಹನ ಪೂಜೆಗಳೂ ನಿಬಂಧನೆಗಳೊಂದಿಗೆ ನೆರವೇರಿತ್ತು. ಕೆಲವು ಪ್ರಮುಖ ಕೇಂದ್ರಗಳಲ್ಲಿ ಮಾತ್ರ ವಿದ್ಯಾರಂಭಕ್ಕೆ ಸರ್ಕಾರ ಅನುವು ಮಾಡಿಕೊಟ್ಟಿತ್ತು.
ಚಿತ್ರ ಮಾಹಿತಿ: ಕಾಸರಗೋಡು ನೆಲ್ಲಿಕುಂಜೆ ಶ್ರೀಜಗದಂಬಾ ದೇವಸ್ಥಾನದಲ್ಲಿ ಕೋವಿಡ್ ನಿಬಂಧನೆಗಳೊಂದಿಗೆ ಪುರೋಹಿತರ ಸಮ್ಮುಖದಲ್ಲಿ ಮಕ್ಕಳಿಗೆ ವಿದ್ಯಾರಂಭ ನಡೆಸಲಾಯಿತು.




