HEALTH TIPS

ಕೋವಿಡ್-19: ಡಿಸೆಂಬರ್ ವೇಳೆಗೆ ಭಾರತಕ್ಕೆ ಸಿಗಲಿದೆ 100 ಮಿಲಿಯನ್ ಆಸ್ಟ್ರಾಝೆನಿಕ ಲಸಿಕೆ

           ನವದೆಹಲಿ: ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್ ಐ ಐ) ಕೋವಿಡ್-19 ಲಸಿಕೆ ಆಸ್ಟ್ರಾಝೆನಿಕಾ ಲಸಿಕೆ ಉತ್ಪಾದನೆಯನ್ನು ಶೀಘ್ರಗೊಳಿಸುತ್ತಿದ್ದು, ಡಿಸೆಂಬರ್ ವೇಳೆಗೆ 100 ಮಿಲಿಯನ್ ಆಸ್ಟ್ರಾಝೆನಿಕಾ ಲಸಿಕೆ ಭಾರತಕ್ಕೆ ಲಭ್ಯವಾಗಲಿದೆ. 

       ಬ್ಲೂಮ್ ಬರ್ಗ್ ಗೆ ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್ ಐ ಐ) ನ ಸಿಇಒ ಅದಾರ್ ಪೂನಾವಾಲ ಅವರು ಸಂದರ್ಶನ ನೀಡಿದ್ದು, ಆಸ್ಟ್ರಾಝೆನಿಕಾ ಲಸಿಕೆ ಅಂತಿಮ ಹಂತದ ಪರೀಕ್ಷೆಯಲ್ಲಿದ್ದು ಕೊರೋನಾ ವೈರಾಣುವಿನಿಂದ ಅತ್ಯುತ್ತಮ ರಕ್ಷಣೆ ನೀಡುತ್ತಿದೆ. ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಕನಿಷ್ಟ ಒಂದು ಬಿಲಿಯನ್ ಲಸಿಕೆಗಳನ್ನು ಉತ್ಪಾದಿಸಲು ಕೈಜೋಡಿಸಿದ್ದು, ದೆಹಲಿಯಿಂದ ತುರ್ತು ಅನುಮತಿಯನ್ನು ಪಡೆಯುವ ಸಾಧ್ಯತೆ ಇದೆ ಎಂದು ಅದಾರ್ ಪೂನಾವಾಲ ತಿಳಿಸಿದ್ದಾರೆ. ಪ್ರಾರಂಭಿಕವಾಗಿ ಭಾರತಕ್ಕೆ ಈ ಲಸಿಕೆಗಳು ಸಿಗುತ್ತವೆ. ಮುಂದಿನ ವರ್ಷದ ಆರಂಭದಲ್ಲಿ, ಬಡ ರಾಷ್ಟ್ರಗಳಿಗಾಗಿ ವಿಶ್ವಸಂಸ್ಥೆ ಬೆಂಬಲಿತ ಸಂಸ್ಥೆ ಕೋವ್ಯಾಕ್ಸ್ ಹಾಗೂ ಭಾರತದ ನಡುವೆ 50-50 ಅನುಪಾತದಲ್ಲಿ ಲಸಿಕೆಗಳು ಹಂಚಿಕೆಯಾಗಲಿವೆ ಎಂದು ಪೂನಾವಾಲಾ ತಿಳಿಸಿದ್ದಾರೆ. 

         ಎಸ್ ಐ ಐ 5 ಡೆವಲಪರ್ ಗಳ ಜೊತೆ ಒಪ್ಪಂದ ಮಾಡಿಕೊಂಡಿದ್ದು, 40 ಮಿಲಿಯನ್ ಗೂ ಅಧಿಕ ಆಸ್ಟ್ರಾಝೆನಿಕಾದ ಲಸಿಕೆಗಳನ್ನು ತಯಾರಿಸಿದೆ ಎಂಡು ಪೂನಾವಾಲ ತಿಳಿಸಿದ್ದಾರೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries