ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆ ಸಂಬಂಧ ಕಾಸರಗೋಡು ಜಿಲ್ಲೆಯಲ್ಲಿ ಸೂಕ್ಷ್ಮ ತಪಾಸಣೆ ಶುಕ್ರವಾರ ನಡೆದಿದ್ದು, 5318 ನಾಮಪತ್ರಿಕೆಗಳ ಸ್ವೀಕಾರ ನಡೆದಿದೆ. 71 ಪತ್ರಿಕೆಗಳು ಅನರ್ಹವಾಗಿವೆ.
ಜಿಲ್ಲಾ ಪಂಚಾಯತ್ ಡಿವಿಝನ್ ಗಳಿಗೆ ಸಲ್ಲಿಸಲಾದ 94 ಅಭ್ಯರ್ಥಿಗಳ ನಾಮಪತ್ರಿಕೆಗಳ ಸ್ವೀಕಾರ
ಕಾಸರಗೋಡು ಜಿಲ್ಲಾ ಪಂಚಾಯತ್ ಡಿವಿಝನ್ ಗಳಿಗೆ ಸಲ್ಲಿಸಲಾದ 100 ಅಭ್ಯರ್ಥಿಗಳಲ್ಲಿ 94 ಅಭ್ಯರ್ಥಿಗಳ ನಾಮಪತ್ರಿಕೆಗಳನ್ನು ಚುನಾವಣೆ ಅಧಿಕಾರಿಯಾಗಿರುವ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಸ್ವೀಕಾರ ಮಾಡಿದ್ದಾರೆ.
ಚುನಾವಣೆ ಸಂಹಿತೆಗಳ ಅನುಸಾರವಲ್ಲದ 6 ಪತ್ರಿಕೆಗಳನ್ನು ಅನರ್ಹಗೊಳಿಸಲಾಗಿದೆ. ಮಂಜೇಶ್ವರ ಡಿವಿಝನ್ ನಲ್ಲಿ ದಾಮೋದರ ಎ.(ಸ್ವತಂತ್ರ), ಅಹಮ್ಮದ್ ಜಲಾಲುದ್ದೀನ್(ಎ.ಎ.ಪಿ.), ಉದುಮಾ ಡಿವಿಝನ್ ನಲ್ಲಿ ಕೆ.ಸುಕುಮಾರಿ(ಕಾಂಗ್ರೆಸ್), ಚೆರುವತ್ತೂರು ಡಿವಿಝನ್ ನಲ್ಲಿ ಕೆ. ಭರತನ್(ಸ್ವತಂತ್ರ), ಚಿತ್ತಾರಿಕಲ್ಲು ಡಿವಿಝನ್ ನಲ್ಲಿ ಜಿಂಟೋ(ಸ್ವತಂತ್ರ), ಕುಂಬಳೆ ಡಿವಿಝನ್ ನಲ್ಲಿ ಖಮರುಲ್ ಹಸೀನಾ(ಎಸ್.ಡಿ.ಪಿ.ಐ) ಎಂಬ ಅಭ್ಯರ್ಥಿಗಳ ನಾಮಪತ್ರಿಕೆಗಳನ್ನು ಸೂಕ್ಷ್ಮತಪಾಸಣೆಯ ವೇಳೆ ಅನರ್ಹಗೊಳಿಸಲಾಗಿದೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಸೂಕ್ಷ್ಮತಪಾಸಣೆಯಲ್ಲಿ ಅಭ್ಯರ್ಥಿಗಳು, ನಾಮಬೆಂಬಲಿಗರು ಮೊದಲಾದವರು ಹಾಜರಿದ್ದರು. ಒಟ್ಟು ಲಭಿಸಿದ್ದ 137 ನಾಮಪತ್ರಿಕೆಗಳನ್ನು 50 ನಿಮಿಷಗಳ ಅವಧಿಯಲ್ಲಿ ಯಾವುದೇ ಆಕ್ಷೇಪಗಳಿಗೆ ಕಾರಣವಿಲ್ಲದೆ ತೀರ್ಮಾನ ಕೈಗೊಂಡು ಜಿಲ್ಲಾಡಳಿತೆ ವ್ಯವಸ್ಥೆ ಮತ್ತೊಮ್ಮೆ ಮಾದರಿಯಾಗಿದೆ. ಜಿಲ್ಲಾಧಿಕಾರಿ ಅವರ ನೇತೃತ್ವದಲ್ಲಿ ಚುನಾವಣೆ ಪ್ರಕ್ರಿಯೆಯಲ್ಲಿ ಸೂಕ್ತರೀತಿಯ ತರಬೇತಿ, ದಕ್ಷತೆ, ಸಂದರ್ಭೋಚಿತ ಕ್ರಮಗಳಿಂದ ಈ ಚಟುವಟಿಕೆ ನಡೆದಿದೆ. ಗುರುವಾರ ಮಧ್ಯಾಹ್ನ 3 ಗಂಟೆಗೆ ವೇಳೆಗೆ ನಾಮಪತ್ರಿಕೆ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಂಡಿತ್ತು. ಇದು ಕೂಡ ಜಿಲ್ಲಾಡಳಿತೆಯ ಕಾರ್ಯದಕ್ಷತೆಗೆ ನಿರ್ಧಶನವಾಗಿದೆ.
(ನಂಬ್ರ- ಲಭಿಸಿದ ನಾಮಪತ್ರಿಕೆಗಳು-ಸ್ವೀಕಾರ- ಅನರ್ಹ - ಎಂಬ ಕ್ರಮದಲ್ಲಿ)
ನಗರಸಭೆ ಮಟ್ಟ
..........................
1. ಕಾಸರಗೋಡು-196-196-0.
2. ಕಾಞಂಗಾಡ್-294-288-6.
3. ನೀಲೇಶ್ವರ- 198-196-1 (ತೀರ್ಪಿಗೆ ಬಾಕಿಯಿದೆ)
ಒಟ್ಟು-688-680-7.
ಬ್ಲಾಕ್ ಪಂಚಾಯತ್ ಮಟ್ಟ
...........................................
1. ನೀಲೇಶ್ವರ-74-74-0.
2. ಕಾಞಂಗಾಡ್-67-66-1.
P-6
3. ಕಾಸರಗೋಡು-98-95-3.
4. ಪರಪ್ಪ-92-91-1.
5. ಕಾರಡ್ಕ-78-76-2.
6. ಮಂಜೇಶ್ವರ- 74-74-0.
ಒಟ್ಟು 483-476-7.
ಗ್ರಾಮ ಪಂಚಾಯತ್ ಮಟ್ಟ
........................................
1.ಚೆರುವತ್ತೂರು-89-89-0.
2.ಕಯ್ಯೂರು-ಚೀಮೇನಿ-58-58-0.
3.ಪಡನ್ನ-93-92-1.
4.ಪಿಲಿಕೋಡ್-64-64-0.
5.ತ್ರಿಕರಿಪುರ-135-135-0.
6.ವಲಿಯಪರಂಬ-71-71-0.
7.ಎಣ್ಮಕಜೆ-99-99-0.
8.ಮಂಗಲ್ಪಾಡಿ-129-127-2.
9.ಮಂಜೇಶ್ವರ-100-100-0.
10. ಮೀಂಜ-93-92-1.
11. ಪೈವಳಿಕೆ-104-104-0.
12. ಪುತ್ತಿಗೆ-90-89-1.
13.ವರ್ಕಾಡಿ-111-110-1.
14. ಅಜಾನೂರು-130-129-1.
15. ಮಡಿಕೈ-47-46-1.
16-ಪಳ್ಳಿಕ್ಕರೆ-126-124-2.
17.ಪುಲ್ಲೂರು-ಪೆರಿಯ-87-86-1.
18.ಉದುಮಾ-128-127-1.
19. ಬೇಡಡ್ಕ-101-101-0.
20.ಬೆಳ್ಳೂರು-79-65-14.
21.ದೇಲಂಪಾಡಿ-134-134-0.
22. ಕಾರಡ್ಕ-99-99-0.
23.ಕುಂಬಡಾಜೆ-90-89-1.
24.ಕುತ್ತಿಕೋಲು-96-93-2.
25.ಮುಳಿಯಾರು-95-93-2.
26.ಬಳಾಲ್-98-98-0.
27.ಪನತ್ತಡಿ-122-122-0.
23.ಕಳ್ಳಾರ್-104-104-0.
29.ಕೋಡೋಂ-ಬೇಳೂರು-106-105-1.
30.ವೆಸ್ಟ್ ಏಳೇರಿ-132-132-0.
31.ಈಸ್ಟ್ ಏಳೇರಿ-84-77-7.
32.ಕಿನಾನೂರು-ಕರಿಂದಳಂ-103-102-1.
33.ಬದಿಯಡ್ಕ-114-113-1.
34.ಚೆಮ್ನಾಡ್- 165-165-0.
35.ಚೆಂಗಳ-149-148-1.
36.ಕುಂಬಳೆ-167-163-4.
37.ಮಧೂರು-168-167-1.
38.ಮೊಗ್ರಾಲ್ ಪುತ್ತೂರು-122-122-0.
ಒಟ್ಟು-4082-4034-48.


