ಮಂಜೇಶ್ವರ: ಮಂಜೇಶ್ವರದಲ್ಲಿ ಆಧಾರ್ ಕಾರ್ಡ್ ಅಭಿಯಾನ ಆರಂಭಗೊಂಡಿದೆ. ಕಾಸರಗೋಡು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಸಮಾಜನೀತಿ ಇಲಾಖೆ, ಜಿಲ್ಲಾ ಅಕ್ಷಯ ಯೋಜನೆ ಕಚೇರಿ ಜಂಟಿ ಸಹಕಾರದೊಂದಿಗೆ ಸಾಯಿನಿಕೇತನ ಸೇವಾಶ್ರಮ ವತಿಯಿಂದ ಕಾರ್ಯಕ್ರಮ ಜರುಗಿತು.
ಉಪ ನ್ಯಾಯಮೂರ್ತಿ ಸುಹೈಬ್ ಎಂ. ಉದ್ಘಾಟಿಸಿದರು. ಗೋವಿಂದ ಪೈ ಸ್ಮಾರಕ ಸರ್ಕಾರಿ ಕಾಲೇಜು ಪ್ರಭಾರ ಪ್ರಾಂಶುಪಾಲ ಮಹಮ್ಮದಾಲಿ ಕೆ. ಮುಖ್ಯ ಅತಿಥಿಯಾಗಿದ್ದರು. ಡಿ.ಎಲ್.ಎಸ್.ಎ. ವಿಭಾಗ ಅಧಿಕಾರಿ ದಿನೇಶ ಕೆ.ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪೆÇ್ರಬೇಷನ್ ಅಧಿಕಾರಿ ಬಿಜು ಪಿ., ಬ್ಲಾಕ್ ಸಂಚಾಲಕ ಅಶೋಕ ಕೆ. ಉಪಸ್ಥಿತರಿದ್ದರು.

