HEALTH TIPS

69 ಮಂದಿ ಪರಿಶಿಷ್ಟ ಪಂಗಡದವರಿಗೆ 18.22 ಎಕ್ರೆ ಭೂಮಿ ವಿತರಣೆ

       ಕಾಸರಗೋಡು: ಸ್ವಂತವಾಗಿ ತುಣುಕು ಜಾಗವೂ ಇಲ್ಲದ 69 ಮಂದಿ ಪರಿಶಿಷ್ಟ ಪಂಗಡದವರಿಗೆ 18.22 ಎಕ್ರೆ ಭೂಮಿ ವಿತರಣೆ ನಡೆಸಲಾಗುವುದು. ಈ ಸಂಬಂಧ  ಅರ್ಹ ಫಲಾನುಭವಿಗಳ ಆಯ್ಕೆ ಚೀಟಿ ಎತ್ತುವ ಮೂಲಕ ನಡೆಸಲಾಗಿದೆ.   

      ಜಿಲ್ಲಾಧಿಕಾರಿ ಕಚೇರಿಯಲ್ಲಿ ಚೀಟಿ ಎತ್ತುವಿಕೆ ಸಮಾರಂಭ ಜರುಗಿತು. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು. ಜನಪ್ರತಿನಿಧಿಗಳು ವೀಡಿಯೋ ಕಾನ್ಪರೆನ್ಸ್ ಮೂಲಕ ಈ ಕಾರ್ಯಕ್ರಮ ವೀಕ್ಷಿಸಲು ಸೌಲಭ್ಯ ಒದಗಿಸಲಾಗಿತ್ತು.  

                          ಪರಿಶಿಷ್ಟ ಪಂಗಡದವರ ಬಯಸಿದ ಜಾಗ ಆದಿವಾಸಿಗಳಿಗೆ ಸ್ವಂತ, 

       'ಲ್ಯಾಂಡ್ ಬ್ಯಾಂಕ್' ಇತ್ಯಾದಿ ಯೋಜನೆಗಳ ಮೂಲಕ ಜಾಗಕ್ಕಾಗಿ ಅರ್ಜಿ ಸಲ್ಲಿಸಿದ 1686 ಮಂದಿಯಲ್ಲಿ 206 ಮಂದಿಯನ್ನು ಆಯ್ಕೆಗೊಳಿಸಿ ಪಟ್ಟಿ ಸಿದ್ಧಪಡಿಸಲಾಗಿತ್ತು. ಇವರಲ್ಲಿ ಚೀಟಿ ಎತ್ತುವ ಮೂಲಕ 69 ಮಂದಿಯನ್ನು ಆರಿಸಲಾಗಿದೆ. ಇವರಲ್ಲಿ 67 ಮಂದಿಗೆ ತಲಾ 25 ಸೆಂಟ್ಸ್ ಜಾಗ, ಒಬ್ಬರಿಗೆ 20.5 ಸೆಂಟ್ಸ್, ಮತ್ತೊಬ್ಬರಿಗೆ 20 ಸೆಂಟ್ಸ್ ಜಾಗ ಲಭಿಸಲಿದೆ. 

        ಕಾಸರಗೋಡು ಮತ್ತು ವೆಳ್ಳರಿಕುಂಡ್ ತಾಲೂಕಿನ ಕುತ್ತಿಕೋಲು, ಮುನ್ನಾಡ್, ಕಳ್ಳಾರ್, ಕರಿವೇಡಗಂ, ಬೇಳೂರು, ಪನತ್ತಡಿ, ಕೋಡೋತ್, ಪಾಲಾವಯಲ್ ಗ್ರಾಮಗಳಲ್ಲಿ ಇವರಿಗೆ ಜಾಗ ಒದಗಿಸಿ ಕೊಡಲು 2.16 ಕೋಟಿ ರೂ. ಪರಿಶಿಷ್ಟ ಪಂಗಡ ಅಭಿವೃದ್ಧಿ ಇಲಾಖೆ ವೆಚ್ಚಮಾಡಿದೆ. ಚೀಟಿ ಎತ್ತುವ ಮೂಲಕ ಆಯ್ಕೆ ಮಾಡಲಾದ 69 ಮಂದಿಯಲ್ಲಿ ಮರಾಟಿ, ಮಲವೇಟ್ಟುವ, ಮಾವಿಲ ಜನಾಂಗದವರು. 

      ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್, ಜಿಲ್ಲಾ ಪರಿಶಿಷ್ಟ ಪಂಗಡ ಅಭಿವೃದ್ಧಿ ಅಧಿಕಾರಿ ಷಮೀನ ಉಪಸ್ಥಿತರಿದ್ದರು. ಶಾಸಕ ಕೆ.ಕುಂಞÂರಾಮನ್, ಮಾಜಿ ಶಾಸಕ ನಾರಾಯಣನ್, ಪಂಚಾಯತ್ ಮಟ್ಟದ ಜನಪ್ರತಿನಿಧಿಗಳು ವೀಡಿಯೋ ಕಾನರೆನ್ಸ್ ಮೂಲಕ ಚೀಟಿ ಎತ್ತುವಿಕೆ ಪ್ರಕ್ರಿಯೆಯನ್ನು ವೀಕ್ಷಿಸಿದರು. 


ಸಮರಸ ಸುದ್ದಿಯ ನವೀನ ಮಾದರಿಯ ಯೂಟ್ಯೂಬ್ ಚಾನೆಲ್ ಗೆ ಓದುಗರ ಪ್ರತಿಕ್ರಿಯೆ ಮಹತ್ವಪೂರ್ಣದ್ದಾಗಿದ್ದು ಚಾನೆಲ್ ಚಂದಾದಾರರಾಗಿ (SUBSCRIBE) ಬೆಲ್ ಬಟನ್ ಅನುಮೋದಿಸುವ ಮೂಲಕ ನಮ್ಮನ್ನು ಪ್ರೋತ್ಸಾಹಿಸಬೇಕೆಂದು ವಿನಂತಿ.
ಸಮರಸ ಸುದ್ದಿ ಬಳಗ

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries