ಮುಳ್ಳೇರಿಯ: ಕಳೆದ ಶೈಕ್ಷಣಿಕ ವರ್ಷದಲ್ಲಿ ನಿವೃತ್ತರಾದ ಕನ್ನಡ ಅಧ್ಯಾಪಕರನ್ನು ಸನ್ಮಾನಿಸುವ 3ನೆ ಹಂತದ ಕಾರ್ಯಕ್ರಮ ಎ.ಯು.ಪಿ.ಶಾಲೆ ಮುಳ್ಳೇರಿಯಾದಲ್ಲಿ ನಡೆಯಿತು. ಶ್ರೀ ಮಹಾಲಿಂಗೇಶ್ವರ ಭಟ್ (ಮುಖ್ಯೋಪಾಧ್ಯಾಯರು, ಎ.ಯು.ಪಿ.ಶಾಲೆ ಕುಂಟಿಕಾನ), ಶ್ರೀ ಕೃಷ್ಣೋಜಿ ರಾವ್ (ಜಿ ವಿ ಎಚ್ ಎಸ್ ಎಸ್ ಕಾರಡ್ಕ) ಹಾಗೂ ಶ್ರೀ ಗುರುವಾಯೂರಪ್ಪ ಭಟ್ (ಎ.ಯು.ಪಿ.ಶಾಲೆ ಮುಳ್ಳೇರಿಯ) ಇವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮವನ್ನು ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಯತೀಶ್ ಕುಮಾರ್ ರೈ ಉದ್ಘಾಟಿಸಿದರು. ಕೇಂದ್ರಸಮಿತಿಯ ಅಧ್ಯಕ್ಷ ರವೀಂದ್ರನಾಥ್ ಅಧ್ಯಕ್ಷತೆ ವಹಿಸಿದ್ದರು. ಎ.ಯು.ಪಿ.ಶಾಲೆ ಮುಳ್ಳೇರಿಯಾದ ಮುಖ್ಯೋಪಾಧ್ಯಾಯ ಅಶೋಕ ಅರಳಿತ್ತಾಯ,ಸಂಘಟನೆಯ ಕುಂಬಳೆ ಉಪಜಿಲ್ಲಾ ಅಧ್ಯಕ್ಷ ಶಿವ ಕುಮಾರ್ ಕಾರ್ಯಕ್ರಮಕ್ಕೆ ಶುಭಾಶಂಸನೆಗೈದರು. ಸಂಘಟನೆಯ ಕಾರ್ಯದರ್ಶಿ ಶ್ರೀಶ ಕುಮಾರ್ ನಿರ್ವಹಿಸಿದರು.ಕೋಶಾಧಿಕಾರಿ ಶರತ್ ಕುಮಾರ್ ಸನ್ಮಾನಿತರನ್ನು ಸಭೆಗೆ ಪರಿಚಯಿಸಿದರು. ಎ.ಯು.ಪಿ.ಶಾಲೆ ಮುಳ್ಳೇರಿಯ ಇಲ್ಲಿನ ಅಧ್ಯಾಪಕ ಗೋಪಾಲಕೃಷ್ಣ ಭಟ್ ವಂದಿಸಿದರು. ಪಣಿಯೆ ಶಾಲಾ ಮುಖ್ಯೋಪಾಧ್ಯಾಯಿನಿ ಜ್ಯೋತಿ, ಮುಳ್ಳೇರಿಯ ಎ.ಯು.ಪಿ ಶಾಲೆಯ ಅಧ್ಯಾಪಿಕೆ ಚೇತನಾ ಉಪಸ್ಥಿತರಿದ್ದರು. ಕಾರ್ಯಕ್ರಮವು ಕೋವಿಡ್ ನಿಯಮಾವಳಿಗಳಿಗೆ ಅನುಸಾರವಾಗಿ, ಸರಳವಾಗಿ ಆಯೋಜಿಸಲ್ಪಟ್ಟಿತ್ತು.






