ಮಂಜೇಶ್ವರ: ತುಳುನಾಡ ಬಾಲೆ ಬಂಗಾರ್ ಸಮಿತಿ ಮಂಜೇಶ್ವರ ಇದರ ಆಶ್ರಯದಲ್ಲಿ ದೀಪಾವಳಿ ಹಾಗೂ ಮಕ್ಕಳ ದಿನಾಚರಣೆ ಪ್ರಯುಕ್ತ ಏರ್ಪಡಿಸಿದ್ದ ಮುದ್ದು ಮಕ್ಕಳ ಫೆÇೀಟೋ ಸ್ಪರ್ಧೆ ಸೀಸನ್ - 5, ತುಳುನಾಡ ಬಾಲೆ ಬಂಗಾರ್ - 2020 ಇದರ ಫಲಿತಾಂಶ ಘೋಷಣಾ ಕಾರ್ಯಕ್ರಮ ಭಾನುವಾರ ಸಂಜೆ ಹೊಸಂಗಡಿಯ ಗೇಟ್ ವೇ ಸಭಾಂಗಣದಲ್ಲಿ ನಡೆಯಿತು.
ಈ ಬಾರಿಯ ತುಳುನಾಡ ಬಾಲೆ ಬಂಗಾರ್ ನಲ್ಲಿ ಪ್ರಥಮ ಬಹುಮಾನವನ್ನು ನಿಹಿರ ಸುವರ್ಣ ಪಕ್ಷಿಕೆರೆ, ದ್ವಿತೀಯ ಬಹುಮಾನವನ್ನು ಇಹಾ ಎನ್, ನೆಲ್ಯಾಡಿ, ಕಡಬ, ತೃತೀಯ ಬಹುಮಾನ ಕಾವ್ಯ ಸಿ.ಎಚ್ ಚೆರ್ಕೋಡ್ಲು ಬದಿಯಡ್ಕ, ಚತುರ್ಥ ಬಹುಮಾನವನ್ನು ವೈಷ್ಣವ್ ಭಟ್ ಕುಂಟಿಕಾನ ಕಾಸರಗೋಡು, ಮತ್ತು ಪಂಚಮ ಬಹುಮಾನವನ್ನು ದೃತಿ ಕೆ.ಕಣ್ವತೀರ್ಥ ಎಂಬವರಿಗೆ ಲಭಿಸಿದೆ.







