HEALTH TIPS

ಕಳ್ಳರಿಗೆ ಉಳಿಗಾಲವಿಲ್ಲ!-ಕದಿಯುವವರ ವೀಡಿಯೋ ಸಹಿತ ಪೋನ್ ಕರೆ ಠಾಣೆ ಹಾಗೂ ಮನೆ ಮಾಲಿಕನಿಗೆ-ಆಧುನಿಕ ತಂತ್ರಜ್ಞಾನ ಆಧಾರಿತ ವ್ಯವಸ್ಥೆ ಬರುತ್ತಿದೆ-ಕುಟ್ಟಿಪುರಂ ನಲ್ಲಿ ಯಶಸ್ವಿ

     

        ಕುಟ್ಟಿಪುರಂ: ಕಳ್ಳರು ದೋಚಲು ಮನೆಗೆ ನುಗ್ಗಿದಾಗ ಪೆÇಲೀಸ್ ಠಾಣೆ ಮತ್ತು ಮನೆ ಮಾಲೀಕನಿಗೆ ಏಕಕಾಲದಲ್ಲಿ ಪೂಟೇಜ್‍ನೊಂದಿಗೆ ಪೋನ್ ಕರೆ ಬರುವಂತಹ ಅತ್ಯಾಧುನಿಕ ವ್ಯವಸ್ಥೆಯೊಂದು ಚಾಲ್ತಿಗೆ ಬಂದಿದೆ. ಮನೆಗಳಲ್ಲಿ ಯಾರೂ ಇಲ್ಲದ ವೇಳೆ ಮನೆಗಳ ಕಳ್ಳತನವನ್ನು ತಡೆಯಲು ಇಂತಹದೊಂದು ವ್ಯವಸ್ಥೆಗೆ ಕುಟ್ಟಿಪುರಂ ಪೆÇಲೀಸರ ಉಚಿತ ಭದ್ರತಾ ವ್ಯವಸ್ಥೆಯಾಗಿ ಇದು ಜಾರಿಗೊಂಡಿದೆ. 7 ದಿನಗಳವರೆಗೆ ಮನೆಗಳನ್ನು ಲಾಕ್ ಮಾಡಿದ ಕುಟುಂಬಗಳು ಈ ವ್ಯವಸ್ಥೆಯನ್ನು ಬಳಸಬಹುದು. ಕಳ್ಳರು ಮನೆಗೆ ನುಗ್ಗಿದಾಗ ಪೋನ್ ಕರೆ ಪೆÇಲೀಸ್ ಠಾಣೆ ಮತ್ತು ಮನೆಯೊಡಯರಿಗೆ  ಹೋಗುವ ವ್ಯವಸ್ಥೆ ಇದಾಗಿದೆ. 

        ಈ ಸಂದರ್ಭ ಮಾಹಿತಿಗಳು ಕಳ್ಳರ ವೀಡಿಯೋ ದೃಶ್ಯಗಳೊಂದಿಗೆ ನೇರ ಪ್ರಸಾರದ ರೂಪದಲ್ಲಿ  3 ಪೋನ್‍ಗಳಿಗೆ ವರ್ಗಾಯಿಸಲ್ಪಡುತ್ತದೆ.  ಕುಟ್ಟಿಪುರಂ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ 3 ಮನೆಗಳಲ್ಲಿ ಕಳ್ಳತನದ ಪ್ರಯತ್ನ ನಡೆದ ಸಂದರ್ಭದಲ್ಲಿ ಈ ಸೇವೆಯನ್ನು ಬಳಸಲಾಯಿತು. ಸಿಐ ಶಶೀಂದ್ರನ್ ಮೆಲೈಲ್ ಅವರ ಪರಿಕಲ್ಪನೆಯ ಪ್ರಕಾರ ಯೋಜನೆಯನ್ನು ಕಾರ್ಯಗತಗೊಳಿಸಲು 2 ಉಪಕರಣಗಳು ಸಿದ್ಧವಾಗಿವೆ.

        ಮನೆಗೆ ಬೀಗ ಜಡಿದು ಪ್ರಯಾಣಿಸುವ ಬಗ್ಗೆ ನೀವು ಪೆÇಲೀಸ್ ಠಾಣೆಗೆ ತಿಳಿಸಿದರೆ, ಪೆÇಲೀಸರು ನಿಮ್ಮ ಮನೆಗೆ ಆಗಮಿಸಿ ವಿಶೇಷ ಸಾಧನವನ್ನು ಸ್ಥಾಪಿಸುತ್ತಾರೆ. ಕಳ್ಳರು ಮನೆಯೊಳಗೆ ಪ್ರವೇಶಿಸಲು ಪ್ರಯತ್ನಿಸಿದರೆ, ಪೋನ್ ಕರೆ ಮೂಲಕ ಮಾಹಿತಿಯನ್ನು ಸ್ವೀಕರಿಸಲಾಗುತ್ತದೆ.

          ಇದಲ್ಲದೆ, ಅಲಾರಂ ಕಾರ್ಯನಿರ್ವಹಿಸುತ್ತದೆ. ಅಲಾರಂ ಅನ್ನು ಮನೆಯಲ್ಲಿ, ಹತ್ತಿರದ ಮನೆಯಲ್ಲಿ ಅಥವಾ ಪೆÇಲೀಸ್ ಠಾಣೆಯಲ್ಲಿ ಹೊಂದಿಸಬಹುದು. 13,000 ರೂ.ಗಳ ಮೌಲ್ಯದ ಉಪಕರಣಗಳನ್ನು ಅಗತ್ಯವಿರುವವರಿಗೆ ಪೂರೈಸಲು ಪೆÇಲೀಸರು ಪ್ರಯತ್ನಿಸುತ್ತಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries