ತಿರುವನಂತಪುರ: ಸ್ಥಳೀಯಾಡಳಿತ ಚುನಾವಣೆ ರಂಗೇರುತ್ತಿದೆ. ಈ ಬಾರಿ ಹಿಂದೆಂದಿಗಿಂತಲೂ ಹೆಚ್ಚು ಮಹಿಳಾ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇವರಲ್ಲಿ ವಿವಿಧ ವಯಸ್ಸಿನ ಮಹಿಳೆಯರಿದ್ದಾರೆ. ಪರಿಣಾಮವಾಗಿ ಮಹಿಳೆಯರ ಖಾಸಗಿ ಚಿತ್ರಗಳನ್ನು ಬಳಸಿ ತೀಟೆ ತೀರಿಸುವ ಸಾಧ್ಯತೆ ಇದೆ ಎನ್ನಲಾಗಿದ್ದು ಇಂತಹ ಕೃತ್ಯಗಳಲ್ಲಿ ತೊಡಗಿರುವವರಿಗೆ ಕಠಿಣ ಶಿಕ್ಷೆ ಕಾಯುತ್ತಿದೆ. ಈ ಸಂಬಂಧ ರಾಜ್ಯ ಪೆÇಲೀಸ್ ಮುಖ್ಯಸ್ಥರು ಆದೇಶ ಹೊರಡಿಸಿದ್ದಾರೆ.
ಡಿಸೆಂಬರ್‍ನಲ್ಲಿ ನಡೆಯಲಿರುವ ಸ್ಥಳೀಯಾಡಳಿತ ಚುನಾವಣೆಯಲ್ಲಿ ಸ್ಪರ್ಧಿಸುವ ಹಲವು ಮಹಿಳಾ ಅಭ್ಯರ್ಥಿಗಳ ಚಿತ್ರಗಳ ವೈಯಕ್ತಿಕ ಚಿತ್ರಗಳನ್ನು ಸಂಪಾದಿಸಲಾಗಿದೆ ಮತ್ತು ಅಶ್ಲೀಲ ಪದಗಳಲ್ಲಿ ಉಲ್ಲೇಖಿಸಿ ಪ್ರಚಾರ ಮಾಡಲಾಗುತ್ತಿದೆ ಎಂಬ ದೂರುಗಳು ಈಗಾಗಲೇ ಕೇಳಿಬರುತ್ತಿದೆ. ಅಂತಹ ದೂರುಗಳು ಬಂದರೆ, ಕೆಪಿ(ಕೇರಳ ಪೋಲೀಸ್) ಕಾಯ್ದೆಯ ಸೆಕ್ಷನ್ 120 (6) ರ ಅಡಿಯಲ್ಲಿ ಐಟಿ ಕಾಯ್ದೆಯ ಸೆಕ್ಷನ್ 66, 66 (ಸಿ), 67, 67 (ಎ) ಮತ್ತು ಐಪಿಸಿಯ ಸೆಕ್ಷನ್ 354 (ಎ), 354 (ಡಿ), 465, 469 ಮತ್ತು 509 ರ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸುವಂತೆ ಡಿಜಿಪಿ ಈಗಾಗಲೇ ಜಿಲ್ಲಾ ಪೆÇಲೀಸ್ ಮುಖ್ಯಸ್ಥರಿಗೆ ನಿರ್ದೇಶನ ನೀಡಿದ್ದಾರೆ.





