HEALTH TIPS

ಸಾಮಾಜಿಕ ಜಾಲತಾಣಗಳ ನಿಯಂತ್ರಣಕ್ಕೆ ಪ್ರತ್ಯೇಕ ಕಾನೂನು: 'ಸುಪ್ರೀಂ'ಗೆ ಪಿಐಎಲ್

             ನವದೆಹಲಿ: ಫೇಸ್‌ಬುಕ್‌, ಟ್ವಿಟರ್‌, ವಾಟ್ಸ್‌ಆಯಪ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳ ನಿಯಂತ್ರಣಕ್ಕೆ ಪ್ರತ್ಯೇಕ ಕಾನೂನು ರಚಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ, ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದು(ಪಿಐಎಲ್‌) ಸಲ್ಲಿಕೆಯಾಗಿದೆ.

           ದ್ವೇಷ ಭಾಷಣ ಹಾಗೂ ನಕಲಿ ಸುದ್ದಿಗಳ ಹರಡುವಿಕೆಗೆ ಆಯಾ ಸಾಮಾಜಿಕ ಜಾಲತಾಣಗಳನ್ನೇ ಜವಾಬ್ದಾರಿಯನ್ನಾಗಿಸಲು ಈ ಕಾನೂನು ಅಗತ್ಯವಾಗಿದೆ ಎಂದು ಅರ್ಜಿದಾರ, ವಕೀಲ ವಿನೀತ್‌ ಜಿಂದಾಲ್‌ ಆಗ್ರಹಿಸಿದ್ದಾರೆ. ಜೊತೆಗೆ ದ್ವೇಷ ಭಾಷಣ ಹಾಗೂ ಸುಳ್ಳು ಸುದ್ದಿಗಳನ್ನು ನಿಗದಿತ ಅವಧಿಯೊಳಗೆ ಸಾಮಾಜಿಕ ಜಾಲತಾಣಗಳಿಂದ ತೆಗೆದುಹಾಕುವ ವ್ಯವಸ್ಥೆಯನ್ನೂ ಕೇಂದ್ರ ಸರ್ಕಾರ ರೂಪಿಸಬೇಕು ಎಂದು ಜಿಂದಾಲ್‌ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

          'ಇತ್ತೀಚೆಗೆ ನಡೆದ ದೆಹಲಿ ಗಲಭೆ, ಪುಣೆಯಲ್ಲಿ 2014ರಲ್ಲಿ ನಡೆದ ಕೋಮುಗಲಭೆ, 2013ರಲ್ಲಿ ಮುಜಾಫರನಗರದಲ್ಲಿ ನಡೆದ ಗಲಭೆಯಲ್ಲಿ ಸಾಮಾಜಿಕ ಜಾಲತಾಣಗಳು ಗಲಭೆ ಪ್ರಚೋದಿಸುವಲ್ಲಿ ಪಾತ್ರವಹಿಸಿದ್ದವು. ದೇಶದಲ್ಲಿ ದ್ವೇಷಭಾಷಣಗಳಿಗೆ ಸಾಮಾಜಿಕ ಜಾಲತಾಣಗಳನ್ನು ನೇರವಾಗಿ ಹೊಣೆಯಾಗಿಸುವ ಅವಶ್ಯಕತೆ ಇದೆ. ಆಸ್ಟ್ರೇಲಿಯಾದಲ್ಲಿ ತಂತ್ರಜ್ಞಾನ ಕಂಪನಿಗಳು, ಮಾಧ್ಯಮ ಕಂಪನಿಗಳು ಹಾಗೂ ಕಾನೂನು ತಜ್ಞರ ಟೀಕೆಯ ಹೊರತಾಗಿಯೂ ಸಾಮಾಜಿಕ ಜಾಲತಾಣಗಳಲ್ಲಿನ ಹಿಂಸಾತ್ಮಕ ವಿಡಿಯೊಗಳನ್ನು ತೆಗೆದುಹಾಕುವ ಕಾನೂನನ್ನು ಅಲ್ಲಿನ ಸಂಸತ್‌ ಜಾರಿಗೊಳಿಸಿದೆ' ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.


ಸಮರಸ ಸುದ್ದಿಯ ನವೀನ ಮಾದರಿಯ ಯೂಟ್ಯೂಬ್ ಚಾನೆಲ್ ಗೆ ಓದುಗರ ಪ್ರತಿಕ್ರಿಯೆ ಮಹತ್ವಪೂರ್ಣದ್ದಾಗಿದ್ದು ಚಾನೆಲ್ ಚಂದಾದಾರರಾಗಿ (SUBSCRIBE) ಬೆಲ್ ಬಟನ್ ಅನುಮೋದಿಸುವ ಮೂಲಕ ನಮ್ಮನ್ನು ಪ್ರೋತ್ಸಾಹಿಸಬೇಕೆಂದು ವಿನಂತಿ.
ಸಮರಸ ಸುದ್ದಿ ಬಳಗ

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries