ಮಂಜೇಶ್ವರ: ಮೂಲತಃ ಮಂಗಳೂರು ನಿವಾಸಿ ಇದೀಗ ಬೆಂಗಳೂರಿನ ಬನಶಂಕರಿಯಲ್ಲಿ ವಾಸಿಸುತ್ತಿರುವ ಆನಂದ್ ಎಂಬವರು ಮೂತ್ರಪಿಂಡದ ಚಿಕಿತ್ಸೆಗಾಗಿ ಕೆಂಗೇರಿಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ಇವರ ಚಿಕಿತ್ಸೆಗೆ ಮಂಜೇಶ್ವರದ ಶ್ರೀ ಕಟೀಲೇಶ್ವರೀ ಚ್ಯಾರಿಟೇಬಲ್ ಟ್ರಸ್ಟ್ ವತಿಯಿಂದ ಸಹಾಯ ಹಸ್ತ ನೀಡಲಾಯಿತು. ಸಹಾಯ ಹಸ್ತದ ಮೊತ್ತವನ್ನ ಶ್ರೀ ಕಟೀಲೇಶ್ವರೀ ಚ್ಯಾರಿಟೇಬಲ್ ಟ್ರಸ್ಟ್ ನ ಸದಸ್ಯರೂ, ತುಳು ಸಂಘಟಕರೂ, ಬೆಂಗಳೂರಿನ ಸೃಷ್ಟಿ ಕಲಾಭೂಮಿಯ ಸಂಸ್ಥಾಪಕ ಮಂಜುನಾಥ ಅಡಪ ಸಂಕಬೈಲು ಅವರ ನೇತೃತ್ವದಲ್ಲಿ ಯುವ ಸಾಮಾಜಿಕ ಮುಂದಾಳು, ಉದ್ಯಮಿ ನಾಗರಾಜ್ ಆಚಾರ್ಯ ಕಿನ್ನಿಗೋಳಿ ಯವರು ಆನಂದ್ ರವರಿಗೆ ಭಾನುವಾರ ಹಸ್ತಾಂತರಿಸಿದರು.
ಚಲನಚಿತ್ರ ರಂಗದಲ್ಲಿ ಸೆಟ್ಟಿಂಗ್ಸ್ ನಲ್ಲಿ ದುಡಿಯುತ್ತಿದ್ದ ಆನಂದ್ ರಿಗೆ ಇತ್ತೀಚೆಗೆ ಅಸೌಖ್ಯ ಕಾಣಿಸಿಕೊಂಡಿತ್ತು. ಲಾಕ್ ಡೌನ್ ಬಳಿಕ ಕೆಲಸವಿಲ್ಲದೆ, ಇತ್ತ ಕಡೆ ಮನೆ ಬಾಡಿಗೆ, ಮನೆ ಖರ್ಚು ಕೂಡಾ ನಿಭಾಯಿಸಲು ಅಸಾಧ್ಯವಾಗಿತ್ತು. ಈ ಬಗ್ಗೆ ಇವರ ಸಂಕಷ್ಟಮಯ ಜೀವನವನ್ನರಿತು ಮಂಜುನಾಥ ಅಡಪ್ಪರ ನೇತೃತ್ವದಲ್ಲಿ ಶ್ರೀ ಕಟೀಲೇಶ್ವರೀ ಚ್ಯಾರಿಟೇಬಲ್ ಟ್ರಸ್ಟ್ ನ ಸದಸ್ಯರಿಂದ ಸಂಗ್ರಹಿಸಿದ ಈ ತಿಂಗಳ 13 ನೇ ಯೋಜನೆ ಮೊತ್ತವನ್ನು ವಿತರಿಸಲಾಯಿತು.





